More

    ಜಿಲ್ಲಾ ನಾಯಕರಲ್ಲಿ ಭಿನ್ನಾಭಿಪ್ರಾಯವಿಲ್ಲ

    ಗೋಕಾಕ: ಬಿಜೆಪಿಗೆ ಕಾರ್ಯಕರ್ತರೇ ಜೀವಾಳ. ರಾಜ್ಯಸಭೆಗೆ ನನ್ನ ಅಯ್ಕೆಯಿಂದ ಜಿಲ್ಲಾ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

    ನಗರದ ಶೂನ್ಯ ಸಂಪಾದನ ಮಠಕ್ಕೆ ಭಾನುವಾರ ಭೇಟಿ ನೀಡಿ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ ರಾಷ್ಟ್ರಮಟ್ಟದ ಸ್ಥಾನ ದಯಪಾಲಿಸಿದೆ.

    ಜಾರಕಿಹೊಳಿ ಸಹೋದರರು ಮತ್ತು ನನ್ನ ಮಧ್ಯೆ ಒಳ್ಳೆಯ ಸಂಬಂಧವಿದೆ. ನಾನು ನಾಮಪತ್ರ ಸಲ್ಲಿಸುವಾಗ ಸಚಿವ ರಮೇಶ ಮತ್ತು ಪ್ರಮಾಣಪತ್ರ ಸ್ವೀಕರಿಸುವಾಗ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಬಂದು ನನಗೆ ಆಶೀರ್ವಾದ ಮಾಡಿದ್ದಾರೆ. ಎಂದರು.

    ಮಲ್ಲಿಕಾರ್ಜುನ ಈಟಿ, ಮಹಾಂತೇಶ ವಾಲಿ, ಎಸ್.ಎ. ಕೋತವಾಲ, ಪರಶುರಾಮ ಭಗತ, ಅಬ್ಬಾಸ ದೇಸಾಯಿ, ಪ್ರಮೋದ ಜೋಶಿ, ಅಶೋಕ ಪಾಟೀಲ, ಶಿವು ಹಿರೇಮಠ, ಬಸವರಾಜ ಹಿರೇಮಠ, ಲೋಕಯ್ಯ ಹಿರೇಮಠ, ಚಂದ್ರಶೇಖರ ಕೊಣ್ಣೂರ, ಶಾಮಾನಂದ ಪೂಜೇರಿ ಇದ್ದರು. ಬಳಿಕ ನಗರದಲ್ಲಿರುವ ಸಂಗೊಳ್ಳಿ ರಾಯಣ್ಣ, ಶಿವಾಜಿ, ಬಸವೇಶ್ವರ ಹಾಗೂ ಅಂಬೇಡ್ಕರ್ ಮೂರ್ತಿಗಳಿಗೆ ಮಾಲಾರ್ಪಣೆ ಮಾಡಿದ ನಂತರ ಸಚಿವ ರಮೇಶ ಜಾರಕಿಹೊಳಿ ಅವರ ಕಾರ್ಯಾಲಯಕ್ಕೆ ಭೇಟಿ ನೀಡಿ ಕಾರ್ಯಕರ್ತರಿಂದ ಹಾಗೂ ಸಚಿವರರಿಂದ ಸತ್ಕಾರ ಸ್ವೀಕರಿಸಿದರು.

    ಶಾಲು, ಮಾಲೆ ಬದಲು ನೋಟ್‌ಬುಕ್ ತನ್ನಿ: ಅಭಿನಂದಿಸಲು ಅಭಿಮಾನಿಗಳು ಹಾಗೂ ಕಾರ್ಯಕರ್ತರು ಶಾಲು-ಮಾಲೆಗಳ ಬದಲು ನೋಟ್‌ಬುಕ್‌ಗಳನ್ನು ನೀಡಿದರೆ ಅವುಗಳನ್ನು ಬಡ ಹಾಗೂ ಕೂಲಿಕಾರ್ಮಿಕರ ಮಕ್ಕಳಿಗೆ ವಿತರಿಸುತ್ತೇನೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು. ದೇಶದಲ್ಲಿ ಮಹಾಮಾರಿ ಕರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಕಾರ್ಯಕರ್ತರು ದೈಹಿಕ ಅಂತರ ಕಾಯ್ದುಕೊಂಡು ಮಾಸ್ಕ್ ಧರಿಸಿ ಭೇಟಿ ಮಾಡಬೇಕು ಎಂದು ವಿನಂತಿಸಿಕೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts