More

    ರೈತರಿಗೆ ಅಗತ್ಯ ಬಿತ್ತನೆ ಬೀಜ ವಿತರಣೆ

    ದೇವದುರ್ಗ: ಜಾಲಹಳ್ಳಿ ಪಟ್ಟಣದ ರೈತರಿಗೆ ಈಗಾಗಲೇ ರಿಯಾಯಿತಿ ದರದಲ್ಲಿ ವಿವಿಧ ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿ ಹನಿ ನೀರಾವರಿ ವ್ಯವಸ್ಥೆಗೆ ಪೈಪ್‌ಗಳನ್ನು (ಸ್ಪಿಂಕ್ಲರ್) ವಿತರಿಸಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಬಸವರಾಜ ಸಿದ್ದರೆಡ್ಡಿ ಹೇಳಿದರು.

    ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಶನಿವಾರ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತೊಗರಿ ಬಿತ್ತನೆ ಬೀಜ ಉಚಿತವಾಗಿ ವಿತರಿಸಿ ಮಾತನಾಡಿದರು.
    ಜಾಲಹಳ್ಳಿ ರೈತ ಸಂಪರ್ಕ ಕೇಂದ್ರಕ್ಕೆ ಇಲ್ಲಿಯವರೆಗೆ 36 ಕ್ವಿಂಟಾಲ್ ಭತ್ತದ ಬೀಜ, 120 ಕ್ವಿಂಟಾಲ್ ತೊಗರಿ ಬೀಜ, 6 ಕ್ವಿಂಟಾಲ್ ಸಜ್ಜೆ, 1 ಕ್ವಿಂಟಾಲ್ ಹೆಸರು ಬಿತ್ತನೆ ಬೀಜ ಸರಬರಾಜು ಮಾಡಲಾಗಿದೆ. ಈಗಾಗಲೇ ಬಹುತೇಕ ರೈತರು ತಮ್ಮ ಹೆಸರಲ್ಲಿರುವ ದಾಖಲೆಗಳನ್ನು ನೀಡಿ ಸಬ್ಸಿಡಿಯಡಿ ಬಿತ್ತನೆ ಬೀಜ ಖರೀದಿಸಿದ್ದಾರೆ ಎಂದರು.

    ಇದನ್ನೂ ಓದಿ:3 ಮನೆ ನಿರ್ಮಾಣಕ್ಕೆ ಪೇಜಾವರ ಶ್ರೀಗಳಿಂದ ಸಹಾಯಧನ ಹಸ್ತಾಂತರ

    ತುಂತುರು ಹನಿ ನೀರಾವರಿಗಾಗಿ ಪೈಪ್‌ಗಳಿಗಾಗಿ 935 ರೈತರು ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ 194 ರೈತರಿಗೆ ಪೈಪ್‌ಗಳು ಬಂದಿವೆ. ಉಳಿದ 741 ರೈತರಿಗೆ ವಿತರಣೆ ಮಾಡಬೇಕಾದ ಪೈಪ್‌ಗಳು ಬಂದಿಲ್ಲ. ಇಲಾಖೆಗೆ ಸರಬರಾಜು ಮಾಡುವ ಸಂಸ್ಥೆಗೆ ತಮ್ಮ ಇಲಾಖೆಯಿಂದ ಸಹಾಯಧನ ಜಮೆ ಆಗದೆ ಇರುವುದರಿಂದ ಸಂಸ್ಥೆಯವರು ಪೈಪ್‌ಗಳನ್ನು ಸರಬರಾಜು ಮಾಡಿಲ್ಲ ಎಂದರು.

    ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸಮಸ್ಯೆ ಬಗ್ಗೆ ತಿಳಿಸಲಾಗಿದೆ. ಶೀಘ್ರವೇ ರೈತರಿಗೆ ಪೈಪ್‌ಗಳನ್ನು ವಿತರಿಸಲಾಗುವುದು ಯಾವುದೇ ಕಾರಣಕ್ಕೂ ಇಲಾಖೆಯಲ್ಲಿ ದಲ್ಲಾಳಿಗಳಿಗೆ ಅವಕಾಶವಿಲ್ಲ. ಪ್ರತಿಯೊಂದು ಚೀಲದ ಮೇಲೆ ಬಾರ್ ಕೋಡ್ ಇರುವುದರಿಂದ ರೈತರ ಅಧಾರ್ ಚೀಟಿ, ಸಣ್ಣ ರೈತರ ಜಮೀನು ಹೊಂದಿರುವ ದಾಖಲೆ ಇದ್ದರೆ ಮಾತ್ರ ವಿವಿಧ ಬಿತ್ತನೆ ಬೀಜ ಸೇರಿ ಯಾವುದೇ ಸೌಲಭ್ಯ ವಿತರಣೆ ಮಾಡಲು ಸಾಧ್ಯ ಎಂದರು.

    ಕೃಷಿ ಅಧಿಕಾರಿ ರಂಗಪ್ಪ ನಾಯ್ಕ್, ಲೆಕ್ಕಾಧಿಕಾರಿ ಉತ್ತೇಶ್, ಸಿಬ್ಬಂದಿ ಸಂತೋಷಕುಮಾರ, ಅಲ್ಲಿಸಾಬ್, ಮಲ್ಲಿಕಾರ್ಜುನ ಕುಂಬಾರ ಇದ್ದರು.

    ಜಾಲಹಳ್ಳಿ ರೈತ ಸಂಪರ್ಕ ಕೇಂದ್ರದಲ್ಲಿ ಇಲಾಖೆಯಿಂದ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಿಗಬೇಕಾದ ಎಲ್ಲ ಸೌಲಭ್ಯ ಒದಗಿಸಲಾಗುವುದು. ರೈತರು ದಲ್ಲಾಳಿಗಳನ್ನು ಕರೆತರದೇ ಸ್ವತಾ ರೈತ ಸಂಪರ್ಕ ಕೇಂದ್ರಕ್ಕೆ ಬರಬೇಕು.


    ಬಸವರಾಜ ಸಿದ್ದರೆಡ್ಡಿ

    ಕೃಷಿ ಸಹಾಯಕ ನಿರ್ದೇಶಕ, ದೇವದುರ್ಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts