More

    ಆಸ್ಪತ್ರೆಯಲ್ಲಿ ರೌಂಡ್ಸ್​ನಲ್ಲಿದ್ದಾಗಲೇ ಡಾಕ್ಟರ್​ಗೆ ಹೃದಯಾಘಾತ; ಕುಸಿದುಬಿದ್ದು 30 ವರ್ಷದ ವೈದ್ಯರ ಸಾವು

    ನವದೆಹಲಿ: ಇಪ್ಪತ್ಮೂರು ವರ್ಷದ ವ್ಯಕ್ತಿ ಮೆಡಿಕಲ್ ಶಾಪ್​ನಲ್ಲಿ ಔಷಧ ಪಡೆಯುವಾಗಲೇ ಹೃದಯಾಘಾತಕ್ಕೀಡಾದ ವಿಡಿಯೋ ವೈರಲ್​ ಆದ ಬೆನ್ನಿಗೇ ವೈದ್ಯರೊಬ್ಬರು ರೌಂಡ್ಸ್​ನಲ್ಲಿದ್ದಾಗಲೇ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾದ ಪ್ರಕರಣವೊಂದು ಬೆಳಕಿಗೆ ಬಂದಿದೆ.

    ದೆಹಲಿಯ ಡಾ.ರಾಮ್​ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಡಾ.ಸಾಹಿಲ್ ಮಷಾಲ್ (30) ಸಾವಿಗೀಡಾದ ವ್ಯಕ್ತಿ. ಲೋಹಿಯಾ ಆಸ್ಪತ್ರೆಯ ಪೀಡಿಯಾಟ್ರಿಕ್​ ವಿಭಾಗದಲ್ಲಿ ರೆಸಿಡೆಂಟ್ ಡಾಕ್ಟರ್ ಆಗಿರುವ ಸಾಹಿಲ್ ಬುಧವಾರ ರೌಂಡ್ಸ್​ನಲ್ಲಿ ಇದ್ದಾಗಲೇ ಎದೆನೋವು ಕಾಣಿಸಿಕೊಂಡಿದ್ದು, ಕುಸಿದು ಬಿದ್ದು ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಮೆಡಿಕಲ್ಸ್ ಮುಂಭಾಗ ಎದೆ ಹಿಡಿದುಕೊಂಡೇ ಪ್ರಾಣ ಬಿಟ್ಟ; ಔಷಧ ಪಡೆದು ಹಣ ನೀಡುವಾಗಲೇ ಹೃದಯಾಘಾತ!

    ಶಸ್ತ್ರಚಿಕಿತ್ಸೆ ನಿಗದಿಯಾಗಿದ್ದ ಮಗುವನ್ನು ರೌಂಡ್ಸ್ ವೇಳೆ ಪರಿಶೀಲನೆ ಮಾಡುತ್ತಿದ್ದಾಗ ಡಾ.ಸಾಹಿಲ್​ಗೆ ಎದೆನೋವು ಕಾಣಿಸಿಕೊಂಡಿತ್ತು. ಅದಾಗಿ ಕೆಲವೇ ಕ್ಷಣಗಳಲ್ಲಿ ಅವರು ಕುಸಿದು ಬಿದ್ದಿದ್ದರು. ಇತರ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದರೂ ಪ್ರಯೋಜನವಾಗಿರಲಿಲ್ಲ. ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಸಾಹಿಲ್​ಗೆ ಹೃದಯದ ಸಮಸ್ಯೆಯ ಯಾವುದೇ ಹಿನ್ನೆಲೆಯೂ ಇರಲಿಲ್ಲ ಎಂದು ಸಹೋದ್ಯೋಗಿ ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.

    ಪಠಾಣ್​ಕೋಟ್ ಮೂಲದ ಈತ ಅಮೃತಸರದಲ್ಲಿ ಎಂಡಿ, ಎಂಬಿಬಿಎಸ್ ವ್ಯಾಸಂಗ ಮಾಡಿದ್ದು, 2020ರಲ್ಲಿ ಲೋಹಿಯಾ ಆಸ್ಪತ್ರೆಯ ಉದ್ಯೋಗಿಯಾಗಿ ಸೇರಿಕೊಂಡಿದ್ದರು.

    ಮದುವೆ ಆಗಿಲ್ಲ ಅಂದ್ರೆ ಮನೆ ಖಾಲಿ ಮಾಡಿ: ಬಾಡಿಗೆದಾರರಿಗೆ ವಿಚಿತ್ರ ಎಚ್ಚರಿಕೆ

    ಸ್ಮಶಾನದ ಹಾದಿಯಲ್ಲಿ ಕಣ್ಣು ತೆರೆದ ‘ಶವ’!; ಮಹಿಳೆ ಮೃತಪಟ್ಟಳು ಎಂದು ವೈದ್ಯರು ದೃಢೀಕರಿಸಿದ್ದರೂ ಸಂಭವಿಸಿದ ಅಚ್ಚರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts