More

    ಸಹಿಷ್ಣುತೆಯ ವಾತಾವರಣ ಜಗತ್ತಿನ ಅಗತ್ಯ, ಡಾ.ಎಂ.ಎಸ್.ಎಂ.ಅಬ್ದುರ‌್ರಶೀದ್ ಝೈನಿ ಅಭಿಪ್ರಾಯ

    ಕಾರ್ಕಳ: ವೈವಿಧ್ಯತೆಯನ್ನು ಅಂಗೀಕರಿಸುವ ವಿಶಾಲ ಮನೋಭಾವ ಸರ್ವರಲ್ಲೂ ಹುಟ್ಟುಹಾಕಬೇಕು. ಸಹಿಷ್ಣುತೆಯ ವಾತಾವರಣ ಜಗತ್ತಿನ ತುರ್ತು ಅನಿವಾರ್ಯ. ಪರಸ್ಪರ ನಂಬಿಕೆ, ವಿಶ್ವಾಸ ಬೆಳೆಸುವವ ಮೂಲಕ ಪ್ರೀತಿ, ಸೌಹಾರ್ದ ಹಂಚುವುದೇ ಪ್ರವಾದಿ ಪೈಗಂಬರ್ ಅವರ ಜೀವನ ಪಾಠವಾಗಿದೆ ಎಂದು ಕರ್ನಾಟಕ ಕಲ್ಚರಲ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಎಸ್.ಎಂ.ಅಬ್ದುರ‌್ರಶೀದ್ ಝೈನಿ ಹೇಳಿದರು.

    ಕಾರ್ಕಳ ನಗರದ ಸಾಲ್ಮರ್ ಸಭಾಂಗಣವೊಂದರಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ತಾಲೂಕು ಘಟಕದ ವತಿಯಿಂದ ಕಾರ್ಕಳ ಜಾಮಿಯಾ ಶಾದಿ ಮಹಲ್‌ನಲ್ಲಿ ನ.10ರಂದು ನಡೆದ ಮಾನವತೆಯ ಪ್ರತಿಪಾದಕ ಪ್ರವಾದಿ ಮುಹಮ್ಮದ್ ಮುಸ್ತಫಾರ ಜೀವನ ಮತ್ತು ಸಂದೇಶ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಸಾಹಿತಿ ಮುನಿರಾಜ ರೆಂಜಾಳ ಮಾತನಾಡಿ, ಭಾರತದಂತಹ ಸರ್ವಧರ್ಮಗಳ ನೆಲದಲ್ಲಿ ಬದುಕುವ ಜನರಿಗೆ ಮೂರು ಪ್ರಧಾನ ಕರ್ತವ್ಯಗಳಿವೆ. ಧರ್ಮವನ್ನು ಅರಿತು ಸರಿಯಾಗಿ ಆಚರಿಸುವುದು, ನಾವು ಹುಟ್ಟಿದ ಧರ್ಮವನ್ನು ಇನ್ನಷ್ಟು ಅರಿತುಕೊಳ್ಳುವುದು ಹಾಗೂ ಇನ್ನಿತರ ಧರ್ಮಗಳ ಆಚರಣೆಗಳನ್ನು ಗೌರವಿಸುವುದನ್ನು ರೂಢಿಸಿಕೊಂಡರೆ ನಮ್ಮ ನಾಡು ಸೌಹಾರ್ದದ ಬೀಡಾಗುತ್ತದೆ ಎಂದರು.

    ಉಡುಪಿ ಕ್ಯಾಥೊಲಿಕ್ ಧರ್ಮ ಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಚೇತನ್ ಲೋಬೋ ಮಾತನಾಡಿ ಧರ್ಮಗಳೆಲ್ಲವೂ ಸರಿಯಾದುದನ್ನೇ ಹೇಳಿದೆ. ಆದರೆ ಆಚರಿಸುವ ನಾವು ಶುದ್ಧವಾಗಿರಬೇಕು. ಮನಶುದ್ಧಿಯಿಂದ ಆಚರಣೆಗಳು ಸ್ವೀಕೃತಗೊಳ್ಳುತ್ತವೆ ಎಂದರು.
    ಲ್ವಾ ಎ ನೂರ್ ಪುಲ್ಕೇರಿಯ ಮೌಲಾನಾ ಸಯೀದ್ ರಝಾ ನೂರಿ ಖಿರಾಅತ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ ಅಧ್ಯಕ್ಷ ಮುಹಮ್ಮದ್ ಯಾಸೀನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಲಯ ಜೇಸೀಸ್‌ನ ಅಧ್ಯಕ್ಷ ಪಿ.ಪಿ.ಪಿ. ಕಾರ್ತಿಕೇಯ ಮದ್ಯಸ್ಥ, ಮುಸ್ಲಿಂ ಒಕ್ಕೂಟದ ತಾಲೂಕು ಅಧ್ಯಕ್ಷ ಮಹಮ್ಮದ್ ಗೌಸ್ ಉಪಸ್ಥಿತರಿದ್ದರು. ಕಾರ್ಕಳ ಜಮಾತ್ ಅಧ್ಯಕ್ಷ ಅಶ್ಫಕ್ ಅಹಮ್ಮದ್ ಸ್ವಾಗತಿಸಿದರು. ಇಕ್ಬಾಲ್ ಅಹಮ್ಮದ್ ನಿರೂಪಿಸಿದರು. ಪತ್ರಕರ್ತ ಮಹಮ್ಮದ್ ಶರೀಫ್ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts