More

    ಜನರಿಗೆ ಆರೋಗ್ಯದ ಅರಿವು ಮೂಡಿಸಿ

    ಕುರುಗೋಡು: ರೋಗಗಳನ್ನು ಮೊದಲ ಹಂತದಲ್ಲೇ ಗುರುತಿಸಿ ಚಿಕಿತ್ಸೆ ಪಡೆಯುವುದರಿಂದ ಗುಣಪಡಿಸಬಹುದಾಗಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರೂಪಾ ಜಾಲಿಹಾಳ್ ಹೇಳಿದರು.

    ಪ್ರಾಥಮಿಕ ಹಂತದಲ್ಲಿ ಆರೋಗ್ಯ ಗುರುತಿಸಿ

    ಪಟ್ಟಣದ ಗಣಿಕೆಹಾಳ್ ರಸ್ತೆಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಹಮ್ಮಿಕೊಂಡಿದ್ದ ಸಮುದಾಯ ಆಧಾರಿತ ತಪಾಸಣಾ ಶಿಬಿರಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಜಾತ್ರೆ-ಸಂತೆ ಸ್ಥಳಗಳಲ್ಲಿ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸುವುದರಿಂದ ಜನರಿಗೆ ಆರೋಗ್ಯ ಅರಿವು ಮೂಡಿಸಲು ಸಹಾಯವಾಗುತ್ತದೆ. ಸಮುದಾಯ ಆಧಾರಿತ ಸ್ಕ್ರೀನಿಂಗ್ ಆರಂಭಿಕ ಹಂತದಲ್ಲಿ ರೋಗಗಳನ್ನು ಗುರುತಿಸಬಹುದಾಗಿದೆ ಎಂದರು.

    ಇದನ್ನೂ ಓದಿ: ಸಿಎಂಗಿಂತ ಅವರ ಪತ್ನಿಗೆ ಭದ್ರತೆ ಹೆಚ್ಚು; ಸರ್ಕಾರದ ಖಜಾನೆ ಬರಿದಾಗ್ತಿದೆ ಎಂದು ಆಕ್ರೋಶ…

    ತುರ್ತು ಪರಿಸ್ಥಿತಿಯಲ್ಲಿ ರಕ್ತದ ಅವಶ್ಯಕತೆ ಇದ್ದು, ಪ್ರತಿಯೊಬ್ಬರು ರಕ್ತದಾನ ಮಾಡಲು ಮುಂದಾಗಬೇಕು. ಪುರುಷರು ಮೂರು ಹಾಗೂ ಮಹಿಳೆಯರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ ಎಂದು ಹೇಳಿದರು. ಜನರಿಗೆ ವಿವಿಧ ಆರೋಗ್ಯ ತಪಾಸಣೆ ಮಾಡಲಾಯಿತು.
    ಪ್ರಮುಖರಾದ ನರಸಮ್ಮ, ಗೌರಮ್ಮ, ಸದಾನಂದ,ಶಾರದ, ಕೆಂಚಮ್ಮ ಆಶಾಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts