More

    ಅದೇ ಬೇರೆ, ಇದೇ ಬೇರೆ; ಉಪೇಂದ್ರ -ಶಶಾಂಕ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ!

    ಬೆಂಗಳೂರು: ರಿಯಲ್‌ಸ್ಟಾರ್ ಉಪೇಂದ್ರ ಜನ್ಮದಿನದ ಪ್ರಯುಕ್ತ ಹಲವು ಸಿನಿಮಾಗಳು ಘೋಷಣೆ ಆಗಿವೆ. ಆ ಸಿನಿಮಾಗಳ ಪೈಕಿ ಶಶಾಂಕ್ ನಿರ್ಮಾಣ ಮತ್ತು ನಿರ್ದೇಶನ ಮಾಡಲಿರುವ ಇನ್ನೂ ಶೀರ್ಷಿಕೆ ಅಂತಿಮವಾಗದ ಚಿತ್ರವೂ ಒಂದು. ಅಚ್ಚರಿ ಏನೆಂದರೆ, ಕಳೆದ ವರ್ಷವೇ ಮುಹೂರ್ತ ಮುಗಿಸಿಕೊಂಡಿದ್ದ ಈ ಜೋಡಿಯ ಸಿನಿಮಾಕ್ಕೂ ಸದ್ಯ ಘೋಷಣೆ ಆಗಿರುವ ಸಿನಿಮಾಕ್ಕೂ ಯಾವುದೇ ಸಂಬಂಧವಿಲ್ಲ!

    ಇದನ್ನೂ ಓದಿ: 100 ಕೋಟಿ ಬಜೆಟ್​ನ ಸಿನಿಮಾದಲ್ಲಿ ಉಪ್ಪಿ ಪಾತ್ರ ಹೇಗಿರಲಿದೆ?

    ಅಂದರೆ, ಶಶಾಂಕ್ ಮತ್ತು ಉಪೇಂದ್ರ ಕಾಂಬಿನೇಷನ್ ಸಿನಿಮಾ ಕಳೆದ ವರ್ಷವೇ ಘೋಷಣೆ ಆಗಿತ್ತು. ಲಾಕ್‌ಡೌನ್ ಇರಲಿಲ್ಲ ಎಂದಿದ್ದರೆ, ಈಗಾಗಲೇ ಚಿತ್ರೀಕರಣವನ್ನೂ ಮುಗಿಸಿಕೊಂಡಿರುತ್ತಿತ್ತು. ಆದರೆ, ಲಾಕ್‌ಡೌನ್ ಅದೆಲ್ಲದಕ್ಕೂ ಕೊಕ್ಕೆ ಹಾಕಿತು. ಹಾಗಾಗಿ ಆ ಸಿನಿಮಾ ಬದಿಗಿಟ್ಟು, ಹೊಸ ಕಥೆಯೊಂದಿಗೆ ಶಶಾಂಕ್ ಆಗಮಿಸಿದ್ದಾರೆ.

    ಅದೇ ಬೇರೆ, ಇದೇ ಬೇರೆ; ಉಪೇಂದ್ರ -ಶಶಾಂಕ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ!

    ‘ನೈಜ ಘಟನೆ ಆಧರಿಸಿ ಮೂಡಿಬರಲಿರುವ ಥ್ರಿಲ್ಲರ್ ಶೈಲಿಯ ಸಿನಿಮಾ ಇದಾಗಿರಲಿದ್ದು, ಉಪೇಂದ್ರ ಅವರ ಸಿನಿಮಾಗಳ ಅನಿರೀಕ್ಷಿತ ತಿರುವುಗಳನ್ನು ಇಲ್ಲಿಯೂ ಕಾಣಬಹುದಾಗಿದೆ. ಈ ಹಿಂದಿನ ಸಿನಿಮಾದ ಚಿತ್ರೀಕರಣಕ್ಕೆ ಹೊರಾಂಗಣದ ಅವಶ್ಯಕತೆ ಹೆಚ್ಚಾಗಿತ್ತು. ಕರೊನಾ ಹಿನ್ನೆಲೆಯಲ್ಲಿ ಸದ್ಯಕ್ಕೆ ಅದನ್ನು ಕೈ ಬಿಟ್ಟು, ಹೊಸ ಕಥೆಯನ್ನು ಈ ಆರು ತಿಂಗಳ ಬಿಡುವಿನಲ್ಲಿ ಮಾಡಿಕೊಂಡಿದ್ದೇನೆ. ಈ ಚಿತ್ರದ ಶೂಟಿಂಗ್ ಬಹುತೇಕ ಸೆಟ್‌ನಲ್ಲಿಯೇ ನಡೆಯಲಿದೆ. ಉಪೇಂದ್ರ ಅವರ ಕಮಿಟ್‌ಮೆಂಟ್‌ಗಳು ಮುಗಿದ ಬಳಿಕ ನಮ್ಮ ಸಿನಿಮಾ ಶುರುವಾಗಲಿದೆ’ ಎಂದು ಮಾಹಿತಿ ನೀಡುತ್ತಾರೆ ಶಶಾಂಕ್.

    ಇದನ್ನೂ ಓದಿ; ವಿಷ್ಣುವರ್ಧನ್, ಉಪೇಂದ್ರ ಮತ್ತು ಶ್ರುತಿಗೆ ಸ್ಯಾಂಡಲ್​ವುಡ್​ ಕಡೆಯಿಂದ ಶುಭಾಶಯ

    ಪ್ಯಾನ್ ಇಂಡಿಯಾ ಪರಿಕಲ್ಪನೆಗೆ ಈ ಸಿನಿಮಾ ಹೊಂದಿಕೆ ಆಗುವುದರಿಂದ ಕನ್ನಡದ ಜತೆಗೆ ತೆಲುಗು ಮತ್ತು ತಮಿಳಿನಲ್ಲಿ ಈ ಚಿತ್ರ ಸಿದ್ಧವಾಗಲಿದೆಯಂತೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts