More

    ಪ್ರಾಗ್ಜ್ಯೋತಿಷಪುರದ ರಾಣಿ ಸಿಟ್ಟಾಗಿದ್ದೇಕೆ? ನಟ್ಟಿರುಳಲಿ ಪ್ರಸಂಗದ ನಡುವೆ ಆಯ್ತು ರಸಭಂಗ!

    ಬೆಂಗಳೂರು: ಇದು ಪ್ರಸಂಗದೊಳಗೊಂದು ಪ್ರಸಂಗ, ಅದರಲ್ಲಿ ಪ್ರಾಗ್ಜ್ಯೋತಿಷಪುರದ ರಾಣಿ ಸಿಟ್ಟಾಗಿ ಆಯಿತು ರಸಭಂಗ!
    – ಹೌದು.. ಯಕ್ಷಗಾನ ಪ್ರಸಂಗವೊಂದರಲ್ಲಿ ವೇಷಧಾರಿಯೊಬ್ಬರು ಪ್ರಸಂಗದ ಹೊರತಾಗಿ ಮಾತನಾಡಿ ಯಕ್ಷಗಾನ ಕಲಾರಸಿಕರಿಗೆ ರಸಭಂಗವಾಗಿದೆ. ಅದೀಗ ಯಕ್ಷಗಾನಪ್ರಿಯರ ವಲಯದಲ್ಲಿ ಚರ್ಚೆಗೆ ಒಳಗಾಗಿದ್ದು ಸರಿತಪ್ಪುಗಳ ವಿಮರ್ಶೆ ನಡೆಯಲಾರಂಭಿಸಿದೆ.

    ಇತ್ತೀಚೆಗೆ ಕರಾವಳಿ ಪ್ರದೇಶದಲ್ಲಿ ಮೇಳವೊಂದು ಯಕ್ಷಗಾನ ಪ್ರದರ್ಶನ ನೀಡಿದ್ದು, ಅದರಲ್ಲಿ ಪ್ರಾಗ್ಜ್ಯೋತಿಷಪುರದ ರಾಣಿ ಮಾತನಾಡುವ ಸನ್ನಿವೇಶ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವೇಷಧಾರಿ, ರಾಣಿಯಾಗಿ ಮಾತನಾಡುತ್ತಿದ್ದರೂ ಕೆಲವು ಪ್ರೇಕ್ಷಕರ ವರ್ತನೆಯಿಂದ ವಿಚಲಿತರಾಗಿ ಪಾತ್ರದ ಸಂಭಾಷಣೆ ಹೊರತಾದ ಮಾತನಾಡಿದರು.

    ರಂಗಸ್ಥಳದ ಎದುರಿಗೇ ಇದ್ದ ಕೆಲವು ಹುಡುಗರು ಮೊಬೈಲ್​ಫೋನ್​ ಬಳಸುತ್ತಿದ್ದುದರಿಂದ ಕಿರಿಕಿರಿಗೆ ಒಳಗಾಗಿ ವೇಷಧಾರಿ ತನ್ನ ಪಾತ್ರವನ್ನೂ ಮರೆತು ಅವರ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್​ ಆಗಿದ್ದು ಸರಿ-ತಪ್ಪುಗಳ ವಿಮರ್ಶೆ ನಡೆಯುತ್ತಿದೆ.

    ಪ್ರೇಕ್ಷಕರು ತಲ್ಲೀನರಾಗಿ ನೋಡಿದರೆ ಪಾತ್ರಧಾರಿಗಳಿಗೂ ಉತ್ಸಾಹವಿರುತ್ತದೆ, ಸಾರ್ವಜನಿಕರು ಒಂದು ಕಲೆಯನ್ನು ಸಂಪೂರ್ಣವಾಗಿ ಆಸ್ವಾದಿಸಬೇಕು ಎಂದು ಒಂದಷ್ಟು ಮಂದಿ ಆ ಕಲಾವಿದರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದಷ್ಟು ಮಂದಿ ಪ್ರೇಕ್ಷಕರಿಗೆ ಇರುವಷ್ಟೇ ಶಿಸ್ತು ಕಲಾವಿದರಿಗೂ ಇರಬೇಕು. ಕಲಾ ಪ್ರದರ್ಶನಕ್ಕೆ ಅಡ್ಡಿ ಆಗುವಂತೆ ಪ್ರೇಕ್ಷಕರ ವರ್ತನೆ ಇದ್ದಿದ್ದರೆ ಅದನ್ನು ಆ ಸನ್ನಿವೇಶದ ಬಳಿಕ ಬೇರೆಯವರಿಂದ ಹೇಳಿಸಬೇಕಿತ್ತು. ಅದರ ಬದಲು ವೇಷಧಾರಿಯೇ ರಂಗಸ್ಥಳದಿಂದಲೇ ಹಾಗೆ ಹೇಳಬಾರದಿತ್ತು ಎಂದು ಒಂದಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋ ಹಂಚಿಕೆ ಮುಂದುವರಿದಿದ್ದು, ಪರ-ವಿರೋಧದ ಚರ್ಚೆ ಕೂಡ ಅಲ್ಲಲ್ಲಿ ಮತ್ತೆ ಮತ್ತೆ ಕೇಳಿಬರುತ್ತಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಸದನದಲ್ಲಿ ಬಟ್ಟೆ ಬಿಚ್ಚಿದ ಸಂಗಮೇಶ್ ವಿರುದ್ಧ ಹಕ್ಕುಚ್ಯುತಿ ಮಂಡನೆ; ನಾನು ಅಂಗಿ ಬಿಚ್ಚಿಲ್ಲ ಎಂದು ಗೂಳಿಹಟ್ಟಿ ಶೇಖರ್ ಸ್ಪಷ್ಟನೆ

    ಇಲ್ಲಿ ಕಪ್ಪು ಬಟ್ಟೆ ತೊಟ್ಟವರಿಗೆ ಪ್ರವೇಶವಿಲ್ಲ!; ಕಪ್ಪು ಮಾಸ್ಕ್ ಧರಿಸಿದವರಿಗೂ ನಿರ್ಬಂಧ!!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts