More

    ಹೊಟ್ಟೆಪಾಡಿಗಾಗಿ ಯುವಕ ಆಯ್ದುಕೊಂಡ ಕೆಲಸಕ್ಕೆ ಬೇಸ್ತು ಬಿದ್ರು ಜನ!

    ನವದೆಹಲಿ: ಕೋವಿಡ್ ನಿಯಮ ಉಲ್ಲಂಘಿಸಿದ್ದೀರಿ, ದಂಡ ಪಾವತಿಸಿ ಎಂದು ಹಣ ವಸೂಲಿ ಮಾಡುತ್ತಿದ್ದ ಯುವಕನ ಗತ್ತು ಕಂಡು ಹಲವರು ಮಾಸ್ಕ್​ ಸರಿಪಡಿಸಿಕೊಂಡು ರಸ್ತೆ ಸಂಚರಿಸುತ್ತಿದ್ದರು. ಆರಕ್ಷಕ ವೇಷದಲ್ಲಿದ್ದ ಆತನನ್ನು ನೋಡಿ ಸಹವಾಸ ಬೇಡ ಎಂದವರೇ ಹೆಚ್ಚು. ಆದರೆ, ಸೆಕ್ಯೂರಿಟಿ ಗಾರ್ಡ್​ ಒಬ್ಬ ಪೊಲೀಸ್ ಠಾಣೆಗೇ ಕರೆ ಮಾಡಿ ಈ ವಿಚಾರ ಮುಟ್ಟಿಸಿದ. ಪೊಲೀಸರು ಸ್ಥಳಕ್ಕಾಗಮಿಸಿದಾಗ ಹೊರಬಿದ್ದ ಕಥೆಯೇ ಬೇರೆ!

    ಕೋವಿಡ್ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದ ಯುವಕ ಅಸಲಿ ಪೊಲೀಸ್ ಅಲ್ಲ!. ಆತ ಕೊಡ್ತಾ ಇದ್ದ ಚಲನ್ ಕೂಡ ಅಸಲಿ ಆಗಿರಲಿಲ್ಲ! ಸದ್ದಿಲ್ಲದೆ ನಡೆದ ಕಾರ್ಯಾಚರಣೆಯಲ್ಲಿ ಯುವಕ ಪೊಲೀಸ್ ಬಲೆಗೆ ಬಿದ್ದ. ಆತನ ಹೆಸರು ಉಪೇಂದ್ರ ಸಿಂಗ್. ವಯಸ್ಸು 23. ಸ್ವರೂಪ್​ ನಗರದ ನಿವಾಸಿ. ಹೊಟ್ಟೆಪಾಡಿಗೆ ಕೈಗೊಂಡ ಕಾರ್ಯವೆಂದು ಹೇಳಿಕೊಂಡಿದ್ದಾನೆ.

    ಇದನ್ನೂ ಓದಿ:  Web Exclusive | ನೂರಾರು ಕನ್ನಡ ಸಂಘಗಳಿಂದ ‘ವಿಶ್ವ ಕನ್ನಡ ಸಾಂಸ್ಕೃತಿಕ ಹಬ್ಬ’

    ಉಪೇಂದ್ರ ಸಿಂಗ್ ಗುರುವಾರ ರಾತ್ರಿ ತನ್ನ ಸ್ನೇಹಿತನೊಂದಿಗೆ ಅಶೋಕನಗರದ ಹೌಸಿಂಗ್ ಸೊಸೈಟಿಗೆ ಕಾರೊಂದರಲ್ಲಿ ಆಗಮಿಸಿದ್ದ. ಅಲ್ಲಿನ ನಿವಾಸಿಗಳ ವಿವರಗಳನ್ನೆಲ್ಲ ಕೇಳಿ ತಿಳಿದುಕೊಂಡದ್ದಲ್ಲದೆ ಕೆಲವರ ಬಳಿ ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಹಣವನ್ನೂ ವಸೂಲಿ ಮಾಡಿದ್ದ. ಉಪೇಂದ್ರ ಸಿಂಗ್ ಬಳಿ ಆತನ ಠಾಣಾ ವಿವರ, ಏನು ಹುದ್ದೆ ಎಂದು ಕೇಳಿದ ವೇಳೆ ತಡಬಡಾಯಿಸಿದ್ದ. ಅಲ್ಲದೇ ತೀವ್ರ ಪ್ರಶ್ನೆಗಳನ್ನು ಕೇಳತೊಡಗಿದಾಗ ಅಲ್ಲಿಂದ ತಲೆಮರೆಸಿಕೊಂಡಿದ್ದ ಎಂದು ಆ ಸೆಕ್ಯೂರಿಟಿ ಗಾರ್ಡ್​ ಪೊಲೀಸರಿಗೆ ಮಾಹಿತಿ ನೀಡಿದ್ದ.

    ಇದನ್ನೂ ಓದಿ: ಆಡಳಿತದಲ್ಲಿ ಕನ್ನಡಕ್ಕೆ ಕಾಯಕ ವರ್ಷ; ಮುಖ್ಯಮಂತ್ರಿ ಘೋಷಣೆ

    ಬಂಧಿತ ಉಪೇಂದ್ರ ಸಿಂಗ್ ಬಳಿ ಇದ್ದ ನಕಲಿ ಚಲನ್ ನೀಡಿ ವಸೂಲಿ ಮಾಡಿದ್ದ 1,000 ರೂಪಾಯಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆತನ ಜತೆಗೆ ಇನ್ನೊಬ್ಬನನ್ನೂ ಪೊಲೀಸರು ಬಂಧಿಸಿದ್ದು, ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)

    ಜಿಎಸ್​ಟಿ ಜಿಗಿತ: 8 ತಿಂಗಳ ಬಳಿಕ ಲಕ್ಷ ಕೋಟಿ ರೂ. ದಾಟಿದ ಸಂಗ್ರಹ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts