More

    ವಿಚಿತ್ರವಾಗಿ ಶಿವರಾತ್ರಿಯ ಶುಭಾಶಯ ಕೋರಿದ ರಾಮ್ ಗೋಪಾಲ್ ವರ್ಮಾ!

    ಹೈದರಾಬಾದ್: ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸದಾ ಸುದ್ದಿಯಲ್ಲಿರುವ ನಿರ್ದೇಶಕ, ನಿರ್ಮಾಪಕ ಯಾರೆಂದರೆ ಅದು ಒನ್ ಅಂಡ್ ಓನ್ಲಿ ರಾಮ್ ಗೋಪಾಲ್ ವರ್ಮಾ.

    ಹೌದು, ವರ್ಮಾ ಸದಾ ಒಂದಿಲ್ಲ ಒಂದು ಹೇಳಿಕೆ ನೀಡುತ್ತಾ ಸುದ್ದಿಯಲ್ಲಿರುತ್ತಾರೆ. ಟ್ವಿಟ್ಟರ್​ನಲ್ಲಿ ಸಕ್ರಿಯವಾಗಿರುವ ಅವರು ತಮ್ಮ ಭಿನ್ನ ಟ್ವೀಟ್​ಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಅವರಿಗೆ ಟ್ವಿಟ್ಟರ್​ನಲ್ಲಿ 4.7 ಮಿಲಿಯನ್ ಹಿಂಬಾಲಕರಿದ್ದಾರೆ.

    ದೇಶದಲ್ಲಿ ಇಂದು ಹಿಂದೂಗಳು ಸಂಭ್ರಮದಿಂದ ಶಿವರಾತ್ರಿ ಆಚರಿಸುತ್ತಿದ್ದಾರೆ. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಆದರೆ, ರಾಮ್ ಗೋಪಾಲ್ ವರ್ಮಾ ತಾವೇ ಶಿವನ ಅವತಾರ ಎತ್ತಿರುವಂತೆ ಫೋಟೊ ಹಾಕಿ Wish you all a very very Unhappy ShivaRatri ! If the below picture reminds you of anyone you hate, it’s just a coincidentally incidental accident ! Hail Lord Shiva! (ನಿಮ್ಮೆಲ್ಲರಿಗೂ ಅತೃಪ್ತಿಯ ಶಿವರಾತ್ರಿಯ ಶುಭಾಶಯಗಳು. ನೀವು ದ್ವೇಷಿಸುವ ವ್ಯಕ್ತಿ ಈ ಫೋಟೊದಲ್ಲಿದ್ದರೆ ಅದು ಕಾಕತಾಳೀಯವಷ್ಟೇ, ಶಿವನಿಗೆ ನಮಸ್ಕಾರ) ಎಂದು ಟ್ವೀಟ್ ಮಾಡಿದ್ದಾರೆ.

    ಅವರು ಹಾಕಿರುವ ಫೋಟೊ ನಗು ಉಕ್ಕಿಸುವಂತಿದೆ ಎಂದು ಕೆಲವರು ಕಾಮೆಂಟ್ ಮಾಡಿದರೆ, ಇನ್ನೂ ಕೆಲವರು ವರ್ಮಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

    ನೇಹಾರ ಈ ಟೀ ಶರ್ಟ್​ ಬೆಲೆ ಕೇಳಿದರೆ ತಲೆ ತಿರುಗುವುದು ಗ್ಯಾರಂಟಿ!

    ಶೃದ್ಧಾ ಕಪೂರ್​ ಹಾಕಿರುವ ಈ ಬಿಕನಿ ರೇಟ್ ಕೇಳಿದ್ರೆ ನೀವು ಹೌಹಾರೋದು ಗ್ಯಾರಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts