More

    ಹಿಂದೂ ಮಕ್ಕಳಿಗೆ ಸಾಂತಾ ಕ್ಲಾಸ್ ವೇಷ ಹಾಕಿಸಬೇಡಿ; ಶಾಲೆಗಳಿಗೆ ವಿಶ್ವ ಹಿಂದೂ ಪರಿಷತ್ ಎಚ್ಚರಿಕೆ

    ಭೋಪಾಲ್​: ಹಿಜಾಬ್​-ಕೇಸರಿ ಸಂಘರ್ಷದ ರೀತಿಯಲ್ಲೇ ಕ್ರಿಸ್​ಮಸ್ ಸಂದರ್ಭದಲ್ಲಿ ಇದೀಗ ಇನ್ನೊಂದು ರೀತಿಯ ಧಾರ್ಮಿಕ ಸಂಘರ್ಷ ಉಂಟಾಗುವ ಲಕ್ಷಣಗಳು ಗೋಚರಿಸಿವೆ. ಹಿಂದೂ ಮಕ್ಕಳಿಗೆ ಸಾಂತಾ ಕ್ಲಾಸ್ ವೇಷ ಹಾಕಿಸಬೇಡಿ ಎಂದು ಶಾಲೆಗಳಿಗೆ ವಿಶ್ವ ಹಿಂದೂ ಪರಿಷತ್ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಕೆಲವು ಶಾಲೆಗಳಲ್ಲಿ ಆತಂಕ ಮೂಡಿದೆ.

    ಅಂದಹಾಗೆ ಇದು ಸದ್ಯ ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆಯಲ್ಲ. ಇದು ದೂರದ ಮಧ್ಯಪ್ರದೇಶದ ಭೋಪಾಲ್​ನಲ್ಲಿ ಕಂಡುಬಂದಿರುವ ವಿದ್ಯಮಾನ. ವಿದ್ಯಾರ್ಥಿ-ವಿದ್ಯಾರ್ಥಿನಿಯರೆಲ್ಲರೂ ಸಾಂತಾ ಕ್ಲಾಸ್ ವೇಷದಲ್ಲಿ ಬರಬೇಕು ಹಾಗೂ ಎಲ್ಲರೂ ಕ್ರಿಸ್​ಮಸ್​ ಟ್ರೀ ತರಬೇಕು ಎಂದು ಶಾಲೆಯವರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಭೋಪಾಲ್​ನ ವಿಎಚ್​ಪಿ ಘಟಕ ಈ ರೀತಿಯಾಗಿ ಪ್ರತಿಕ್ರಿಯಿಸಿದೆ ಎನ್ನಲಾಗಿದೆ.

    ಇದು ಹಿಂದೂ ಧಾರ್ಮಿಕ ಸಂಸ್ಕೃತಿಯ ಮೇಲಿನ ದಾಳಿ. ಈ ಮೂಲಕ ಹಿಂದೂ ಮಕ್ಕಳ ಮೇಲೆ ಕ್ರೈಸ್ತ ಧರ್ಮದ ಪ್ರಭಾವ ಬೀರುವ ಸಂಚು ಹೂಡಲಾಗಿದೆ ಎಂದು ಆರೋಪಿಸಿರುವ ವಿಎಚ್​ಪಿ, ಹಿಂದೂ ಮಕ್ಕಳಿಗೆ ಸಾಂತಾ ಕ್ಲಾಸ್ ವೇಷ ಹಾಕಿಸಬೇಡಿ ಎಂದು ಎಂದು ಎಲ್ಲ ಶಾಲಾ ಮುಖ್ಯಸ್ಥರಿಗೆ ಪತ್ರ ಬರೆದಿದೆ.

    ಅಲ್ಲದೆ ಕ್ರೈಸ್ತ ಸಮುದಾಯಕ್ಕೆ ಸೇರದ ಶಾಲೆಗಳಲ್ಲೂ ಕ್ರಿಸ್​ಮಸ್ ಆಚರಣೆ ಮಾಡುವುದರ ವಿರುದ್ಧವೂ ವಿಶ್ವ ಹಿಂದೂ ಪರಿಷತ್ ಆಕ್ಷೇಪ ವ್ಯಕ್ತಪಡಿಸಿದೆ. ನಮ್ಮ ಹಿಂದೂ ಮಕ್ಕಳು ರಾಮ, ಕೃಷ್ಣ, ಬುದ್ಧ, ಮಹಾವೀರ್, ಗುರು ಗೋವಿಂದ್ ಸಿಂಗ್ ಅವರಂಥ ಕ್ರಾಂತಿಕಾರಿಗಳಾಗಬೇಕು ವಿನಃ ಸಾಂತಾ ಅಲ್ಲ ಎಂದು ಪತ್ರದಲ್ಲಿ ಹೇಳಲಾಗಿದೆ. ಒಂದು ವೇಳೆ ಪಾಲಕರ ಅನುಮತಿ ಇಲ್ಲದೆ ಹಿಂದೂ ಮಕ್ಕಳಿಗೆ ಸಾಂತಾ ಕ್ಲಾಸ್ ವೇಷ ಹಾಕಿಸಿದರೆ ಅಂಥ ಶಾಲೆಗಳ ವಿರುದ್ಧ ಕಾನೂನು ಮೂಲಕ ಕ್ರಮ ಜರುಗಿಸಲಾಗುವುದು ಎಂದೂ ವಿಎಚ್​ಪಿ ಎಚ್ಚರಿಕೆ ನೀಡಿದೆ.

    ಶೂಟಿಂಗ್​ ಸೆಟ್​​ನಲ್ಲೇ ನೇಣು ಹಾಕಿಕೊಂಡು ಪ್ರಾಣ ಕಳ್ಕೊಂಡ ನಟಿ!

    ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!

    ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts