More

    ಶಿಲೆಯಲ್ಲುಂಟು ರಾಮ-ಹನುಮನ ನಂಟು !

    • ಅಯೋಧ್ಯೆಗೆ ತೆರಳಿದ ಶಿಲೆಯಲ್ಲಿ ಉದಯಿಸುವ ಆಂಜನೇಯ
    • ಬಾಲ ರಾಮನಿಗೂ ಮುನ್ನ ಕಲ್ಲಿನಲ್ಲಿರಳಿದ ಅಂಜನಿ ಪುತ್ರ

    ವಿ.ಕೆ.ರವೀಂದ್ರ ಕೊಪ್ಪಳ
    ಅಯೋಧ್ಯೆ ಬಾಲರಾಮನ ವಿಗ್ರಹದ ಕಲ್ಲು ಮೈಸೂರಿನ ಎಚ್​.ಡಿ.ಕೋಟೆಯಿಂದ ರಫ್ತಾಗಿರುವುದು ನಾಡಿಗೆ ಹೆಮ್ಮೆ ತಂದಿದೆ. ಇದೇ ಕಲ್ಲಿನಲ್ಲಿ ರಾಮನಿಗೂ ಮೊದಲು ಆತನ ಪರಮ ಭಕ್ತ ಆಂಜನೇಯನ ಮೂರ್ತಿ ಸಿದ್ಧವಾಗಿರುವುದು ವಿಶೇಷ ! ಅಲ್ಲದೇ ರಾಮನ ವಿಗ್ರಹಕ್ಕೆ ಆಯ್ಕೆಯಾದ ಕಲ್ಲಿನ ಉಳಿದ ಭಾಗಗಳಲ್ಲಿ ಮತ್ತೊಂದು ಹನುಮನ ಮೂರ್ತಿ ಶ್ರೀವೇ ಸಿದ್ಧಗೊಳ್ಳಲಿದೆ.

    ಹೌದು, ರಾಮಾಯಣದಲ್ಲಿ ರಾಮ-ಸೀತೆ, ಲಕ್ಷಣರಂತೆ ಹನುಮ ವಿಶೇಷ ಸ್ಥಾನ ಪಡೆದಿದ್ದಾನೆ. ಅಯೋಧ್ಯೆಯಲ್ಲಿ ರಾಮ ವಿರಾಜಮಾನನಾದರೆ, ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಅಂಜನಿಪುತ್ರ ನೆಲೆಸಿದ್ದಾನೆ. ಕೊಪ್ಪಳದ ಶಿಲ್ಪಿ ಪ್ರಕಾಶ ಅವರು ಕುಟುಂಬ ಶಿಲ್ಪಕಲೆ ಪೋಷಿಸಿಕೊಂಡು ಬಂದಿದೆ. ಪ್ರಕಾಶ ಶಿಲ್ಪಿ ಅವರ ತಂದೆ ಶೇಖರಪ್ಪ ಶಿಲ್ಪಿ ಹನುಮನ ಪರಮ ಭಕ್ತರು. ಅವರ ನಿಧನ ಬಳಿಕ ಅವರ ಪುತ್ರ ಪ್ರಕಾಶ, ತಂದೆ ನೆನಪಿನಲ್ಲಿ ನಿತ್ಯ ಒಂದೊಂದು ಹನುಮನ ಮೂರ್ತಿ ತಯಾರಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಆ ಬಳಿಕವೇ ದಿನಚರಿ ಆರಂಭಿಸುತ್ತಾರೆ.

    ಶಿಲೆಯಲ್ಲುಂಟು ರಾಮ-ಹನುಮನ ನಂಟು !
    ಅಯೋಧ್ಯೆಗೆ ಕಳಿಸಲಾದ ಮೈಸೂರಿನ ಶಿಲೆ.

    2007ರ ಜ.26ರಿಂದ ಕೆತ್ತನೆ ಆರಂಭಿಸಿದ್ದು, ಈವರೆಗೆ 6,141 ಮೂರ್ತಿ ಕೆತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್​ 22ರಂದು ರಾಯಚೂರಿನ ವಿಜಯದಾಸರ ಮೂರ್ತಿ ಕೆತ್ತನೆಗೆ ಕಲ್ಲು ಆಯ್ಕೆ ಮಾಡಲು ಮೈಸೂರಿಗೆ ತೆರಳಿದ್ದರು. ಶಿಲ್ಪಿ ಶ್ರೀನಿವಾಸ ಎಂಬುವರ ಬಳಿ ಇದ್ದ ಕಲ್ಲನ್ನು ಪರೀಕ್ಷೆ ಮಾಡಿದ್ದಾರೆ. ಶಿಲ್ಪ ರಚನೆಗೆ ಉತ್ತಮವಾಗಿದ್ದರೂ ಅಳತೆ ಸಾಕಾಗಿರಲಿಲ್ಲ. ಊಟದ ಸಮಯ ಆಗಿದ್ದರಿಂದ ಪರೀಕ್ಷೆಗಾಗಿ ತುಂಡರಿಸಿದ ಕಲ್ಲಿನಲ್ಲೇ ಚಿಕ್ಕ ಹನುಮನ ಮೂರ್ತಿ ಕೆತ್ತಿ, ಪೂಜೆ ಸಲ್ಲಿಸಿದ್ದರು. ಬಳಿಕ ವಾಪಸ್ಸಾಗಿದ್ದಾರೆ.

    ಇವರು ಪರೀಕ್ಷೆಸಿದ ಕಲ್ಲನ್ನೇ ಶಿಲ್ಪಿ ಶ್ರೀನಿವಾಸ ಅವರು ಅಯೋಧ್ಯೆಗೆ ಕಳಿಸಿಕೊಟ್ಟಿದ್ದಾರೆ. ಅದರಲ್ಲೇ ಬಾಲ ರಾಮನ ಮೂರ್ತಿ ಸಿದ್ಧವಾಗಿದ್ದು, ಪ್ರತಿಷ್ಠಾಪನೆ ವಿಷಯ ಇನ್ನು ಅಂತಿಮಗೊಂಡಿಲ್ಲ ಎನ್ನಲಾಗಿದೆ. ವಿಷಯ ತಿಳಿದ ಶಿಲ್ಪಿ ಪ್ರಕಾಶ ಅವರು, ಬಾಕಿ ಉಳಿದ ಕಲ್ಲು ತಂದು ಕೊಪ್ಪಳದ ಸಹಸ್ರ ಆಂಜನೇಯ ದೇವಾಲಯಕ್ಕೆ ಹನುಮನ ಮೂರ್ತಿ ಕೆತ್ತಿ ಕೊಡಲು ಸಿದ್ಧತೆ ನಡೆಸಿದ್ದಾರೆ. ಮೈಸೂರಿನ ಶಿಲ್ಪಿ ಶ್ರೀನಿವಾಸ ಸಂಪರ್ಕ ಮಾಡಿದ್ದು, ಒಂದೆರೆಡು ದಿನದಲ್ಲಿ ತೆರಳಿ ಶಿಲೆ ಕೊಪ್ಪಳಕ್ಕೆ ಕೊಂಡು ತರಲು ತಯಾರಿ ಮಾಡಿಕೊಂಡಿದ್ದಾರೆ.

    ಶಿಲೆಯಲ್ಲುಂಟು ರಾಮ-ಹನುಮನ ನಂಟು !
    ತಂದೆ ನೆನಪಿನಲ್ಲಿ ಶಿಲ್ಪಿ ಪ್ರಕಾಶ ನಿರ್ಮಿಸಿರುವ ಸಾವಿರಾರು ಹನುಮನ ಮೂರ್ತಿಗಳು.

    ಜ.22ರಿಂದ ಕೆತ್ತನೆ ಆರಂಭ: ಅಯೋಧ್ಯೆ ಶ್ರೀರಾಮಚಂದ್ರನ ಮಂದಿರ ಜ.22ರಂದು ಲೋಕಾರ್ಪಣೆಗೊಳ್ಳಲಿದೆ. ಇದೇ ಶುಭ ಸಂದರ್ಭದಲ್ಲಿ ಪವನಸುತನ ಮೂರ್ತಿ ಕೆತ್ತನೆ ಆರಂಭಿಸಲು ಶಿಲ್ಪಿ ಪ್ರಕಾಶ ನಿರ್ಧರಿಸಿದ್ದಾರೆ. ಅಯೋಧ್ಯೆಗೆ ತೆರಳಿದ ಶಿಲೆಯನ್ನು ಸಮತಟ್ಟು ಮಾಡಲು ಕತ್ತರಿಸಿದ್ದು, ಅದರಲ್ಲಿ ಮೂರು, ಎರಡು, ನಾಲ್ಕು, ಐದು ಅಡಿವರೆಗೆ ತುಂಡರಿಸಲಾಗಿದೆ. ಇದೇ ಶಿಲೆಯಲ್ಲಿ ಹನುಮ ಮೂರ್ತಿ ಅರಳಲಿದೆ. ಮೈಸೂರಿನಿಂದ ತೆರಳಿದ ಶಿಲೆಯಲ್ಲಿ ರಚನೆಗೊಂಡ ರಾಮನ ವಿಗ್ರಹ ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಆದರೆ, ಈ ಆಂಜನೇಯನ ಮೂರ್ತಿಗೂ ವಿಶೇಷತೆ ದೊರೆಯಲಿದೆ. ರಾಮಾಯಣದಲ್ಲಿನ ರಾಮ-ಹನುಮರ ನಂಟು ಅಯೋಧ್ಯೆ-ಅಂಜನಾದ್ರಿವರೆಗೆ ಮುಂದುವರೆಯಲಿದೆ.

    ನಮ್ಮ ತಂದೆ ಹನುಮನ ಭಕ್ತರು. ಅವರ ನೆನಪಿನಲ್ಲಿ ನಿತ್ಯ ಒಂದೊಂದು ಆಂಜನೇಯನ ಮೂರ್ತಿ ರಚಿಸುತ್ತಿರುವೆ. ಅಯೋಧ್ಯೆಗೆ ತೆರಳಿದ ಮೈಸೂರಿನ ಶಿಲೆಯನ್ನು ವರ್ಷದ ಹಿಂದೆ ನಾವು ಪರೀಸಿದ್ದೆವು. ಆಗ ಅದರಲ್ಲಿನ ತುಂಡಿನಿಂದ ಹನುಮನ ಮೂರ್ತಿ ಕೆತ್ತಿದ್ದೆ. ಅದೇ ಶಿಲೆಯನ್ನು ಅಯೋಧ್ಯೆಗೆ ಕಳಿಸಲಾಗಿದೆ. ಅದರಲ್ಲಿ ಉಳಿದ ಭಾಗ ತರಿಸುತ್ತಿದ್ದು, ಮತ್ತೊಂದು ಹನುಮನ ಮೂರ್ತಿ ಮಾಡಲಾಗುವುದು.

    -ಪ್ರಕಾಶ ಕೊಪ್ಪಳ ಶಿಲ್ಪಿ

    ವರ್ಷದ ಹಿಂದೆ ಕೊಪ್ಪಳದ ಪ್ರಕಾಶ ಶಿಲ್ಪಿ ಅವರು ಶಿಲೆ ಪರೀೆ ಮಾಡಿದ್ದರು. ಆಗ ಒಂದು ಹನುಮನ ಮೂರ್ತಿ ಕೆತ್ತಿದ್ದರು. ಅದೇ ಕಲ್ಲನ್ನು ಅಯೋಧ್ಯೆಗೆ ಕಳಿಸಿಕೊಟ್ಟಿದ್ದೇವೆ. ಅದರಲ್ಲಿ ಕೆಲ ಭಾಗಗಳು ಉಳಿದಿವೆ. ಅವುಗಳನ್ನು ಕೊಂಡೊಯ್ಯುವುದಾಗಿ ತಿಳಿಸಿದ್ದಾರೆ. ಒಂದೆರೆಡು ದಿನದಲ್ಲಿ ಕಳಿಸುವ ವ್ಯವಸ್ಥೆ ಮಾಡಲಾಗುವುದು.

    -ಶ್ರೀನಿಸಾವ ಶಿಲ್ಪಿ. ಮೈಸೂರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts