More

    ಪಕ್ಷದ ಮುಖಂಡರು, ಸಹೋದರನಿಗೂ ಡಿಕೆಶಿ ಕೊಟ್ಟ ವಾರ್ನಿಂಗ್​ ಇದು…

    ಬೆಂಗಳೂರು: ಇತರ ರಾಜಕೀಯ ಪಕ್ಷಗಳ ಆಂತರಿಕ ಬೆಳವಣಿಗೆ ಬಗ್ಗೆ ಕಾಂಗ್ರೆಸ್​ನ ಯಾರೊಬ್ಬರೂ ಯಾವುದೇ ಹೇಳಿಕೆ ನೀಡಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಾಕೀತು ಮಾಡಿದರು.

    ಈ ವಿಚಾರಗಳ ಬಗ್ಗೆ ಶಾಸಕಾಂಗ ಪಕ್ಷದ ನಾಯಕರು ಅಥವಾ ಪಕ್ಷದ ಅಧ್ಯಕ್ಷನಾಗಿ ನಾನು ಮಾತ್ರ ಮಾತನಾಡುತ್ತೇನೆ. ಸದ್ಯ ನಮ್ಮ ಪಕ್ಷವನ್ನು ಮತ್ತಷ್ಟು ಸಂಘಟಿಸಿ ಸದೃಢಗೊಳಿಸಬೇಕಿದೆ. ಇದಷ್ಟೇ ನಮ್ಮ ಏಕೈಕ ಗುರಿ. ಹಾಗಾಗಿ ಅದರತ್ತ ಕಾರ್ಯಪ್ರವೃತ್ತರಾಗಬೇಕು. ಅನ್ಯ ಪಕ್ಷಗಳ ಬಗ್ಗೆ ಪಕ್ಷದ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರು ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಮೂಲಕ ಕಾಂಗ್ರೆಸ್​ ಮುಖಂಡರಿಗೆ ಸೂಚಿಸಿದರು.

    ಇದನ್ನೂ ಓದಿರಿ ಬಿಎಸ್​ವೈಗೆ ಡಿಕೆಶಿ ಸವಾಲು.. ಅದೂ 24 ಗಂಟೆ ಗಡುವು ವಿಧಿಸಿ!

    ಇನ್ನು ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಲಹದ ಬಗ್ಗೆ ನನ್ನ ಸಹೋದರ(ಡಿ.ಕೆ. ಸುರೇಶ್​) ಕೂಡ ನಿನ್ನೆ(ಶುಕ್ರವಾರ) ಒಂದು ಹೇಳಿಕೆ ನೀಡಿದ್ದರು. ಅವರಿಗೂ ಸೇರಿ ಎಲ್ಲರಿಗೂ ಈ ವಿಚಾರವಾಗಿ ಸೂಚನೆ ನೀಡುತ್ತಿದ್ದೇನೆ. ಯಾರೂ ಬೇರೆ ಪಕ್ಷಗಳ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಬಾರದು ಎಂದು ತಾಕೀತು ಮಾಡಿದರು.

    ಇದನ್ನೂ ಓದಿರಿ ನಗರ ಸಂಚಾರಕ್ಕೆ ಬರುವೆ.. ಲೋಪ ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ; ಬಿಎಸ್​ವೈ

    ಬಿಜೆಪಿ ಹಿರಿಯ ಶಾಸಕ ಉಮೇಶ್​ ಕತ್ತಿ ಭೋಜನಕೂಟದ ನೆಪದಲ್ಲಿ ಬಿಎಸ್​ವೈ ಮತ್ತು ರಾಜ್ಯ ಸರ್ಕಾರದ ವಿರುದ್ಧ ಅತೃಪ್ತರ ಸಭೆ ನಡೆಸಿದ್ದು, ಬಿಜೆಪಿಯಲ್ಲಿ ಭಿನ್ನಮತ ಎದ್ದಿದೆ ಎಂಬ ವಿಚಾರವಾಗಿ ಮಾಗಡಿಯಲ್ಲಿ ಶುಕ್ರವಾರ ಮಾತನಾಡಿದ್ದ ಸಂಸದ ಡಿ.ಕೆ.ಸುರೇಶ್, ರಾಜ್ಯದಲ್ಲಿ ಅತಿ ಶೀಘ್ರದಲ್ಲೇ ಚುನಾವಣೆ ನಡೆಯಲಿದೆ. ಬಿಜೆಪಿಯವರೇ ಸರ್ಕಾರವನ್ನು ಬೀಳಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತದೆ ಎಂದಿದ್ದರು.

    ಇದನ್ನೂ ಓದಿರಿ  ಕರೊನಾ ವಾರಿಯರ್ಸ್‌ಗೆ ಕೆಎಲ್ ರಾಹುಲ್ ಕೊಟ್ಟ ಉಡುಗೊರೆ ಏನು ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts