ಗವಿಮಠ ದಾಸೋಹಕ್ಕೆ ಹರಿದು ಬರುತ್ತಿದೆ ದವಸ-ಧಾನ್ಯ

blank

ಕೊಪ್ಪಳ: ಗವಿಮಠದ ಗವಿಸಿದ್ದೇಶ್ವರ ಜಾತ್ರೋತ್ಸವದ ಸಿದ್ಧತೆ ಭರದಿಂದ ಸಾಗಿವೆ. ತಿಂಗಳ ಕಾಲ ನಡೆವ ಮಹಾ ದಾಸೋಹಕ್ಕೆ ಭಕ್ತರಿಂದ ನಿತ್ಯ ದವಸ&ಧಾನ್ಯ ಹರಿದು ಬರುತ್ತಿದೆ.

ಜಿಲ್ಲೆ, ಹೊರ ಜಿಲ್ಲೆಯ ವಿವಿಧ ಭಾಗದ ಭಕ್ತರು ಸಿಹಿ ಪದಾರ್ಥ, ದವಸ-, ಧಾನ್ಯ, ರೊಟ್ಟಿ ಶ್ರೀಮಠಕ್ಕೆ ತಂದು ಅರ್ಪಿಸುತಿದ್ದಾರೆ. ಬುಧವಾರ ಕೊಪ್ಪಳ ತಾಲೂಕಿನ ಕಾಸನಕಂಡಿ ಗ್ರಾಮಸ್ಥರು ಭತ್ತ, ಮೆಕ್ಕೆಜೋಳ, ಜೋಳ, ಸಜ್ಜೆಯನ್ನು ಮಹಾದಾಸೋಹಕ್ಕೆ ಅರ್ಪಿಸಿದರು. ಜಾತ್ರೋತ್ಸವಕ್ಕೆ ಭಕ್ತರು ಹಿಂದಿನಿಂದ ತಮ್ಮ ಕೈಲಾದ ಸೇವೆ ಸಲ್ಲಿಸುತ್ತಿದ್ದಾರೆ.

ಕೆಲವರು ದವಸ,ಧಾನ್ಯ ನೀಡಿದರೆ, ಇನ್ನು ಕೆಲವರು ಮಹಾ ದಾಸೋಹ ಸಮಯದಲ್ಲಿ ಅಡುಗೆ ಮಾಡುವುದು, ಸ್ವಚ್ಛತೆ ಸೇರಿ ಇತರ ಕಾರ್ಯಗಳಲ್ಲಿ ಸ್ವಯಂ ಭಾಗಿಯಾಗಿ ಸೇವೆ ಸಲ್ಲಿಸುವುದು ವಾಡಿಕೆಯಾಗಿ ಬೆಳೆದಿದೆ. ಅಲ್ಲದೇ ಒಂದೊಂದು ಗ್ರಾಮದವರು ತಂಡ ಮಾಡಿಕೊಂಡು ಬಂದು ಸೇವೆ ಸಲ್ಲಿಸುವ ಸಂಪ್ರದಾಯವೂ ಗವಿಮಠ ಜಾತ್ರೆಯಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿದೆ.

ಕೈಲಾಸ ಮಂಟಪದ ಸಿದ್ಧತೆ: ನಾಡಿನ ಪ್ರಸಿದ್ಧ ಶಿವಯೋಗಿಗಳು, ಶರಣರ, ಸಾಧಕಕರ ಸತ್ಸಮಾಗಮಕ್ಕೆ ಸಾಕ್ಷಿಯಾಗಲಿರುವ ಧಾರ್ಮಿಕ ಕಾರ್ಯಕ್ರಮಗಳ ತಾಣ ಕೈಲಾಸ ಮಂಟಪದ ಸಿದ್ಧತಾ ಕಾರ್ಯವೂ ವೇಗವಾಗಿ ನಡೆಯತ್ತಿದೆ. ಗವಿಸಿದ್ದೇಶ್ವರ ಕರ್ತೃ ಗದ್ದುಗೆಯ ಬೆಟ್ಟದ ಮೇಲಿರುವ ಕೈಲಾಸ ಮಂಟಪ ನಿರ್ಮಿಸಲಾಗುತ್ತಿದೆ. ಬುಧವಾರ ಅಭಿನವ ಗವಿಶ್ರೀಗಳು ಖುದ್ದಾಗಿ ಸಿದ್ಧತೆ ಪರಿಶೀಲಿಸಿದರು.

ಆಯೋಜಿಸುವ ಕಾರ್ಯಕ್ರಮಗಳು, ಬೇಕಾಗುವ ಅನುಕೂಲ ಕಲ್ಪಿಸುವಂತೆ ಸೂಚಿಸಿದರು. ಜ.27ರಿಂದ ಮೂರು ದಿನಗಳ ಕಾಲ ಇಲ್ಲಿ ಧಾರ್ಮಿಕ ಗೋಷ್ಠಿಗಳು, ಭಕ್ತ ಹಿತಚಿಂತನಾ ಸಭೆ ಜರುಗಲಿದ್ದು, ನಾಡಿನ ಗಣ್ಯರು, ಅತಿಥಿಗಳಿಗೆ ವೇದಿಕೆ ಆಗಲಿದೆ. ಲಾಂತರ ಭಕ್ತರು ಬೆಟ್ಟದ ಬಯಲಲ್ಲೇ ಕುಳಿತು ಕಾರ್ಯಕ್ರಮ ವೀಸುತ್ತಾರೆ.

ಉಚಿತ ಆರೋಗ್ಯ ಸೇವಾ ಚಿಕಿತ್ಸಾಲಯಗಳು: ಜಾತ್ರೆಗೆ ಆಗಮಿಸುವ ಭಕ್ತರಿಗೆ ವೈದ್ಯಕಿಯ ಸೇವೆ ಕಲ್ಪಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಉಚಿತ ಸೇವೆ ನೀಡುತ್ತಿದೆ. ರೋಗಕ್ಕೆ ಅನುಗುಣವಾಗಿ ಪರಿಣಿತ ವೈದ್ಯರಿಂದ ಚಿಕಿತ್ಸೆ ಹಾಗೂ ಸಲಹೆ ನೀಡಲಾಗುತ್ತಿದೆ. ಕಳೆದ ವರ್ಷ ದಾಖಲೆ ಪ್ರಮಾಣದಲ್ಲಿ ರೋಗಿಗಳ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗಿದೆ.

ಗವಿಸಿದ್ದೇಶ್ವರ ಆಯುರ್ವೇದ ಕಾಲೇಜು, ಕಿಮ್ಸ್​ ಸಹಯೋಗದಲ್ಲಿ ಜಾತ್ರೆ ಆವರಣ, ಪ್ರಸಾದ ನಿಲಯ ಹಾಗೂ ಪೋಲಿಸ್​ ಚೌಕಿ ಹತ್ತಿರ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಲಾಗುತ್ತಿದ್ದು, 24*7 ಸೇವೆ ಲಭ್ಯ ಇರಲಿದೆ. ಜ.25ರಿಂದ ೆ.9ವರೆಗೆ ಇಲ್ಲಿ ಸೇವೆ ದೊರೆಯಲಿದೆ. ನಿತ್ಯ ಬೆಳಗ್ಗೆ 8ರಿಂದ ರಾತ್ರಿ 11ಗಂಟೆವರೆಗೆ ಸೇವೆ ಪಡೆಯಬಹುದು. ಜತೆಗೆ ಆ್ಯಂಬುಲೆನ್ಸ್​ ಸೌಲಭ್ಯವೂ ಇರಲಿದೆ.

Share This Article

ಹೋಟೆಲ್​ ಸ್ಟೈಲ್​​ ಪನೀರ್ ಅಮೃತಸರಿ ಮಾಡುವ ವಿಧಾನ ಇಲ್ಲಿದೆ; ನೀವೊಮ್ಮೆ ಟ್ರೈ ಮಾಡಿ | Recipe

ಹಲವು ಬಾರಿ ಒಂದೇ ರೀತಿಯ ಆಹಾರ ತಿಂದು ಬೇಸರವಾಗುತ್ತದೆ. ಆಗ ಹೋಟೆಲ್‌ಗೆ ಹೋಗಿ ಊಟ ಮಾಡಲು…

ಚಿನ್ನದ ಮೇಲೆ ಲೋನ್​ ತಗೋತ್ತಿದ್ದೀರಾ? ಹಾಗಿದ್ರೆ ಈ ತಪ್ಪುಗಳಿಂದ ಮೊದಲು ದೂರವಿರಿ, ಇಲ್ಲದಿದ್ರೆ ನಷ್ಟ ಖಚಿತ | Gold Loan

Gold Loan: ಮನೆಯಲ್ಲಿದ್ದರೆ ಚಿನ್ನ ಚಿಂತೆಯೂ ಏತಕೇ ಇನ್ನಾ? ಎಂಬ ಮಾತನ್ನು ಇಂದಿಗೂ ನಮ್ಮ ಜನ…

ತಣ್ಣೀರಿನಲ್ಲಿ ಈಜುವುದರಿಂದಾಗುವ ಪ್ರಯೋಜನಗಳನ್ನು ನೀವು ತಿಳಿದುಕೊಳ್ಳಲೇಬೇಕು; ನಿಮಗಾಗಿಯೇ ಈ ಮಾಹಿತಿ | Health Tips

ತಣ್ಣೀರಿನಲ್ಲಿ ಈಜುವುದು ಕೇವಲ ಸಾಹಸ ಕ್ರೀಡೆ ಅಥವಾ ಹವ್ಯಾಸವಲ್ಲ. ಆದರೆ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು…