More

    ಸಿಂಗಟಾಲೂರು ಏತ ನೀರಾವರಿ ಅನುಷ್ಠಾನವಾಗಲಿ; ಜಿಲ್ಲಾಧಿಕಾರಿ ಕಚೇರಿ ಎದುರು ರೈತರ ಪ್ರತಿಭಟನೆ

    ಕೊಪ್ಪಳ: ಸಿಂಗಟಾಲೂರು ಏತ ನೀರಾವರಿ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಗದಗ ಜಿಲ್ಲೆಯ ಮುಂಡರಗಿ ಹಾಗೂ ಕೊಪ್ಪಳ ತಾಲೂಕಿನ ರೈತರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

    30 ವರ್ಷದ ಹಿಂದೆ ಯೋಜನೆಗೆ ಮಂಜೂರಾತಿ ಸಿಕ್ಕಿದೆ. ಆದರೆ, ಈವರೆಗೂ ಮುಂಡರಗಿ ಹಾಗೂ ಕೊಪ್ಪಳ ಭಾಗದ ಹೊಲಗಳಿಗೆ ನೀರು ಬಂದಿಲ್ಲ. ಆರು ವರ್ಷಗಳಿಂದ ಯೋಜನೆ ಬಲ ಭಾಗದ ಹಡಗಲಿ ತಾಲೂಕು ನೀರಾವರಿಯಾಗಿದೆ. ಎಡ ಭಾಗದ ರೈತರಿಗೆ ಅನ್ಯಾಯ ಮಾಡಲಾಗಿದೆ. ಯೋಜನೆಗೆ ಮೂರು ಸಾವಿರ ಕೋಟಿ ರೂ. ವೆಚ್ಚ ಮಾಡಲಾಗಿದೆ. ಕಾಲುವೆ ಮೂಲಕ ನೀರಾವರಿ ಮಾಡುವುದು ಯೋಜನೆಯ ಮೂಲ ಉದ್ದೇಶವಾಗಿತ್ತು. ಇದೀಗ ಹನಿ ನೀರಾವರಿಗೆ ಯೋಜನೆ ಬದಲಿಸಲಾಗಿದೆ. ಯೋಜನೆಯಿಂದ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಹೊಟ್ಟೆ ತುಂಬುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಹನಿ ನೀರಾವರಿ ಬದಲು ಕಾಲುವೆ ಮೂಲಕ ನೀರು ಹರಿಸಬೇಕು. ಯೋಜನೆಯಡಿ ಹಂಚಿಕೆಯಾದ 18 ಟಿಎಂಸಿ ನೀರು ಸದ್ಬಳಕೆಯಾಗಬೇಕು. ಮುಳುಗಡೆಯಾಗುವ ಗ್ರಾಮಗಳನ್ನು ಕೂಡಲೇ ಸ್ಥಳಾಂತರ ಮಾಡಬೇಕು. ಈವರೆಗೆ ಖರ್ಚಾದ ಹಣದ ಕುರಿತು ತನಿಖೆ ನಡೆಸಬೇಕು. ಜನಪ್ರತಿನಿಧಿಗಳು ಎಚ್ಚೆತ್ತು ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು. ಹೋರಾಟ ಸಮಿತಿ ಮುಖಂಡರಾದ ವೈ.ಎನ್.ಗೌಡರ್, ಭರಮಪ್ಪ ನಗರ್, ರೇವಣಪ್ಪ ಕಟ್ಟಿಮನಿ, ಹೊನ್ನಪ್ಪಗೌಡ ಪಾಟೀಲ್, ತೋಟಪ್ಪ ಶಿಂಟ್ರ, ಚಂದ್ರಪ್ಪ ಬಳ್ಳಾರಿ, ಖಾಜಾಹುಸೇನ್, ದ್ಯಾಮವ್ವ ಲಮಾಣಿ, ಸಿದ್ದವ್ವ ಚೌವ್ಹಾಣ್, ರಾಮವ್ವ ನಾಯ್ಕ ಮತ್ತು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts