More

    ಕ್ವಾರಂಟೈನ್​ ಕೇಂದ್ರದ ಸುತ್ತ ಹಾವುಗಳಿಗೆ ಲಕ್ಷ್ಮಣ ರೇಖೆ, ಮೂಢನಂಬಿಕೆ ವಿರೋಧಿಗಳ ಆಕ್ಷೇಪ

    ರಾಯ್ಪುರ: ಛತ್ತೀಸಗಢದ ಜಶ್ಪುರ ಜಿಲ್ಲೆ ನಾಗಲೋಕ ಎಂದೇ ಖ್ಯಾತವಾಗಿದೆ. ಇಲ್ಲಿ 200ಕ್ಕೂ ಹೆಚ್ಚು ಪ್ರಬೇಧದ ಹಾವುಗಳು ಇವೆ ಎಂದು ಹೇಳಲಾಗುತ್ತಿದೆ. ಈ ಹಾವುಗಳು ಕ್ವಾರಂಟೈನ್​ ಕೇಂದ್ರದೊಳಗೆ ಬಂದು, ಅಲ್ಲಿದ್ದ 16ಕ್ಕೂ ಹೆಚ್ಚು ಜನರಿಗೆ ಕಡಿದಿವೆ. ಇದರಿಂದ ವಿಷವೇರಿ ಅವರೆಲ್ಲರೂ ಸಾವನಪ್ಪಿದ್ದಾರೆ.

    ಈ ಹಿನ್ನೆಲೆಯಲ್ಲಿ ವಿಷಜಂತುಗಳು ಕ್ವಾರಂಟೈನ್​ ಕೇಂದ್ರವನ್ನು ಪ್ರವೇಶಿಸದಂತೆ ತಡೆಯಲು ಜಿಲ್ಲಾಡಳಿತ ಕೇಂದ್ರದ ಸುತ್ತ ಉಪ್ಪು ಮತ್ತು ಫಿನಾಯಿಲ್​ ಮಿಶ್ರಿತ ಲಕ್ಷ್ಮಣ ರೇಖೆ ಎಳೆಯಲು ಮುಂದಾಗಿದೆ. ಇದು ಮೂಢನಂಬಿಕೆ ವಿರೋಧಗಳ ಕಣ್ಣನ್ನು ಕೆಂಪಗಾಗಿಸಿದೆ.

    ಇದನ್ನೂ ಓದಿ: ನಮ್ಮ ಉತ್ಪನ್ನಗಳು ಇಲ್ಲದೆ ಭಾರತೀಯರ ಜೀವನ ದುಸ್ಸಾಧ್ಯ ಎಂದ ಚೀನಾ

    ಛತ್ತೀಸಗಢದಲ್ಲಿ ಹಾವುಗಳ ಕಾಟ ತಪ್ಪಿಸಲು ಉಪ್ಪು ಮತ್ತು ಫಿನಾಯಿಲ್​ನ ಮಿಶ್ರಣವನ್ನು ಮನೆಯ ಸುತ್ತ ಹಾಕುವ ಸಂಪ್ರದಾಯವಿದೆ. ತುಂಬಾ ಹಿಂದಿನಿಂದಲೂ ಇದನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎನ್ನಲಾಗಿದೆ. ಆದರೆ, ಹೀಗೆ ಮಾಡುವುದರಿಂದ ಹಾವುಗಳು ಮನೆಯೊಳಗೆ ಬರುವುದಿಲ್ಲ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಇದು ಮೂಢನಂಬಿಕೆ ವಿರೋಧಿಗಳ ಆಕ್ರೋಶಕ್ಕೆ ಕಾರಣವಾಗಿದೆ.

    ಹಾವುಗಳು ಕ್ವಾರಂಟೈನ್​ ಕೇಂದ್ರಗಳ ಸುತ್ತ ಹರಿದಾಡದಂತೆ ತಡೆಯಬೇಕು ಎನ್ನುವುದಾದರೆ, ಅವುಗಳ ಸುತ್ತ ರಾತ್ರಿ ವೇಳೆಯೂ ಸೂಕ್ತ ಬೆಳಕಿನ ವ್ಯವಸ್ಥೆ ಏರ್ಪಡಿಸಬೇಕು. ಕ್ವಾರಂಟೈನ್​ ಕೇಂದ್ರಗಳ ಸುತ್ತಲಿರುವ ಬಿರುಕು, ಬಿಲ ಮತ್ತು ಕೊರಕಲುಗಳನ್ನು ಮುಚ್ಚಿ, ಹಾವುಗಳಿಗೆ ಇರಲು ಸ್ಥಳ ಇಲ್ಲದಂತೆ ಮಾಡಬೇಕು. ಇದಕ್ಕೂ ಮುಖ್ಯವಾಗಿ ಜನರು ನೆಲದ ಮೇಲೆ ಮಲಗುವುದನ್ನು ನಿಲ್ಲಿಸಬೇಕು. ಅದನ್ನು ಬಿಟ್ಟು ಉಪ್ಪಿನ ಮಿಶ್ರಣವನ್ನು ಕೇಂದ್ರದ ಸುತ್ತ ಸುರಿದು ಹಾವು ಬರದಂತೆ ತಡೆಯುತ್ತೇವೆ ಎಂದರೆ ಹೇಗೆ ಎಂದು ಮೂಢನಂಬಿಕೆ ನಿರ್ಮೂಲನಾ ಸಮಿತಿಯ ಅಧ್ಯಕ್ಷ ಡಾ. ದಿನೇಶ್​ ಮಿಶ್ರಾ ಪ್ರಶ್ನಿಸಿದ್ದಾರೆ.

    ನೀಲಿಚಿತ್ರಗಳಲ್ಲಿ ಸೌಂದರ್ಯವನ್ನೇ ಬಂಡವಾಳ ಮಾಡಿಕೊಂಡ ಸೂಪರ್​ಕಾರ್​ ಚಾಲಕಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts