More

    ತಿಂಗಳೊಳಗೆ ಸಿಂಧನೂರು, ಕುಷ್ಟಗಿಗೆ ರೈಲು: ಸಂಗಣ್ಣ ಕರಡಿ

    ಕೊಪ್ಪಳ:ಲೋಕಸಭಾ ವ್ಯಾಪ್ತಿಯ ರೈಲ್ವೆ ಅಭಿವೃದ್ಧಿ ಕಾಮಗಾರಿಗಳು, ಲೋಕಾರ್ಪಣೆ ಸೇರಿ ಇತರ ವಿಷಯಗಳ ಕುರಿತು ಮಂಗಳವಾರ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್​ ಕಿಶೋರ್​ ಹಾಗೂ ಇತರ ಅಧಿಕಾರಿಗಳ ಜತೆ ಮಂಗಳವಾರ ಚರ್ಚಿಸಿದ್ದು, ತಿಂಗಳೊಳಗೆ ಕುಷ್ಟಗಿ, ಸಿಂಧನೂರುವರೆಗೆ ರೈಲು ಸಂಚಾರ ಆರಂಭವಾಗಲಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

    ಜ.22ವರೆಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆಗಲಿದೆ. ಆಂಜನೇಯ ಜನಿಸಿದ ಅಂಜನಾದ್ರಿಯಿಂದ ಅಯೋಧ್ಯೆಗೆ ವಿಶೇಷ ರೈಲು ಬಿಡಲು ಒತ್ತಾಯಿಸಿರುವೆ. ಈ ಬಗ್ಗೆ ತಾಂತ್ರಿಕ ಪರಿಶೀಲನೆ ನಡೆಯುತ್ತಿದೆ. ವಾರದೊಳಗೆ ಮತ್ತೊಂದು ಸಭೆ ನಿಗದಿಯಾಗಿದ್ದು, ಅಯೋಧ್ಯೆಗೆ ರೈಲು ಸಂಚಾರ ಆರಂಭಿಸುವ ವಿಶ್ವಾಸವಿದೆ ಎಂದು ಮಾಹಿತಿ ನೀಡಿದ್ದಾರೆ.

    ಗದಗ-ವಾಡಿ ರೈಲು ಮಾರ್ಗ ಲೋಕಾರ್ಪಣೆ ಮಾಡಿ ಕುಷ್ಟಗಿವರೆಗೆ ರೈಲು ಓಡಿಸುವುದು, ಗಿಣಿಗೇರಾ-&ರಾಯಚೂರು ರೈಲು ಮಾರ್ಗದ ಕಾರಟಗಿಯಿಂದ ಸಿಂಧನೂರುವರೆಗೆ ರೈಲು ಓಡಿಸುವ ಬಗ್ಗೆ ಚರ್ಚಿಸಲಾಗಿದೆ. ತಿಂಗಳೊಳಗೆ ಸಂಚಾರ ಆರಂಭಿಸುವುದಾಗಿ ರೈಲ್ವೆ ಅಧಿಕಾರಿಗಳು ಭರವಸೆ ನೀಡಿದ್ದಾರೆ.


    ಹುಲಿಗಿ& ಮುನಿರಾಬಾದ್​ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಶ್ರೀವೇ ಭುಮಿಪೂಜೆ ನೆರವೇರಿಸಲಾಗುವುದು. ಗಿಣಿಗೇರಾ ಮೇಲ್ಸೇತುವೆ ಶೇ.90 ರಷ್ಟು ಪೂರ್ಣಗೊಂಡಿದ್ದು, ಶ್ರೀ ಲೋಕಾರ್ಪಣೆ ಆಗಲಿದೆ. ಕೊಪ್ಪಳ ನಗರದ ರೈಲ್ವೆ ಗೇಟ್​-63 ( ಸ್ವಾಮಿ ವಿವೇಕಾನಂದ ಸ್ಕೂಲ್​ ಹತ್ತಿರ) ಹಾಗೂ – 65 (ಕೆಇಬಿ ಗೇಟ್​) ಕೆಳಸೇತುವೆ ಕಾಮಗಾರಿ ಪ್ರಾರಂಭ ಮಾಡುವ ಬಗ್ಗೆ ಚರ್ಚಿಸಲಾಗಿದ್ದು, ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆಂದು ತಿಳಿಸಿದರು.

    ಸಚಿವ ಜೋಶಿಗೆ ಮನವಿ: ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಭೇಟಿ ಮಾಡಿದ ಸಂಶದ ಸಂಗಣ್ಣ ಕೊಪ್ಪಳ ಲೋಕಸಭಾ ಕ್ಷೇತ್ರದ ರೈಲ್ವೆ ಕಾಮಗಾರಿಗಳಿಗೆ ವೇಗ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲು ಮನವಿ ಮಾಡಿದರು. ಅಂಜನಾದ್ರಿ&ಅಯೋಧ್ಯೆ ರೈಲು ಸಂಚಾರಕ್ಕೆ ಒತ್ತಾಯಿಸಿದರು. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಮಾಜಿ ಅಧ್ಯಕ್ಷ ಅನಿಲ್​ ಸಹಸ್ರಬುದ್ದಿ, ಸಂತೋಷ ಕೆಲೋಜಿ, ನರಸಿಂಗರಾವ್​ ಕುಲಕರ್ಣಿ, ಸಿದ್ದರಾಮ ಸ್ವಾಮಿ, ವಿರುಪಾಕ್ಷಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts