More

    ಪಾಲಕರೇ ಎಚ್ಚರ! ಪೌರಾಣಿಕ ಧಾರಾವಾಹಿ ನೋಡುವ ಮಕ್ಕಳು ಹೀಗೆಲ್ಲಾ ಮಾಡ್ತಿದ್ದಾರೆ…

    ನವದೆಹಲಿ: ಲಾಕ್​ಡೌನ್​ ಸಮಯದಲ್ಲಿ ಪ್ರಸಾರ ಮಾಡಿದ್ದ ರಾಮಾಯಣ ಹಾಗೂ ಈಗ ಪ್ರಸಾರ ಆಗುತ್ತಿರುವ ಮಹಾಭಾರತ ವಿಶ್ವ ದಾಖಲೆಯನ್ನೇ ಬರೆದುಬಿಟ್ಟಿತು. 80-90ರ ದಶಕದ ಈ ಧಾರಾವಾಹಿವನ್ನು ದೇಶದ ಕೋಟಿ ಕೋಟಿ ಜನರು ಕಣ್ತುಂಬಿಸಿಕೊಂಡರು.

    ಮೂರು ದಶಕಗಳ ಬಳಿಕ ಕೂಡ ರಾಮಾಯಣ ಧಾರಾವಾಹಿ ಕಡೆಗಿನ ಸೆಳೆತ ಎಳ್ಳಷ್ಟೂ ಕಡಿಮೆಯಾಗಿಲ್ಲ. ಇದು ತುಂಬಾ ಸಂತಸದ ವಿಷಯ. ಜತೆಗೆ, ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ಮನೆಹಾಳು ಮಾಡುವ ಧಾರಾವಾಹಿಗಳಿಂದ ದೊಡ್ಡವರ ಜತೆ ಮಕ್ಕಳೂ ಮುಕ್ತಿ ಪಡೆದು, ನಮ್ಮ ಸಂಸ್ಕೃತಿಯ ಕಡೆಗೆ ಗಮನ ಹರಿಸಿರುವುದು ತುಂಬಾ ಒಳ್ಳೆಯ ಸುದ್ದಿ.

    ಇದನ್ನೂ ಓದಿ:  ಲಾಕ್​ಡೌನ್​ ಸಮಯದಲ್ಲಿ ಕದ್ದುಮುಚ್ಚಿ ಮಾಡೋದೇನು? ಇಲ್ಲಿದೆ ಬೆಚ್ಚಿಬೀಳಿಸೋ ವರದಿ

    ಆದರೆ ಇದರ ಬೆನ್ನಲ್ಲೇ ಇದೀಗ ಆಘಾತಕಾರಿ ಸುದ್ದಿಯೂ ಬಂದಿದೆ. ಬಹುಶಃ ನಿಮಗೆ ನೆನಪಿರಬಹುದು. 30 ವರ್ಷಗಳ ಹಿಂದೆ ರಾಮಾಯಣ, ಮಹಾಭಾರತ ಬರುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಇರುವ ಯುದ್ಧದ ದೃಶ್ಯಗಳಿಂದ ಮಕ್ಕಳು ಉತ್ತೇಜಿತರಾಗಿ ಬಿಲ್ಲು ಬಾಣಗಳನ್ನು ತಯಾರಿಸಿಕೊಂಡು ಪರಸ್ಪರ ಬಾಣ ಬಿಟ್ಟು ಕಣ್ಣುಗಳಿಗೆ ಹಾನಿಮಾಡಿಕೊಂಡಿದ್ದರು.

    ಮಕ್ಕಳು ಎಂದಿಗೂ ಮಕ್ಕಳೇ ಅಲ್ಲವೆ? ಈಗಲೇ ಅದೇ ಘಟನೆಗಳು ಭಾರತದ ಅನೇಕ ಕಡೆಗಳಲ್ಲಿ ವರದಿಯಾಗಿವೆ. ಬಿಲ್ಲು ಬಾಣಗಳನ್ನು ತಯಾರಿಸಲು ಪೊರಕೆ ಕಡ್ಡಿಗಳನ್ನು ಬಳಸುತ್ತಿರುವ ಮಕ್ಕಳು ಅದರಿಂದ ಧಾರಾವಾಹಿಯಲ್ಲಿ ತೋರಿಸುವಂತೆ ಹೊಡೆದಾಡುತ್ತ ಇರುವ ಕಾರಣ, ಅನೇಕ ಮಕ್ಕಳು ತಮ್ಮ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಕೆಲವು ಮಕ್ಕಳಿಗೆ ಈ ಪೊರಕೆಗಳು ಕಣ್ಣಿನಲ್ಲಿಯೇ ನೆಟ್ಟಿಬಿಟ್ಟಿವೆ.

    ಇದನ್ನೂ ಓದಿ: ಒಮ್ಮೆ ಪಾಸಿಟಿವ್​, ಇನ್ನೊಮ್ಮೆ ನೆಗೆಟಿವ್​, ತುಂಬು ಗರ್ಭಿಣಿ ಸ್ಥಿತಿ ಅಯೋಮಯ!
    ಇದೇ ರೀತಿಯ ಒಂದು ಪ್ರಕರಣದ ಏಪ್ರಿಲ್ 20ರಂದು ದಾಖಲಾಗಿದೆ. ರಾಂಚಿಯ 10 ವರ್ಷದ ಮಗುವಿನ ಕಣ್ಣಿಗೆ ಆತನ ಸಹೋದರ ಕಡ್ಡಿಯಿಂದ ಚುಚ್ಚಿದ ಪರಿಣಾಮ ಕಣ್ಣಿಗೆ ಈಗ ಶಸ್ತ್ರಚಿಕಿತ್ಸೆ ಮಾಡಬೇಕಾಗಿದೆ. ಹೈದರಾಬಾದ್​ ಮತ್ತು ಅದರ ಸುತ್ತುಮುತ್ತಲಿನ ಸುಮಾರು 20 ಮಕ್ಕಳು ಇದೇ ರೀತಿ ಕಣ್ಣಿಗೆ ಹಾನಿ ಮಾಡಿಕೊಂಡಿರುವ ವರದಿಯಾಗಿದೆ.

    ದೆಹಲಿಯಲ್ಲಿಯೂ ಇಂಥ ಪ್ರಕರಣಗಳು ಬೆಳಕಿಗೆ ಬಂದಿವೆ. ಇದಾಗಲೇ 40ಕ್ಕೂ ಅಧಿಕ ಮಕ್ಕಳು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರೆ, ಹಲವಾರು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

    ರಾಮಾಯಣ, ಮಹಾಭಾರತ, ಶ್ರೀಕೃಷ್ಣ ಇಂಥ ಧಾರಾವಾಹಿಗಳು ಮಕ್ಕಳಲ್ಲಿ ನಮ್ಮ ಸಂಸ್ಕೃತಿಯನ್ನು ತಿಳಿಸುತ್ತವೆ ನಿಜ. ಅದು ನೋಡುವುದರಿಂದ ಪೌರಾಣಿಕ ಕಥನಗಳೂ ಮನನವಾಗುತ್ತವೆ ಎನ್ನುವುದೂ ನಿಜ. ಆದರೆ ಪಾಲಕರು ತಮ್ಮ ಮಕ್ಕಳ ಮೇಲೆ ಕಾಳಜಿ ವಹಿಸುವುದು, ಅವರ ಮೇಲೆ ನಿಗಾ ಇಡುವುದು ತುಂಬಾ ಅನಿವಾರ್ಯವಾಗಿದೆ.

    ಇದನ್ನೂ ಓದಿ: ಇಬ್ಬರು ಹೆಂಡಿರ ನಡುವೆ ತಬ್ಬಿಬ್ಬಾದ ತಬ್ಲಿಘಿ- ಸುಮ್ಮನಿರದೇ ಇರುವೆ ಬಿಟ್ಟುಕೊಂಡವ ಈಗ ಏನಾದ ನೋಡಿ!
    ಧಾರಾವಾಹಿ ನೋಡುವ ಸಮಯದಲ್ಲಿಯೇ, ಬಿಲ್ಲು ಬಾಣಗಳಿಂದ ಆಗುವ ಅನಾಹುತಗಳು ಹಾಗೂ ಈಗಾಗಲೇ ಸಂಭವಿಸಿರುವ ಅವಘಡಗಳ ಬಗ್ಗೆ ಮಕ್ಕಳಿಗೆ ತಿಳಿಹೇಳುವುದು ಪಾಲಕರ ಕರ್ತವ್ಯವಾಗಿದೆ. ಹಿಂದೆ ಶಕ್ತಿಮಾನ್​ ಧಾರಾವಾಹಿ ಪ್ರಸಾರವಾಗುತ್ತಿದ್ದಾಗ ಅದನ್ನು ಅನುಕರಿಸಲು ಹೋಗಿ ಮಕ್ಕಳು ಜೀವವನ್ನೂ ಕಳೆದುಕೊಂಡಿದ್ದಾರೆ. ಇಂಥ ದುರಂತ ಆಗದಂತೆ ಮಕ್ಕಳಿಗೆ ಸರಿಯಾದ ತಿಳಿವಳಿಕೆ ಹೇಳುವುದು ಪಾಲಕರ ಕರ್ತವ್ಯವಾಗಿದೆ ಎನ್ನುತ್ತಾರೆ ನೇತ್ರ ತಜ್ಱ ಡಾ. ಬಿ.ಪಿ.ಕಶ್ಯಪ್​.

    ಈ ಧಾರಾವಾಹಿಗಳ ಆರಂಭವಾಗುವ ವಿಷಯ ತಿಳಿಯುತ್ತಲೇ ಹಿಂದಿನ ಅನಾಹುತಗಳನ್ನು ಗಮನದಲ್ಲಿ ಇಟ್ಟುಕೊಂಡು, ಧಾರಾವಾಹಿ ಅನುಕರಣೆ ಮಾಡದಂತೆ ಸಂದೇಶ ಬರೆಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆದರೆ ಏನೇ ಅಲ್ಲಿ ಎಚ್ಚರಿಕೆ ಕೊಟ್ಟರೂ ಪಾಲಕರು ತಮ್ಮ ಮಕ್ಕಳ ಮೇಲೆ ನಿಗಾ ವಹಿಸಬೇಕು ಎನ್ನುತ್ತಾರೆ ಡಾ.ಕಶ್ಯಪ್​. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts