More

    ಕೋವಿಡ್ ನಿಯಮ ಉಲ್ಲಂಘನೆ; ಲಾಡ್ಜ್, ಕಾಲೇಜುಗಳ ವಿರುದ್ಧ ಪ್ರಕರಣ ಕ್ರಮ

    ಬಳ್ಳಾರಿ: ಹೊರರಾಜ್ಯಗಳಿಂದ ಗಣಿನಾಡಿಗೆ ಬಂದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಳಿದುಕೊಳ್ಳಲು ವಸತಿಗೃಹ ಕೊಟ್ಟ ಒಂಬತ್ತು ಲಾಡ್ಜ್ ಮಾಲೀಕರು ಹಾಗೂ ಪರೀಕ್ಷೆ ನಡೆಸಿದ ಆರು ಕಾಲೇಜುಗಳ ಮೇಲೆ ಮಂಗಳವಾರ ನಗರದಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಿವೆ.

    ಹರಿಯಾಣ, ಗುಜರಾತ್, ಛತ್ತೀಸಗಡ ಸೇರಿ ವಿವಿಧ ರಾಜ್ಯದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ನರ್ಸಿಂಗ್ ಪರೀಕ್ಷೆ ಬರೆಯಲು ಭಾನುವಾರ ಬಳ್ಳಾರಿಗೆ ಬಂದಿದ್ದರು. ಅವರೆಲ್ಲ ನಗರದ ವಿವಿಧ ಲಾಡ್ಜ್‌ಗಳಲ್ಲಿ ರೂಂ ಪಡೆದು ಉಳಿದುಕೊಂಡಿದ್ದರು. ಕೋವಿಡ್ ನೆಗಟಿವ್ ವರದಿ ಇಲ್ಲದಿದ್ದರೂ ಅವರಿಗೆ ವಸತಿ ಗೃಹಗಳಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗಿತ್ತು.

    ತದನಂತರ ಆರೋಗ್ಯ ಇಲಾಖೆ ವಿದ್ಯಾರ್ಥಿಗಳಿಗೆ ಕೋವಿಡ್ ಟೆಸ್ಟ್ ಮಾಡಿದಾಗ 68 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದರಿಂದ ಕೋವಿಡ್ ಮತ್ತಷ್ಟು ಹೆಚ್ಚಾಗುವ ಆತಂಕ ಮನೆ ಮಾಡಿದೆ. ದೂರದ ಊರುಗಳಿಂದ ಬಂದರೂ ಕರೊನಾ ನಿಯಮ ಪಾಲಿಸದೇ ಇರುವುದನ್ನು ಮನಗಂಡ ಜಿಲ್ಲಾಡಳಿತ, ಕೊನೆಗೆ ಪೊಲೀಸ್ ಇಲಾಖೆಯ ಮೂಲಕ ತಪ್ಪೆಸಿಗಿದವರ ಮೇಲೆ ಕಾನೂನು ಛಾಟಿ ಬೀಸಿದೆ.

    ಈ ಲಾಡ್ಜ್‌ಗಳ ವಿರುದ್ಧ ಆಗಿದೆ ಎಫೈರ್
    ಅನ್ಯ ರಾಜ್ಯದವರು ಲಾಡ್ಜ್‌ಗೆ ಬರುವುದನ್ನು ನಿಷೇಧಿಸದೇ ಬಂದವರ ಕುರಿತು ಮಾಹಿತಿ ಕೊಡದೇ ನಿಯಮ ಉಲ್ಲಂಘಿಸಿದ ಕಾರಣ ಲಾಡ್ಜ್ ಮಾಲೀಕರ ವಿರುದ್ಧ ಬಳ್ಳಾರಿ ತಹಸೀಲ್ದಾರ ರೆಹಮಾನ್ ಪಾಷಾ ದೂರು ನೀಡಿದ್ದರು. ಇದರ ಅನ್ವಯ ನಗರದ ವಿಷ್ಣು ಪ್ರಿಯಾ ಲಾಡ್ಜ್, ವಿದ್ಯಾ ಕಂರ್ಟ್ಸ್, ಮರ್ಚೆಡ್ ರೆಸಿಡೆನ್ಸಿ, ಚಾಲುಕ್ಯ ಲಾಡ್ಜ್, ಬಿಡಿಡಿಎಸ್ ಬಳ್ಳಾರಿ, ಅಮಲಾ ನಿವಾಸ ವಿದ್ಯಾನಗರ ಬಳ್ಳಾರಿ ಮತ್ತು ಮಾತಾ ಪಂಕ್ಷನ್ ಹಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.

    ಕೋವಿಡ್ ಸಮಯದಲ್ಲಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಕರೆಯಿಸಿ ಎಸ್‌ಒಪಿ ಪಾಲನೆ ಮಾಡದ ಇಂಡಿಯನ್ ನರ್ಸಿಂಗ್ ಕಾಲೇಜು, ಪೂಜಾ ಸ್ಕೂಲ್ ಆ್ ನರ್ಸಿಂಗ್, ನ್ಯೂ ಎರಾ ನರ್ಸಿಂಗ್ ಕಾಲೇಜು, ಕರ್ನಾಟಕ ನರ್ಸಿಂಗ್ ಕಾಲೇಜು, ಶರಭೇಶ್ವರ ನರ್ಸಿಂಗ್ ಕಾಲೇಜು, ಬೆಸ್ಟ್ ಸ್ಕೂಲ್ ಆ್ ನರ್ಸಿಂಗ್ ಕಾಲೇಜುಗಳ ವಿರುದ್ಧ ಗಾಂಧಿನಗರ ಮತ್ತು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದೆ.
    | ಸೈದುಲು ಅದಾವತ್ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts