More

    VIDEO | ಕುರ್ಚಿ ತರುವುದು ತಡವಾಯಿತೆಂದು ಕಾರ್ಯಕರ್ತನ ಮೇಲೆ ಕಲ್ಲು ಎಸೆದ ಸಚಿವ!

    ತಮಿಳುನಾಡು: ಕಾರ್ಯಕ್ರಮದಲ್ಲಿ ಕುಳಿತುಕೊಳ್ಳುವ ಕುರ್ಚಿ ತರುವುದು ತಡವಾಯಿತೆಂದು ಸಿಟ್ಟಾದ ಡಿಎಂಕೆ ಪಕ್ಷದ ಸಚಿವ ಎಸ್​​ಎಂ ನಾಸರ್​​ ಕಾರ್ಯಕರ್ತನ ಮೇಲೆ ಕಲ್ಲು ಎಸೆದಿರುವ ಘಟನೆ ನಡೆದಿದೆ. ಇದೀಗ ಸಚಿವ ಕಾರ್ಯಕರ್ತನ ಮೇಲೆ ಕಲ್ಲು ಎಸೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

    ರಾಜ್ಯದಲ್ಲಿ ಹಿಂದಿ ಹೇರಿಕೆ ವಿರೋಧಿ ಆಂದೋಲನದ ಸಂದರ್ಭದಲ್ಲಿ ಮಡಿದವರನ್ನು ಸ್ಮರಿಸುವ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಭಾಗವಹಿಸುವ ಕಾರ್ಯಕ್ರಮದ ಸ್ಥಳವನ್ನು ಹೈನುಗಾರಿಕೆ ಅಭಿವೃದ್ಧಿ ಸಚಿವ ಎಸ್‌ಎಂ ನಾಸರ್ ಪರಿಶೀಲಿಸುತ್ತಿದ್ದರು. ಈ ವೇಳೆ ಕಾರ್ಯಕರ್ತನ ಕುರ್ಚಿ ತಂದಿಡುವುದು ನಿಧಾನವಾಗಿದೆ. ಇದಕ್ಕೆ ಸಿಟ್ಟಾದ ಸಚಿವ ಕಾರ್ಯಕರ್ತನ ಮೇಲೆ ಕಲ್ಲು ಎಸೆದು ಗರಂ ಆಗಿದ್ದಾರೆ. ಇದು ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಮೊದಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸರ್ಕಾರವು ಮದ್ರಾಸ್ ಪ್ರೆಸಿಡೆನ್ಸಿಯ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯವಾಗಿ ಕಲಿಸುವುದನ್ನು ವಿರೋಧಿಸಿ 1937ರಲ್ಲಿ ಮೊದಲ ಹಿಂದಿ-ವಿರೋಧಿ ಆಂದೋಲನವನ್ನು ಪ್ರಾರಂಭಿಸಿತ್ತು. ಮೂರು ವರ್ಷಗಳ ಕಾಲ ನಡೆದ ಆಂದೋಲನದಲ್ಲಿ ತಮಿಳುನಾಡಿನಾದ್ಯಂತ ಉಪವಾಸಗಳು, ಸಮಾವೇಶಗಳು ನಡೆದಿದ್ದವು. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts