More

    ಅಭಿಮಾನಿಗಳು ಇಲ್ಲದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಆಡಲ್ಲ ಎಂದು ಜೋಕೋ ಹೇಳಿದ್ಯಾಕೆ..?

    ಬೆಲ್‌ಗ್ರೇಡ್: ಕ್ರೀಡಾಪಟುಗಳಿಗೆ ಮೈದಾನದಲ್ಲಿ ಅಭಿಮಾನಿಗಳು ಇದ್ದರಷ್ಟೇ ರಸದೌತಣ. ಮೈದಾನ, ಸ್ಟೇಡಿಯಂಗಳಲ್ಲಿ ಅಭಿಮಾನಿಗಳು ನೆರೆದಿದ್ದರೆ ಕ್ರೀಡಾಪಟುಗಳ ಜೋಶ್ ಹೇಳತೀರದು. ಇದೀಗ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟವನ್ನು ಪ್ರೇಕ್ಷಕರ ರಹಿತವಾಗಿ ಆಯೋಜಿಸಲು ಆಯೋಜಕರು ಚಿಂತನೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ವಿಶ್ವ ನಂ.1 ಟೆನಿಸ್ ಆಟಗಾರ ನೊವಾಕ್ ಜೋಕೊವಿಕ್, ಒಂದು ವೇಳೆ ಪ್ರೇಕ್ಷಕರನ್ನು ಕ್ರೀಡಾಕೂಟಕ್ಕೆ ನಿಷೇಧಿಸಿದರೆ ತಾವೂ ಕೂಡ ಸ್ಪರ್ಧೆಯಿಂದ ಹಿಂದೆ ಸರಿಯುವುದಾಗಿ ಹೇಳಿದ್ದಾರೆ.

    ಇದನ್ನೂ ಓದಿ: ಟೆಸ್ಟ್​ ವಿಶ್ವಕಪ್ ಫೈನಲ್​ ಪಂದ್ಯ ಕನ್ನಡ ಕಾಮೆಂಟರಿಯಲ್ಲೂ ನೇರಪ್ರಸಾರ

    ಅಭಿಮಾನಿಗಳಿಗೆ ಕ್ರೀಡಾಕೂಟ ಆಯೋಜಿಸಲು ಅನುಮತಿ ನೀಡಿದರಷ್ಟೇ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವುದಾಗಿ ಜೋಕೋ ಹೇಳಿದ್ದಾರೆ. ಜೋಕೊವಿಕ್‌ಗೂ ಮೊದಲು ರಾಫೆಲ್ ನಡಾನ್ ಹಾಗೂ ಸೆರೇನಾ ವಿಲಿಯಮ್ಸ್ ಕೂಡ ಇದೇ ರೀತಿ ಹೇಳಿದ್ದಾರೆ. ಅಲ್ಲದೆ, ರೋಜರ್ ಫೆಡರರ್ ಕೂಡ ಪ್ರೇಕ್ಷಕರಿಲ್ಲದೆ ಆಡುವುದು ಕಷ್ಟಕರ. ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಬಗ್ಗೆ ನನಗೆ ಎರಡು ಮನಸ್ಸು ಇದೆ ಎಂದು ಹೇಳಿದ್ದರು.

    ಇದನ್ನೂ ಓದಿ: ಪೈಲ್ವಾನ್​ಗಳಿಗೆ ನೀಡುವ ಆಹಾರವೇ ಬೇಕೆಂದ ಸುಶೀಲ್​, ಪೊಲೀಸ್​ ಕಸ್ಟಡಿಯಲ್ಲೇ ಬರ್ತ್​ಡೇ!

    ಜಪಾನ್ ವೈದ್ಯಕೀಯ ತಂಡವೊಂದು ಕ್ರೀಡಾಕೂಟ ಆಯೋಜನೆ ಕಷ್ಟಕರ ಎಂದು ಹೇಳಿದೆ. ಟೋಕಿಯೊ ನಗರವನ್ನೇ ತುರ್ತುಸ್ಥಿತಿ ಎಂದು ಪರಿಗಣಿಸಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಪ್ರೇಕ್ಷಕರ ರಹಿತವಾಗಿ ಕ್ರೀಡಾಕೂಟ ಆಯೋಜಿಸುವುದೇ ಉತ್ತಮ ಎಂದು ಟೋಕಿಯೊ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥ ಹರಾವೊ ಒಜಾಕಿ ಹೇಳಿದ್ದರು.

    ಹಾಟ್ ಫೋಟೋಗಳ ಮೂಲಕ ಭರ್ಜರಿ ಸೌಂಡ್ ಮಾಡುತ್ತಿದ್ದಾರೆ ವಿಂಡೀಸ್ ಕ್ರಿಕೆಟಿಗನ ಪತ್ನಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts