More

    ಶಿಸ್ತುಬದ್ಧ ಓದಿನಿಂದ ಸಾಧನೆ ಸಾಧ್ಯ

    ಅಳವಂಡಿ: ಯುವಕರು ಶಿಸ್ತುಬದ್ಧ ಶಿಕ್ಷಣ, ಉತ್ತಮ ನಡತೆ, ಸಂಸ್ಕಾರವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಧನೆಯತ್ತ ಸಾಗಲು ಸಾಧ್ಯವಾಗುತ್ತದೆ ಎಂದು ಸಾಹಿತಿ ವಿಮಲಾಬಾಯಿ ಇನಾಮದಾರ ಹೇಳಿದರು.

    ಇದನ್ನೂ ಓದಿ:ಎನ್ನೆಸ್ಸೆಸ್ ಶಿಬಿರಗಳಿಂದ ಸೇವಾ ಮನೋಭಾವ ವೃದ್ಧಿ

    ಗ್ರಾಮದಲ್ಲಿ ಶ್ರೀಸಿದ್ದೇಶ್ವರ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಎನ್ನೆಸ್ಸೆಸ್ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಬುಧವಾರ ಮಾತನಾಡಿದರು.

    ಯುವಕರು ಉತ್ತಮ ಸಂಸ್ಕಾರ, ಸಂಬಂಧಗಳ ಬಗ್ಗೆ ತಿಳಿದುಕೊಳ್ಳಬೇಕು. ಉತ್ತಮ ಸಂಸ್ಕಾರ ಸಾಧನೆಯ ಹಾದಿಯನ್ನು ತೋರಿಸುತ್ತದೆ. ಪ್ರತಿಯೊಬ್ಬರು ಶಿಕ್ಷಣವಂತರಾಗಬೇಕು. ಅತಿಯಾದ ಮೊಬೈಲ್ ಬಳಕೆ ಆರೋಗ್ಯ ಹಾಗೂ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರಲಿದ್ದು, ಅವಶ್ಯ ಇದ್ದಷ್ಟು ಬಳಸಿ ಎಂದು ಸಲಹೆ ನೀಡಿದರು.

    ಗ್ರಾಪಂ ಸದಸ್ಯ ಗುರುಬಸವರಾಜ ಹಳ್ಳಿಕೇರಿ ಮಾತನಾಡಿ, ಯುವಕರು ಸೇವಾ ಮನೋಭಾವ, ದೇಶಪ್ರೇಮವನ್ನು ರೂಢಿಸಿಕೊಳ್ಳಬೇಕು. ಎನ್‌ಎಸ್‌ಎಸ್ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ನಾಯಕತ್ವ, ಸಾಮಾಜಿಕ ಜವಾಬ್ದಾರಿ ಹೆಚ್ಚಲಿದೆ ಎಂದರು.

    ಕ.ವಿ.ಸಮಿತಿಯ ಅಧ್ಯಕ್ಷ ಭುಜಂಗಸ್ವಾಮಿ ಇನಾಮದಾರ, ಪ್ರಮುಖರಾದ ಪ್ರಕಾಶಸ್ವಾಮಿ ಇನಾಮದಾರ, ಅನ್ವರ್ ಗಡಾದ, ರೇಣುಕಪ್ಪ ಹಳ್ಳಿಕೇರಿ, ಚನ್ನಪ್ಪ ಮುತ್ತಾಳ, ಪ್ರಕಾಶ ಇಳಿಗೇರ, ತೋಟಯ್ಯ ಅರಳೆಲೆಮಠ, ಬಿ.ಎನ್.ಹೊರಪೇಟಿ, ಪ್ರಾಚಾರ್ಯ ಚಂದ್ರಶೇಖರ ದೊಡ್ಡಮನಿ, ಉಪನ್ಯಾಸಕರಾದ ಸಿದ್ದು ಅಂಗಡಿ, ಎಚ್.ಮಹಾನಂದಿ, ನವೀನ ಇನಾಮದಾರ, ಅಂಬರೀಷ ಬೋಚನಹಳ್ಳಿ, ದೇವಮ್ಮ, ಮುಖ್ಯಶಿಕ್ಷಕ ವಿಜಯಾನಂದ, ಶಿಕ್ಷಕ ನೀಲಪ್ಪ ಹಕ್ಕಂಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts