More

    ಎಂಟು ವರ್ಷಗಳ ನಂತರ ಕಲ್ಯಾಣ್​ ಜಿಆರ್​ಪಿನಲ್ಲಿ ಸಿಕ್ತು ಕಳುವಾಗಿದ್ದ ಚಿನ್ನದ ಎರಡು ಸರಗಳು!

    ಮುಂಬೈ: ಅದೃಷ್ಟ ಅಂದರೆ ಬಹುಶಃ ಇದುವೇ ಇರಬೇಕು. ಎಂಟು ವರ್ಷಗಳ ಹಿಂದೆ ಕಳುವಾಗಿದ್ದ ಚಿನ್ನದ ಎರಡು ಸರಗಳು ಮತ್ತೆ ಸಿಗುವುದೆಂಬ ಆಸೆಯನ್ನೇ ಬಿಟ್ಟಿದ್ದವರ ಕೈ ಸೇರಿದೆ. ಪ್ರಸ್ತುತ 70,000 ರೂಪಾಯಿ ಬೆಲೆ ಬಾಳುವ ಸರಗಳನ್ನು ಕಲ್ಯಾಣ್ ಗವರ್ನಮೆಂಟ್ ರೈಲ್ವೆ ಪೊಲೀಸ್ (ಜಿಆರ್​ಪಿ) ಭಾನುವಾರ ಸರದ ವಾರಸುದಾರ ಸಂದೀಪ್ ಘಾಗ್​ (31) ಅವರಿಗೆ ಹಸ್ತಾಂತರಿಸಿದ್ದಾರೆ.

    ಆ ಕ್ಷಣಗಳನ್ನು ಸಂದೀಪ್ ಘಾಗ್ ವಿವರಿಸಿದ್ದು ಹೀಗೆ- ಅಂದು ಪೊಲೀಸ್ ಒಬ್ಬರು ನನ್ನ ವಿಳಾಸ ಹುಡುಕುತ್ತ ಮನೆ ಹತ್ತಿರ ಬಂದಿದ್ದರು. ಅವರ ಆಗಮನ ಮನಸ್ಸನ್ನು ಕೊಂಚ ವಿಚಲಿತಗೊಳಿಸಿತಾದರೂ, ಸರ ಸಿಕ್ಕಿದೆ ಎಂದು ಅವರು ತಂದ ವಾರ್ತೆ ಸಮಾಧಾನ ಕೊಟ್ಟಿತ್ತು. 2012ರಲ್ಲಿ ಕೆಲಸ ಹುಡುಕುತ್ತ ಕಲ್ಯಾಣ್​ಗೆ ಹೊರಟಿದ್ದೆ. ಆಗ ರೈಲ್ವೆ ಟ್ರ್ಯಾಕ್​ನಲ್ಲಿ ಕಳ್ಳನೊಬ್ಬ ತಲೆಗೆ ಕಲ್ಲೆಸೆದು ಕತ್ತಿನಲ್ಲಿದ್ದ ಸರಗಳನ್ನು ಎಳೆದುಕೊಂಡು ಪರಾರಿಯಾಗಿದ್ದ. ಅಂದೇ ಕೇಸ್ ದಾಖಲಿಸಿದ್ದೆ. ಕಲ್ಯಾಣ್​ ಜಿಆರ್​ಪಿ ಕಳ್ಳನನ್ನು ಬಂಧಿಸಿದರು. ಆತನಿಂದ ಸರಗಳನ್ನೂ ವಶಪಡಿಸಿಕೊಂಡರು. ಆದರೆ, ಅದು ಕೋರ್ಟ್​ ವಿಚಾರಣೆಯಲ್ಲಿ ಬಾಕಿ ಆಗಿತ್ತು. ಚಿನ್ನದ ಸರಗಳ ಹಸ್ತಾಂತರ ಸಾಧ್ಯವಿರಲಿಲ್ಲ. ನಾನು ಅದರ ಆಸೆಯನ್ನೇ ಬಿಟ್ಟಿದ್ದೆ. ಈಗ ಮತ್ತೆ ಕೈ ಸೇರಿದೆ. ನನ್ನ ತಾಯಿ ಈಗ ಅನಾರೋಗ್ಯಕ್ಕೀಡಾಗಿದ್ದು ಚಿಕಿತ್ಸೆಗಾಗಿ ದುಡ್ಡು ಹೊಂದಿಸಲು ಕಷ್ಟಪಡುತ್ತಿದ್ದೆ. ಈಗ ಇದನ್ನೇ ಬಳಸುವೆ.

    ಇದನ್ನೂ ಓದಿ: ಗಿಲ್ಗಿಟ್-ಬಾಲ್ಟಿಸ್ತಾನಕ್ಕೆ ಪ್ರಾಂತೀಯ ಸ್ಥಾನಮಾನ; ಭಾರತ ಆಕ್ರೋಶ..

    ಕಲ್ಯಾಣ್​ ಜಿಆರ್​ಪಿಯ ಹಿರಿಯ ಪೊಲೀಸ್ ಇನ್​ಸ್ಪೆಕ್ಟರ್ ಶಾರ್ದೂಲ್ ವಾಲ್ಮೀಕಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂತಹ ಅನೇಕ ಪ್ರಕರಣಗಳಲ್ಲಿ ದೂರುದಾರರು ಅನುಸರಣೆ ಮಾಡುವುದಿಲ್ಲ. ಪೊಲೀಸರೂ ಅಷ್ಟೇ. ಕೇಸ್ ದಾಖಲಿಸಿ ಸುಮ್ಮನಿದ್ದು ಬಿಡುತ್ತಾರೆ. ಘಾಗ್​ ಪ್ರಕರಣದಲ್ಲಿ ಆತ ಫೋನ್ ನಂಬರನ್ನೆ ಬದಲಾಯಿಸಿಕೊಂಡಿದ್ದ. ಆತನ ವಿಳಾಸದ ಆಧಾರ ಮೇಲೆ ಶೋಧ ಆರಂಭಿಸಿ, ಮನೆ ಪತ್ತೆ ಹಚ್ಚಿ ವಿಷಯ ತಲುಪಿಸಲಾಗಿದೆ ಎಂದು ವಿವರಿಸಿದ್ದಾರೆ. (ಏಜೆನ್ಸೀಸ್)

    ಹೊಟ್ಟೆಪಾಡಿಗಾಗಿ ಯುವಕ ಆಯ್ದುಕೊಂಡ ಕೆಲಸಕ್ಕೆ ಬೇಸ್ತು ಬಿದ್ರು ಜನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts