More

    ಕೆಳ ಹಂತದ ಹುದ್ದೆಗಳನ್ನು ಬೇಗನೆ ಭರ್ತಿ ಮಾಡಲ್ಲ ಎಂದು ಬಿಬಿಎಂಪಿ ನೌಕರರ ಸಾಮೂಹಿಕ ರಜೆ..!

    ಬೆಂಗಳೂರು: ಬಿಬಿಎಂಪಿ ಸಿಬ್ಬಂದಿಗಳು ನಾಳೆ ಸಾಮೂಹಿಕವಾಗಿ ರಜೆ ಹಾಕಲಿದ್ದು ಈ ಬಗ್ಗೆ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಹೇಳಿಕೆ ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಅಮೃತ್​ ರಾಜ್​ ‘ಬಿಬಿಎಂಪಿಯ ಎಲ್ಲ ಸಿಬ್ಬಂದಿಗಳು ನಾಳೆ ಸಾಮೂಹಿಕ ರಜೆ ಹಾಕಲಿದ್ದಾರೆ. ಕೆಲಸ ಕಾರ್ಯಗಳನ್ನು ಬಂದ್ ಮಾಡಿ ಪಾಲಿಕೆ ಅಂಗಳದಲ್ಲಿ ಮುಷ್ಕರ ನಡೆಸಲಿದ್ದೇವೆ. ಪಾಲಿಕೆ ಸಿಬ್ಬಂದಿಗಳಿಗೆ ಚುನಾವಣೆ ಹಿನ್ನೆಲೆ ಒತ್ತಡ ಹೆಚ್ಚಾಗಿದೆ. ನೌಕರರು ಚುನಾವಣಾ ಕೆಲಸ ಕಾರ್ಯಗಳಲ್ಲಿ ನಿರತರಾಗಿ ಇರುವುದರಿಂದ ಕಂದಾಯ ಇಲಾಖೆ ಕೆಲಸಗಳನ್ನು ಕಡಿಮೆ ಮಾಡಬೇಕು.

    ಕೆಳ ಹಂತದ ನೌಕರರ ಹುದ್ದೆಗಳು ಖಾಲಿ ಇದ್ದು ಖಾಲಿ ಇರುವ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡ ಬೇಕು. ಸರ್ಕಾರ ಇಂಜಿನಿಯರ್ ಹುದ್ದೆಗಳು ಖಾಲಿ ಆದ್ರೆ 24 ಗಂಟೆಗಳಲ್ಲಿ ಭರ್ತಿ ಮಾಡುವ ಕಡೆಗೆ ಗಮನ ನೀಡುತ್ತದೆ. ಆದರೆ ಕೆಳ ಹಂತದ ಹುದ್ದೆಗಳನ್ನು ತುಂಬುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು ನೌಕರರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಬೇಕು. ಪ್ರಮುಖವಾಗಿ ಆರೋಗ್ಯ ವಿಮೆ ಭರ್ತಿ ಮಾಡಬೇಕು. ಮಣಿಪಾಲ್ ಆಸ್ಪತ್ರೆ ಸಮೂಹಗಳಲ್ಲಿ ಬಿಬಿಎಂಪಿ ನೌಕರರಿಗೆ ವೈದ್ಯಕೀಯ ಸೌಲಭ್ಯ ನೀಡುತ್ತಿಲ್ಲ. ಮೂರು ತಿಂಗಳುಗಳಿಂದ ಕೋಟ್ಯಾಂತರ ರೂಪಾಯಿ ಆರೋಗ್ಯ ಮಿಮೆ ಬಾಕಿ ಉಳಿಸಿಕೊಂಡಿದ್ದು ಯಾವ ಆಸ್ಪತ್ರೆಗಳು ಬಿಬಿಎಂಪಿ ನೌಕರರಿಗೆ ಚಿಕಿತ್ಸೆ ನೀಡಲು ಸಿದ್ದವಿಲ್ಲ.

    ಎರಡು ಮೂರು ವರ್ಷಗಳಿಂದ ಕೆಂಪೇಗೌಡ ದಿನಾಚರಣೆ ಹಾಗೂ ಅಂಬೇಡ್ಕರ್ ದಿನಾಚರಣೆ ಮಾಡದಿರೋದು ಬೆಂಗಳೂರು ಪಾಲಿಕೆಗೆ ಅವಮಾನ. ಹೀಗಾಗಿ ತಕ್ಷಣವೇ ಮುಖ್ಯಮಂತ್ರಿಗಳು ಚುನಾವಣೆಗೆ ಮುನ್ನ ಕೆಂಪೇಗೌಡ ದಿನಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಬೇಕು. ನಾಳೆ ಬೆಳಗ್ಗೆ 9 ಗಂಟೆಯಿಂದ ಬಿಬಿಎಂಪಿ ಕಚೇರಿ ಅಂಗಳದಲ್ಲಿ ಬೃಹತ್ ಮುಷ್ಕರ ನಡೆಯಲಿದೆ’ ಎಂದು ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts