More

    ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಕೀಳರಿಮೆ ಬಾರದಂತೆ ಕಾರ್ಯನಿರ್ವಹಿಸಿ

    ಚಿಕ್ಕಮಗಳೂರು: ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಸಾರ್ವಜನಿಕರಿಗೆ ಕೀಳರಿಮೆ ಮತ್ತೆ ಅಸಡ್ಡೆ ಬಾರದಂತೆ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಕರೆ ನೀಡಿದರು.

    ನಗರದ ಜಿಲ್ಲಾ ಆಸ್ಪತ್ರೆಗೆ ಲೈಫ್‌ಲೈನ್ ಫೀಡ್ಸ್ ಸಂಸ್ಥೆಯಿAದ ನೀಡಲಾದ ೧೦ ಲಕ್ಷ ರೂಪಾಯಿ ಮೌಲ್ಯದ ನವೀಕೃತ ಪೀಠೋಪಕರಣಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸುಮಾರು ೧೭೦ ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇನ್ನೆರಡು ವರ್ಷಗಳಲ್ಲಿ ಆರಂಭಗೊಳ್ಳಲಿದೆ. ಈ ಮೂಲಕ ಬಡವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿದರು.
    ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರು ಮೆರಿಟ್ ಆಧಾರದ ಮೇಲೆ ನೇಮಕವಾಗಿ ಬಂದಿರುವುದರಿAದ ಸಾರ್ವಜನಿಕರು ಅವರಲ್ಲಿ ನಂಬಿಕೆಯನ್ನಿಟ್ಟು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವಂತಾಗಬೇಕು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸುಮಾರು ೨೦ ಲಕ್ಷ ರೂ. ವೆಚ್ಚದಲ್ಲಿ ಮೆಡಿಕಲ್ ಕಾಲೇಜಿಗೆ ಬಸ್ಸನ್ನು ಕೊಡುಗೆ ನೀಡಿರುವ ಲೈಫ್‌ಲೈನ್ ಸಂಸ್ಥೆ ಬಡ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶುಲ್ಕದ ವೆಚ್ಚ ಭರಿಸಲೂ ಮುಂದೆ ಬಂದಿರುವುದು ಸ್ವಾಗತಾರ್ಹ ಎಂದು ಶ್ಲಾಘಿಸಿದರು.
    ಎಲ್ಲರಿಗೂ ದೇವರು ಶ್ರೀಮಂತಿಕೆ ಕೊಡುತ್ತಾನೆ. ಆದರೆ ಎಲ್ಲರ ಮನಸೂ ಶ್ರೀಮಂತವಾಗಿರುವುದಿಲ್ಲ. ಈ ಎರಡನ್ನೂ ಲೈಫ್ ಲೈನ್ ಫೀಡ್ಸ್ನ ಕಿಶೋರ್ ಕುಮಾರ್ ಹೆಗ್ಡೆ ಅವರಿಗೆ ದೇವರು ಕೊಟ್ಟಿದ್ದಾನೆ. ಇದೇ ಕಾರಣಕ್ಕೆ ಅವರು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅತಿ ಹೆಚ್ಚು ಆರ್ಥಿಕ ನೆರವು ನೀಡುವ ಮೂಲಕ ಬಡವರಿಗೆ ಅನುಕೂಲ ಒದಗಿಸುತ್ತಿದ್ದಾರೆ ಎಂದು ಅಭಿನಂದಿಸಿದರು.
    ಕಿಶೋರ್ ಕುಮಾರ್ ಹೆಗ್ಡೆ ಅವರು ಐಡಿಎಸ್‌ಜಿ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿಗೆ ಸುಮಾರು ೫೦ ಲಕ್ಷ ರೂ. ವೆಚ್ಚದಲ್ಲಿ ಡೆಸ್ಕ್ಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಸರ್ಕಾರಕ್ಕೆ ಸಮಾನಾಂತರವಾಗಿ ಹಲವಾರು ಮಠಮಾನ್ಯಗಳು ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುವ ಮೂಲಕ ತಮ್ಮದೇ ಆದ ಸೇವೆ ಸಲ್ಲಿಸುತ್ತಿವೆ. ಅದೇ ರೀತಿ ಕಿಶೋರ್ ಅವರೂ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.
    ಲೈಫ್‌ಲೈನ್ ಫೀಡ್ಸ್ ಸಂಸ್ಥೆಯ ಸಂಸ್ಥಾಪಕ ಕಿಶೋರ್ ಕುಮಾರ್ ಹೆಗ್ಡೆ ಮಾತನಾಡಿ, ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಕಣ್ಣಿನ ಆಸ್ಪತ್ರೆ ಕಟ್ಟಡವನ್ನು ೩೦ ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನಾಗಿ ರೂಪಿಸಲು ನೆರವು ನೀಡಲು ಸಿದ್ಧವಾಗಿz್ದೆÃವೆ. ಇದರಿಂದಾಗಿ ಬಡ ಜನರಿಗೆ, ಕಷ್ಟದಲ್ಲಿರುವವರಿಗೆ ತುಂಬಾ ಸಹಾಯವಾಗುತ್ತದೆ ಎಂದು ತಿಳಿಸಿದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಸರ್ಜನ್ ಡಾ. ಮೋಹನ್‌ಕುಮಾರ್ ಮಾತನಾಡಿ, ಹಾಲಿ ಇದ್ದ ೪೪ ಮಂಚಗಳನ್ನು ದುರಸ್ಥಿ ಮಾಡಿ, ಬಣ್ಣ ಬಳಿದು ವಾಪಸ್ ನೀಡಿದ್ದು ವಾರ್ಡ್ಗಳಲ್ಲಿ ಇಡಲಾಗಿದೆ. ಬೆಡ್‌ಸೈಡ್ ಲಾಕರ್ ೮೫, ಗಾಡ್ರೇಜ್ ಬೀರು ೩, ರ‍್ಯಾಕ್‌ಗಳು ೧೧, ೨ ವೀಲ್‌ಚೇರ್, ಸ್ಟೆçಕ್ರ‍್ಸ್ ೩, ಲಗೇಜ್ ಫ್ಯಾನ್ ೩, ಟ್ರೀಟ್‌ಮೆಂಟ್ ಸ್ಟಾÈಂಡ್ ೨ ಸೇರಿದಂತೆ ಮುಂತಾದ ಉಪಕರಣಗಳನ್ನು ದುರಸ್ಥಿ ಮಾಡಿಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
    ಈ ಸಂದರ್ಭದಲ್ಲಿ ಲೈಫ್‌ಲೈನ್ ಫೀಡ್ಸ್ ಸಂಸ್ಥೆಯ ಆಡಳಿತಾಧಿಕಾರಿ ಸುಬ್ರಮಣ್ಯ, ಜನರಲ್ ಮ್ಯಾನೇಜರ್ ಗಣೇಶ್ ಕಾಮತ್, ಶಮಿ, ರವಿ ಹಾಗೂ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts