More

    ಹಳ್ಳಕ್ಕೆ ರಾಸಾಯನಿಕ ಬಿಡುವುದು ಸಲ್ಲ; ಕೈಗಾರಿಕಾ ಪ್ರದೇಶ ವ್ಯಾಪ್ತಿಯ ರೈತರ ಒತ್ತಾಯ

    ಡಿಸಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿಗೆ ಮನವಿ

    ರಾಯಚೂರು: ನಗರದ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಗಳಿಂದ ರಾಸಾಯನಿಕ ತ್ಯಾಜ್ಯವನ್ನು ಹಳ್ಳಕ್ಕೆ ಬಿಡುತ್ತಿರುವುದಕ್ಕೆ ತಡೆಯೊಡ್ಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಫ್ಯಾಕ್ಟರಿ ಸುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

    ಜಿಲ್ಲಾಧಿಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಧಿಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿದರು. ಹಳ್ಳಕ್ಕೆ ರಾಸಾಯನಿಕ ತ್ಯಾಜ್ಯ ಬಿಡುತ್ತಿರುವುದರಿಂದ ಜನ, ಜಾನುವಾರು ಆರೋಗ್ಯದ ಮೇಲೆ ದುಷ್ಟಪರಿಣಾಮ ಉಂಟಾಗುತ್ತಿದೆ. ಕೋಣದ ಹಳ್ಳದಿಂದ ಪೈಪ್‌ಲೈನ್ ಮೂಲಕ ಚಿಕ್ಕಸುಗೂರು, ವಡ್ಲೂರು, ಹೆಗ್ಗನಸಹಳ್ಳಿ, ಹನುಮನದೊಡ್ಡಿ, ಗಂಜಳ್ಳಿ, ದೇವಸುಗೂರು ಗ್ರಾಮಗಳಲ್ಲಿ ನೂರಾರು ರೈತರು ತಮ್ಮ ಜಮೀನಿಗೆ ನೀರು ಹರಿಸಿಕೊಳ್ಳುತ್ತಿದ್ದಾರೆ. ಫ್ಯಾಕ್ಟರಿಗಳು ರಾಸಾಯನಿಕ ತ್ಯಾಜ್ಯವನ್ನು ಸಂಸ್ಕರಿಸದೇ ನೇರವಾಗಿ ಹಳ್ಳಕ್ಕೆ ಹರಿಸುತ್ತಿರುವುದರಿಂದ ಬೆಳೆಗಳು ಒಣಗುತ್ತಿವೆ. ಕೆಲವು ಫ್ಯಾಕ್ಟರಿಗಳು ಟ್ಯಾಂಕರ್ ಮೂಲಕ ರಾಸಾಯನಿಕ ತ್ಯಾಜ್ಯ ತಂದು ಹಳ್ಳಕ್ಕೆ ಸುರಿಯುತ್ತಿವೆ. ಈ ಕುಡಿದ ಎಸ್ಟೋ ದನಗಳು ಸತ್ತಿವೆ. ಕೂಡಲೇ ಇದಕ್ಕೆ ತಡೆಯೊಡ್ಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts