More

    ಅಮ್ಮಾ ಕ್ಯಾಂಟೀನ್​ ಫ್ಲೆಕ್ಸ್​ ಕಿತ್ತೆಸೆದ ಪಕ್ಷದ ಕಾರ್ಯಕರ್ತರನ್ನು ಬಹಿಷ್ಕರಿಸಿ, ದೂರು ನೀಡಿದ ಡಿಎಂಕೆ: ಇಬ್ಬರ ಬಂಧನ

    ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ಅಮ್ಮಾ ಕ್ಯಾಂಟೀನ್ ನಾಮಫಲಕಗಳನ್ನು ಕಿತ್ತೆಸೆದು ದಾಂಧಲೆ ನಡೆಸಿದ ತಮ್ಮದೇ ಪಕ್ಷದ ಕಾರ್ಯತರನ್ನು ಬಹಿಷ್ಕರಿಸಿರುವ ಡಿಎಂಕೆ, ದೂರು ನೀಡಿ ಕಾರ್ಯಕರ್ತರ ಬಂಧನಕ್ಕೆ ಕಾರಣವಾಗಿದೆ.

    ಕಾರ್ಯಕರ್ತರು ಬಂಧನವಾಗಿರುವ ಬಗ್ಗೆ ಡಿಎಂಕೆ ನಾಯಕ ಮತ್ತು ಚೆನ್ನೈ ಮಾಜಿ ಮೇಯರ್​ ಮಾ ಸುಬ್ರಮಣಿಯನ್​ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಕಿತ್ತೆಸೆದ ನಾಮಫಲಕಗಳನ್ನು ಅದೇ ಸ್ಥಳದಲ್ಲಿ ಅಳವಡಿಸಲಾಗಿದೆ. ನಾಮಫಲಕ ಕಿತ್ತೆಸೆದ ಇಬ್ಬರು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸುಬ್ರಮಣಿಯನ್​ ಹೇಳಿದ್ದಾರೆ.

    ಅಮ್ಮಾ ಕ್ಯಾಂಟೀನ್​ ಎಂಬುದು ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರು ಜಾರಿಗೆ ತಂದ ಯಶಸ್ವಿ ಯೋಜನೆ. ಇದರಿಂದಲೇ ಸ್ಫೂರ್ತಿಗೊಂಡು ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್​ ತೆರೆಯಲಾಗಿದೆ. ಅಮ್ಮಾ ಕ್ಯಾಂಟೀನ್​ನಲ್ಲಿ ಅತಿ ಕಡಿಮೆ ಬೆಲೆಗೆ ಆಹಾರ ನೀಡಲಾಗುತ್ತದೆ. ಚೆನ್ನೈನಲ್ಲಿ ಕಾರ್ಪೊರೇಷನ್​ ಮತ್ತು ತಮಿಳುನಾಡಿನ ನಾಗರಿಕ ಸಂಸ್ಥೆಗಳು ಇದನ್ನು ನಡೆಸುತ್ತಿವೆ.

    ಇಬ್ಬರನ್ನು ಪಕ್ಷದಿಂದ ಬಹಿಷ್ಕರಿಸಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್​ ಆದೇಶ ಹೊರಡಿಸಿದ್ದಾರೆ. ಇಬ್ಬರು ಸಹ ಪಕ್ಷದ ಯಾವುದೇ ಸ್ಥಾನಮಾನವನ್ನು ಹೊಂದಿಲ್ಲ. ಅವರು ಸಾಮಾನ್ಯ ಸದಸ್ಯರಷ್ಟೇ. ಸದ್ಯ ಅವರನ್ನು ಬಹಿಷ್ಕರಿಸಲಾಗಿದೆ. ಪಕ್ಷದ ಮುಖವಾಣಿ ಮೌರಸೊಲಿ ಕಾರ್ಯಕರ್ತರಿಬ್ಬರ ಬಹಿಷ್ಕರ ಸಂಬಂಧ ಸುದ್ದಿಯನ್ನು ನಾಳೆ ಪ್ರಕಟಿಸಲಿದೆ ಎಂದು ಸುಬ್ರಮಣಿಯನ್​ ನಿನ್ನೆಯೇ ಮಾಧ್ಯಮಗಳಿಗೆ ತಿಳಿಸಿದರು.

    ನಾಮಫಲಕ ಕಿತ್ತು ಹಾಕುವ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ಎಐಎಡಿಎಂಕೆ ಅಧಿಕೃತ ಟ್ವಿಟರ್​ ಖಾತೆಯಲ್ಲೂ ಸಹ ವಿಡಿಯೋವನ್ನು ಪೋಸ್ಟ್​ ಮಾಡಲಾಗಿದೆ. ಕೆಲವು ಅಗತ್ಯ ವಸ್ತುಗಳ ಜತೆ ಜಯಲಲಿತಾರ ಫೋಟೋ ನೆಲದ ಮೇಲೆ ಬಿದ್ದಿರುವ ಫೋಟೋವನ್ನು ಸಹ ಶೇರ್​ ಮಾಡಿದೆ. ತೀವ್ರ ಆಕ್ರೋಶ ವ್ಯಕ್ತವಾದ್ದರಿಂದ ಕಾರ್ಯಕರ್ತರಿಬ್ಬರನ್ನು ಡಿಎಂಕೆ ಬಹಿಷ್ಕಾರ ಮಾಡಿದ್ದು, ದೂರು ಸಹ ನೀಡಿತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. (ಏಜೆನ್ಸೀಸ್​)

    ಬರೋಬ್ಬರಿ 9 ಮಕ್ಕಳಿಗೆ ಜನ್ಮ ನೀಡಿದ ಮಹಿಳೆ! ತಾಯಿ ಮತ್ತು ಮಕ್ಕಳ ಆರೋಗ್ಯ ಸ್ಥಿರ

    ದುರಂತಕ್ಕೆ ನಿರ್ಲಕ್ಷ್ಯವೇ ಮುಖ್ಯ ಹೊಣೆ!; ಚಾಮರಾಜನಗರ ಆಕ್ಸಿಜನ್ ಎಮರ್ಜೆನ್ಸಿ ಮುಖ್ಯ ಕಾರ್ಯದರ್ಶಿಗೆ ಮೊದಲೇ ತಿಳಿದಿತ್ತು..

    ಕರೊನಾ ಪರೀಕ್ಷೆಗೆ ಹೊಸ ನಿಯಮ ಜಾರಿ ಮಾಡಿದ ಕೇಂದ್ರ ಸರ್ಕಾರ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts