More

    ಗಡ್ಡ ಬೋಳಿಸಿಕೊಳ್ಳುವ ಸಮಯ ಇನ್ನೂ ಬಂದಿಲ್ಲ ಎಂದ ಡಿಕೆಶಿ!

    ಬೆಂಗಳೂರು: ಜಾರಿ ನಿರ್ದೇಶನಾಲಯ ಹಾಕಿದ ಕೇಸ್‌ನಿಂದಾಗಿ ಜೈಲು ಶಿಕ್ಷೆ ಅನುಭವಿಸಿದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್, ‘‘ಅಧಿಕಾರಕ್ಕೆ ಬರುವವರೆಗೂ ಗಡ್ಡ ತೆಗೆಯುವುದಿಲ್ಲ’’ ಎಂದು ಶಪಥ ಮಾಡಿದ್ದು ನಿಮಗೆ ನೆನಪಿರಬಹುದು. ಇದೀಗ ಅವರ ಪಕ್ಷವೇ ಅಧಿಕಾರಕ್ಕೆ ಬಂದಿದೆ. ಜತೆಗೆ, ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿದ್ದಾರೆ. ಹಾಗಾದರೆ ಈಗ ಅವರು ತಮ್ಮ ಗಡ್ಡವನ್ನು ತೆಗೆಸಿಕೊಳ್ಳುತ್ತಾರೆಯೇ? ಈ ಬಗ್ಗೆ ಡಿ.ಕೆ. ಶಿವಕುಮಾರ್ ಏನು ಹೇಳುತ್ತಾರೆ?

    ಇದನ್ನೂ ಓದಿ:ಮುಸ್ಲಿಂ ಯುವಕನನ್ನು ಮದುವೆಯಾಗಲಿದ್ದಾಳೆ ಬಿಜೆಪಿ ಮುಖಂಡನ ಮಗಳು! 

    ಈ ಪ್ರಶ್ನೆಗೆ ಆಂಗ್ಲ ಪತ್ರಿಕೆಯೊಂದರ ಸಂದರ್ಶನದಲ್ಲಿ ನಿಯೋಜಿತ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ತರ ನೀಡಿದ್ದಾರೆ. ‘‘ಇಲ್ಲ, ಇನ್ನೂ ಗಡ್ಡ ತೆಗೆಸಿಕೊಳ್ಳುವುದಕ್ಕೆ ಕಾಲ ಕೂಡಿ ಬಂದಿಲ್ಲ. ನಾನು ಬಹಳಷ್ಟು ಸಲ ಹೇಳಿದ್ದೇನೆ- ಸಂಯಮ, ತಾಳ್ಮೆಯೇ ನನ್ನ ಬಲ. ಈಗಲೂ ನಾನು ಆ ತಾಳ್ಮೆಯನ್ನು ಕಾಯ್ದಿಟ್ಟುಕೊಳ್ಳುತ್ತೇನೆ’’ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

    ಇದನ್ನೂ ಓದಿ: ಸಚಿವ ಸ್ಥಾನಕ್ಕೆ ಲಾಬಿ; ದೆಹಲಿಗೆ ಹೊರಟ ಕೈ ಶಾಸಕರು ಯಾರ್‍ಯಾರು ಗೊತ್ತಾ..?

    ‘ಹಾಗಾದರೆ ಮುಖ್ಯಮಂತ್ರಿಯಾದ ನಂತರ ಗಡ್ಡ ತೆಗೆಸುತ್ತೀರಿ’ ಎಂಬ ಪ್ರಶ್ನೆಗೆ, ‘‘ಈ ಪ್ರಶ್ನೆಗೆ ಈಗಲೇ ಉತ್ತರ ನೀಡುವುದಿಲ್ಲ. ಈಗೇನಿದ್ದರೂ ನಮ್ಮ ಗಮನ ಸರ್ಕಾರ ರಚಿಸುವುದರ ಬಗ್ಗೆ ಮಾತ್ರ. ಜನರಿಗೆ ನೀಡಿರುವ ಗ್ಯಾರಂಟಿ ಭರವಸೆಗಳನ್ನು ಈಡೇರಿಸುವುದರತ್ತ ನಮ್ಮ ಗಮನ. ಸರ್ಕಾರದ ಸ್ಥಿರತೆಯನ್ನು ಕಾಪಾಡಿಕೊಂಡು ಹೋಗುವುದು ಕೂಡ ನಮ್ಮ ಮೇಲಿರುವ ಜವಾಬ್ದಾರಿ’’ ಎಂದು ಉತ್ತರಿಸಿದ್ದಾರೆ.

    ಆನ್‌ಲೈನ್ ಶಿಕ್ಷಣದ ನೆಪದಲ್ಲಿ ಅಕ್ರಮ ಹಣ ವರ್ಗಾವಣೆ; ಚೀನಾ ಮೂಲದ ಶಿಕ್ಷಣ ಸಂಸ್ಥೆ ವಿರುದ್ಧ ಇಡಿ ಕ್ರಮ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts