More

    ಕಚೇರಿಗಳ ನವೀಕರಣಕ್ಕೆ ಒಪ್ಪಿಗೆ ಕಡ್ಡಾಯ: ಬಳ್ಳಾರಿ ಡಿಸಿ ಪವನ್‌ಕುಮಾರ್ ಮಾಲಪಾಟಿ ಸೂಚನೆ

    ಬಳ್ಳಾರಿ: ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಇಲಾಖೆಗಳ ಜಿಲ್ಲಾ ಕಚೇರಿ ಕಟ್ಟಡಗಳ ನವೀಕರಣ ಮತ್ತು ಹೊಸದಾಗಿ ನಿರ್ಮಿಸಲು ಜಿಲ್ಲಾಡಳಿತದ ಅನುಮತಿ ಪಡೆಯುವುದು ಕಡ್ಡಾಯ ಎಂದು ಡಿಸಿ ಪವನ್‌ಕುಮಾರ್ ಮಾಲಪಾಟಿ ಹೇಳಿದರು.

    ನಗರದ ಸರ್ಕಾರಿ ಅತಿಥಿಗೃಹದ ಸಮೀಪ ನಿರ್ಮಾಣವಾಗುತ್ತಿರುವ ಜಿಲ್ಲಾ ಸಂಕೀರ್ಣದ ಪ್ರಗತಿ ಮತ್ತು ಇಲಾಖೆಗಳ ಕಚೇರಿ ಹಂಚಿಕೆಗೆ ಸಂಬಂಧಿಸಿದಂತೆ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

    ವಿವಿಧ ಇಲಾಖೆಗಳ ಜಿಲ್ಲಾ ಕಚೇರಿಗಳು ಹಾಗೂ ಅತ್ಯವಶ್ಯಕ ನಾಗರಿಕ ಸೇವೆಗಳು ಒಂದೇ ಸೂರಿನಡಿ ದೊರಕಲೆಂಬ ಉದ್ದೇಶದಿಂದ ಬಳ್ಳಾರಿಯ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಜಿಲ್ಲಾಡಳಿತ ಭವನ ನಿರ್ಮಿಸಲಾಗುತ್ತಿದೆ. ತಹಸಿಲ್ ಕಚೇರಿ, ಖಜಾನೆ, ಆಹಾರ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಆರೋಗ್ಯ ಇಲಾಖೆ, ಜವಳಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ, ಸಹಕಾರ ಸಂಘಗಳ ಇಲಾಖೆ, ವಿಭಾಗೀಯ ಲೆಕ್ಕಾಧಿಕಾರಿಗಳ ಕಚೇರಿ, ವಾರ್ತಾ, ಭೂ ದಾಖಲೆ, ಅಂಕಿಸಂಖ್ಯೆ ಇಲಾಖೆ ಸೇರಿ ಬಹಳಷ್ಟು ಕಚೇರಿಗಳು ನೂತನವಾಗಿ ನಿರ್ಮಾಣವಾಗುತ್ತಿರುವ ಜಿಲ್ಲಾ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ತಿಳಿಸಿದರು.

    ಇಲಾಖೆಗಳ ಅಧಿಕಾರಿಗಳು ಹಾಲಿ ಕಚೇರಿಗಳ ನವೀಕರಣ ಮತ್ತು ಹೊಸದಾಗಿ ಕಟ್ಟಿಸುವುದಕ್ಕೆ ಮುಂದಾಗುವುದು ಬೇಡ. ಆ ರೀತಿಯಾದಲ್ಲಿ ಜಿಲ್ಲಾಧಿಕಾರಿ ಒಪ್ಪಿಗೆ ಪಡೆದುಕೊಂಡು ಮುಂದುವರಿಯಬೇಕು ಎಂದು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts