More

    ಈ ರಾಜಕಾರಣಿಯ ಹೊಟ್ಟೆಯಲ್ಲಿ ಕತ್ತರಿ ಬಿಟ್ಟ ವೈದ್ಯರು!

    ಬ್ರೆಜಿಲ್​: ಶಸ್ತ್ರಚಿಕಿತ್ಸೆ ಮಾಡುವಾಗ ಆಗುವ ಅತೀ ಚಿಕ್ಕ ತಪ್ಪು ಕೂಡ ರೋಗಿಯಲ್ಲಿ ಆಘಾತಕಾರಿ ಪರಿಣಾಮಗಳನ್ನು ಉಂಟುಮಾಡಬಹುದು. ಅದೇನೇ ಇದ್ದರೂ, ಶಸ್ತ್ರಚಿಕಿತ್ಸಕರು ರೋಗಿಯ ಹೊಟ್ಟೆಯೊಳಗೆ ಆಕಸ್ಮಿಕವಾಗಿ ಕತ್ತರಿಗಳನ್ನು ಬಿಟ್ಟಿರುವುದಕ್ಕೆ ಭಾರತದಲ್ಲಿ ಹಲವಾರು ನಿದರ್ಶನಗಳಿವೆ.

    ಆದರೆ ಬ್ರೆಜಿಲ್‌ನಲ್ಲಿ ಶಸ್ತ್ರಚಿಕಿತ್ಸೆ ಮಾಡುವಾಗ ಶಸ್ತ್ರಚಿಕಿತ್ಸಕರು ಆಕಸ್ಮಿಕವಾಗಿ ಸ್ಥಳೀಯ ರಾಜಕಾರಣಿಯೊಬ್ಬರ ದೇಹದೊಳಗೆ ಕತ್ತರಿ ಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

    ಈ ರಾಜಕಾರಣಿಯ ಹೊಟ್ಟೆಯಲ್ಲಿ ಕತ್ತರಿ ಬಿಟ್ಟ ವೈದ್ಯರು!

     

    ಮ್ಯಾಟೊ ಗ್ರೊಸೊದ ಮಧ್ಯ-ಪಶ್ಚಿಮ ಪ್ರದೇಶದ ನೋವಾ ಸಾಂಟಾ ಹೆಲೆನಾ ಪುರಸಭೆಯನ್ನು ಪ್ರತಿನಿಧಿಸುವ ಸ್ಥಳೀಯ ಕೌನ್ಸಿಲ್‌ಮನ್ ಕ್ಲೇಟನ್ ಜೋಸ್ ಝನಾಟ್ಟಾ ಅವರು ಜನವರಿ 20ರಂದು ಗೆಡ್ಡೆಯನ್ನು ತೆಗೆಯುವ ಸರ್ಜರಿಗೆ ಒಳಗಾಗಿದ್ದರು. ಸರ್ಜರಿ ನಡೆದ ಆರು ದಿನಗಳ ನಂತರ ಈ ರಾಜಕಾರಣಿಗೆ ಅನಾರೋಗ್ಯ ಉಂಟಾಗಿದ್ದು ಏನೋ ಸಮಸ್ಯೆ ಇದೆ ಎಂದು ಎನಿಸಿದೆ.

    ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಆಸ್ಪತ್ರೆಗೆ ತೆರಳಿದ್ದ ಅವರು ಸಿಟಿ ಸ್ಕ್ಯಾನ್​ಗೆ ಒಳಗಾದರು. ಸಿಟಿ ಸ್ಕ್ಯಾನ್ ಮಾಡಿದಾಗ ಅವರ ಕರುಳಿನಲ್ಲಿ ಒಂದು ದೊಡ್ಡ ಕತ್ತರಿ ಕಂಡುಬಂದಿದೆ.

    ಕ್ಲೇಟನ್ ಜೋಸ್, ಜನವರಿ 26ರಂದು ತಮ್ಮ ಹೊಟ್ಟೆಯೊಳಗೆ ವೈದ್ಯರು ಮರೆತಿದ್ದ ಕತ್ತರಿಗಳನ್ನು ತೆಗೆಸಿಕೊಳ್ಳಲು ಮತ್ತೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾದರು. ಸರ್ಜರಿ ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts