More

    ಜಗತ್ತಿನ ಅತಿದೊಡ್ಡ ಡೆತ್​ನೋಟ್​: 1905 ಪುಟ ಬರೆಯಲು 5 ವರ್ಷ ತೆಗೆದುಕೊಂಡರೂ ಬದಲಾಗಲಿಲ್ಲ ಮನಸ್ಸು!

    ನ್ಯೂಯಾರ್ಕ್​: ಜೀವನದಲ್ಲಿ ಜಿಗುಪ್ಸೆ ಹೊಂದಿಯೋ ಅಥವಾ ಸಮಸ್ಯೆಗಳನ್ನು ಎದುರಿಸಲಾಗದೆಯೋ ಕೆಲವರು ಸಾವಿನ ಹಾದಿಯನ್ನು ಹಿಡಿಯುತ್ತಾರೆ. ಸಾಯುವ ಮುನ್ನ ಒಂದು ಕ್ಷಣ ಯೋಚಿಸಿದರೆ ಯಾರೂ ದುಡುಕಿನ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ಕೆಲವರು ಸಾಯುವ ಮುನ್ನ ತಮ್ಮ ನೋವನ್ನು ಅಕ್ಷರ ರೂಪದಲ್ಲಿ ಇಳಿಸಿ ಹೋಗುತ್ತಾರೆ. ಒಂದು ಅಥವಾ ಎರಡು ಪುಟಗಳ ಡೆತ್​ನೋಟ್​ ಬರೆದಿರುವುದನ್ನು ಓದಿರುತ್ತೇವೆ. ಆದರೆ, 1905 ಪುಟ ಡೆತ್​ನೋಟ್​ ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಇಂಥದ್ದೊಂದು ಘಟನೆ ಈ ಹಿಂದೆ ನಡೆದಿದೆ. ಇದನ್ನು ಅತಿದೊಡ್ಡ ಡೆತ್​ನೋಟ್​ ಎಂದು ಪರಿಗಣಿಸಲಾಗಿದೆ.

    1905 ಪುಟಗಳ ಡೆತ್​ನೋಟ್​ ಬರೆದಾತನ ಹೆಸರು ಮಿಚೆಲ್ ಹೈಸ್ಮನ್ ಎಂದು. ಈತ್​ ಡೆತ್​ನೋಟ್​ ಬರೆಯಲು ತೆಗೆದುಕೊಂಡ ಸಮಯ 5 ವರ್ಷ. ಈ ಅವಧಿಯಲ್ಲೂ ಆತನ ಮನಸ್ಸು ಬದಲಾಗದೇ ಇರುವುದು ನಿಜಕ್ಕೂ ಆಶ್ಚರ್ಯದ ಸಂಗತಿ.

    ಮಿಚೆಲ್ ಹೈಸ್ಮನ್ 1975ರಲ್ಲಿ ನ್ಯೂಯಾರ್ಕ್​ನಲ್ಲಿ ಜನಿಸಿದನು. ಈತ ಅಲ್ಬನಿ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಬ್ಯಾಚುಲರ್​ ಡಿಗ್ರಿ ಪಡೆದಿದ್ದ. ಕೇವಲ 35 ವರ್ಷಕ್ಕೆ ಆತ್ಮಹತ್ಯೆಗೆ ಶರಣಾದನು. 2010ರಲ್ಲಿ ಮೃತಪಟ್ಟ ಮಿಚೆಲ್ ಹೈಸ್ಮನ್ ಈಗಲೂ ಡೆತ್​ನೋಟ್​ ಕಾರಣದಿಂದ ನೆನಪಾಗುತ್ತಾನೆ ಮತ್ತು ಸುದ್ದಿಯಾಗುತ್ತಿರುತ್ತಾನೆ.

    ಇದನ್ನೂ ಓದಿ: ಅತ್ಯಾಚಾರ ಕಾನೂನನ್ನು ಪುರುಷರ ವಿರುದ್ಧದ ಅಸ್ತ್ರವನ್ನಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ: ಉತ್ತರಾಖಂಡ ಹೈಕೋರ್ಟ್​

    1905 ಪುಟಗಳ ಡೆತ್​ನೋಟ್​ ಬರೆದಿಟ್ಟು ಗುಂಡಿಟ್ಟುಕೊಂಡು ಆತ್ಮಹತ್ಯೆ ಶರಣಾದನು. ಮಿಚೆಲ್ ಹೈಸ್ಮನ್ ಸಾವಿಗೆ ಇಡೀ ಯೂನಿವರ್ಸಿಟಿಯೇ ಕಂಬನಿ ಮಿಡಿದಿತ್ತು. ಡೆತ್​ನೋಟ್​ನಲ್ಲಿ 1700 ಉಲ್ಲೇಖಗಳನ್ನು ಮಾಡಿದ್ದ. ಅದರಲ್ಲಿ 200 ಜರ್ಮನಿಯ ತತ್ವಜ್ಞಾನಿ ಫ್ರೆಡ್ರಿಕ್ ನೀತ್ಸೆ ಅವರದ್ದಾಗಿತ್ತು.

    ಡೆತ್​ನೋಟ್​ನಲ್ಲಿ ಮಾಜಿ ಅಮೆರಿಕ ಅಧ್ಯಕ್ಷ ಥಾಮಸ್​ ಜಾಫರ್​ಸನ್​ ಮತ್ತು ವಿಜ್ಞಾನಿ ಆಲ್ಬರ್ಟ್ ಐನ್ಸ್ಟೈನ್ ಅವರ ಹೆಸರನ್ನು ಉಲ್ಲೇಖಿಸಿ ಜೀವನವು ಅರ್ಥಹೀನ ಎಂದು ಬರೆದಿದ್ದನು. ತತ್ವಶಾಸ್ತ್ರ, ವಿಶ್ವವಿಜ್ಞಾನ, ಏಕತ್ವ, ನ್ಯೂಜೆರ್ಸಿ ಹಾಗೂ ದೇವರನ್ನು ಬೆಳೆಸುವು ಹೇಗೆ ಎಂಬ ಶೀರ್ಷಿಕೆಗಳನ್ನು ಉಲ್ಲೇಖ ಮಾಡಿದ್ದ. ಇದಲ್ಲದೆ, ಮಾನವ ಸ್ವಭಾವ, ಸಮಾಜ, ಧರ್ಮ, ತಂತ್ರಜ್ಞಾನ ಮತ್ತು ವಿಜ್ಞಾನದಂತಹ ವಿಷಯಗಳನ್ನು ಈ ಡೆತ್​ನೋಟ್​ ಒಳಗೊಂಡಿದೆ.

    ತತ್ವಶಾಸ್ತ್ರವನ್ನು ಓದಿದರೂ ಕೂಡ ಜೀವನದಿಂದ ವಿಮುಖತೆಯನ್ನು ಬಯಸಿ ಮಿಚೆಲ್ ಹೈಸ್ಮನ್​ ಸಾವಿನ ಹಾದಿಯನ್ನು ಹಿಡಿದಿದ್ದಾನೆ. ಇಂದಿಗೂ ಕೂಡ ಅನೇಕರು ಮಿಚೆಲ್ ಹೈಸ್ಮನ್​ ಅವರ ಡೆತ್​ನೋಟ್​ ಓದಲು ಆಸಕ್ತಿಯನ್ನು ಹೊಂದಿದ್ದಾರೆ. ಇದು ಜಗತ್ತಿನ ಅತಿದೊಡ್ಡ ಡೆತ್​ನೋಟ್​ ಎಂದೇ ಪರಿಗಣಿಸಲಾಗಿದೆ. (ಏಜೆನ್ಸೀಸ್​)

    ಕೇಕ್​ ಕತ್ತರಿಸಿ ಮಗಳ ಮೊದಲ ಪಿರಿಯಡ್ಸ್​ ಸಂಭ್ರಮಿಸಿದ ಕುಟುಂಬ: ತಂದೆ ಹೇಳಿದ ಮಾತಿಗೆ ಭಾರೀ ಮೆಚ್ಚುಗೆ

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts