More

    ಕರೊನಾ ಪರೀಕ್ಷೆ ವರದಿ ನೀಡಲು ಲಂಚ ಕೇಳಿದ ವೈದ್ಯ… ವ್ಯವಹಾರ ಕುದುರಿದ ವೇಳೆ ಏನಾಯ್ತು ಗೊತ್ತೆ ?!

    ಪುಣೆ: ಕರೊನಾ ಮಹಾಮಾರಿ ತಂದಿರುವ ಸಂಕಟದಲ್ಲಿ ಎಷ್ಟೋ ವೈದ್ಯರು ಶಕ್ತಿ ಮೀರಿ ಸಾರ್ವಜನಿಕರ ಸೇವೆ ಮಾಡುತ್ತಿದ್ದಾರೆ. ಹಾಗಾಗಿ ಅವರನ್ನು ಕರೊನಾ ವಾರಿಯರ್ಸ್ ಎಂದು ಕರೆದು ಜಗತ್ತೇ ಗೌರವ ನೀಡುತ್ತಿದೆ. ಆದರೆ ಇದೇ ಕರೊನಾ ಪರಿಸ್ಥಿತಿಯನ್ನು ಬಡ ಕಾರ್ಮಿಕರಿಂದ ದುಡ್ಡು ಕೀಳಲು ಇಲ್ಲೊಬ್ಬ ಸರ್ಕಾರಿ ವೈದ್ಯ ಬಳಸಿದ್ದಾರೆ.

    ಮಹಾರಾಷ್ಟ್ರದ ಪುಣೆ ಜಿಲ್ಲೆಯ ದೌಂಡ್​ ಪಟ್ಟಣದ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಡಾ.ಮಿಲಿಂದ್ ದಾಮೋದರ್ ಕಾಂಬ್ಳೆ ಎನ್ನುವವರೇ ಆ ವೈದ್ಯ. ಪುಣೆಯ ಕೋವಿಡ್​-19 ಪರೀಕ್ಷಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ವೈದ್ಯಾಧಿಕಾರಿಯು 19 ಕಾರ್ಮಿಕರ ಕರೊನಾ ಪರೀಕ್ಷಾ ವರದಿಯನ್ನು ನೀಡಲು ಲಂಚ ಕೇಳಿದ ಆರೋಪ ಎದುರಿಸುತ್ತಿದ್ದಾರೆ.

    ಇದನ್ನೂ ಓದಿ: ಪಾಕಿಸ್ತಾನದಲ್ಲೊಬ್ಬಳು ಐಶ್ವರ್ಯ ರೈ ಹೋಲುವ ಚೆಲುವೆ!

    ಪುಣೆಯ ಆ್ಯಂಟಿ ಕರಪ್ಷನ್ ಬ್ಯೂರೋ(ಎಸಿಬಿ)ಗೆ ಇತ್ತೀಚೆಗೆ ಕಾರ್ಖಾನೆ ಮಾಲೀಕರೊಬ್ಬರು ದೂರು ನೀಡಿದ್ದರು. ತಮ್ಮ 19 ಕಾರ್ಮಿಕರಿಗೆ ರಾಪಿಡ್ ಆ್ಯಂಟಿಜನ್ ಕೋವಿಡ್ 19 ಪರೀಕ್ಷೆಯನ್ನು ನಡೆಸಲಾಗಿದ್ದು, ಅದರ ವರದಿಯನ್ನು ನೀಡಲು ಸರ್ಕಾರಿ ವೈದ್ಯರು ತಲಾ 100 ರೂ.ಗಳ ಲಂಚ ಕೇಳುತ್ತಿದ್ದಾರೆ ಎಂದು ಆರೋಪಿಸಿದ್ದರು.

    ಈ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಹಿಡಿಯಲು ಬಲೆ ಬೀಸಿದ ಎಸಿಬಿ, ಮಾಲೀಕರಿಗೆ ಅಧಿಕಾರಿಯನ್ನು ಭೇಟಿ ಮಾಡಲು ಹೇಳಿತು. ಅಧಿಕಾರಿಯು ಲಂಚದ ಹಣವನ್ನು ರೂ.1,900 ದಿಂದ ರೂ.1,500 ಕ್ಕೆ ಇಳಿಸಿ ವ್ಯವಹಾರ ಕುದುರಿಸಿದ ವೇಳೆಗೆ ಎಸಿಬಿ ಅಧಿಕಾರಿಗಳು ಎಂಟ್ರಿ ಕೊಟ್ಟರು. ಈಗ ಮೂವತ್ತೆಂಟು ವರ್ಷದ ಈ ವೈದ್ಯನ ವಿರುದ್ಧ ದೌಂಡ್ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಎಫ್.ಐ.ಆರ್​. ದಾಖಲಿಸಲಾಗಿದೆ.(ಏಜೆನ್ಸೀಸ್)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಪೊಲೀಸರ ಮೇಲೆ ಕಣ್ಗಾವಲು! ಠಾಣೆ​ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಸುಪ್ರೀಂ ಡೆಡ್​ಲೈನ್

    ಪಾಕಿಸ್ತಾನದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿದ ಭಾರತದ ವಿಮಾನ

    ಟಿಆರ್​ಪಿ ಹಗರಣ : ಪಾರ್ಥೋ ದಾಸ್​ಗುಪ್ತಗೆ ತಾತ್ಕಾಲಿಕ ಜಾಮೀನು

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts