More

    ಹರಪುರಾಧೀಶನ ದೀಪೋತ್ಸವ ಸಂಪನ್ನ

    ಆಯನೂರು: ಮೂರು ದಿನಗಳ ಕಾಲ ಹಾರನಹಳ್ಳಿಯ ಶ್ರೀಕ್ಷೇತ್ರ ಸಿದ್ದಲಿಂಗೇಶ್ವರ ಸ್ವಾಮಿ ಚೌಕಿಮಠದಲ್ಲಿ ಆಯೋಜಿಸಿದ್ದ ಹರಪುರಾಧೀಶನ ದೀಪೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ಬುಧವಾರ ಸಂಪನ್ನಗೊಂಡಿತು.
    ಆನಂದಪುರಂನ ಮುರುಘಾಮಠದ ಶ್ರೀ ಡಾ. ಮಲ್ಲಿಕಾರ್ಜನ ಮುರುಘರಾಜೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಮೂರು ದಿನಗಳ ಕಾಲ ಪ್ರತಿದಿನ ಬೆಳೆಗ್ಗೆ ಕರ್ತೃಗದ್ದುಗೆ ಪೂಜೆ, ರುದ್ರಾಭಿಷೇಕ, ಕುಂಭೋತ್ಸವ, ಮಠದ ಸನ್ನಿಧಿಯಲ್ಲಿ ಗ್ರಾಮದ ಮುತ್ತೈದೆಯರಿಗೆ ಉಡಿ ತುಂಬುವುದು, ಬಾಗಿನ ನೀಡಲಾಯಿತು.
    ಕೊನೆಯ ದಿನವಾದ ಬುಧವಾರದಂದು ಸಂಜೆ ಸಿದ್ದಲಿಂಗೇಶ್ವರ ಸ್ವಾಮಿಯ ಕಂಚಿನ ಪ್ರತಿಮೆಯ ರಾಜಬೀದಿ ಉತ್ಸವ ಜರುಗಿತು. ಚೌಕಿ ಮಠದಿಂದ ಆರಂಭಗೊಂಡು ರಾಜಬೀದಿಯ ಮೂಲಕ ಸಾಗಿತು. ಉತ್ಸವದಲ್ಲಿ ವೀರಗಾಸೆ, ಭಜನೆ, ಚಂಡೆ, ಡೊಳ್ಳು, ಗೊಂಬೆ ಕುಣಿತ, ನವಿಲು, ಕುದುರೆ ಕುಣಿತಗಳ ಜತೆಗೆ ವಿವಿಧ ಕಲಾ ತಂಡಗಳು ಸಾವಿರಾರು ಭಕ್ತರು, ಮಹಿಳೆಯರು, ಗ್ರಾಮಸ್ಥರು ಭಾಗವಹಿಸಿದ್ದರು. ರಾಜಬೀದಿ ಉತ್ಸವದಲ್ಲಿ ಮಹಿಳೆಯರ ನೃತ್ಯ ಮನಸೂರೆಗೊಂಡಿತು.
    ಪ್ರತಿದಿನ ರಾತ್ರಿ ತಾರಿಹಾಳದ ಅಡವಿಸಿದ್ದೇಶ್ವರ ಮಠದ ಶ್ರೀ ಅಡವೀಶ್ವರ ದೇವರು ಜೀವನಾಮೃತ ನಡೆಸಿಕೊಟ್ಟರು. ಜತೆಗೆ ಸಂಗೀತ ಕಾರ್ಯಕ್ರಮ, ಭಜನೆ, ರಸಮಂಜರಿ, ಹಾಸ್ಯ-ಲಾಸ್ಯ, ನಗೆ ಹಬ್ಬ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಚಳಿಯನ್ನು ಲೆಕ್ಕಿಸದೆ ಜನಸಾಗರವೇ ಹರಿದು ಬಂದಿತ್ತು.
    ಆನಂದಪುರಂ ಶಾಖಾ ಮಠದ ಶ್ರೀ ನೀಲಕಂಠ ಮಹಾಸ್ವಾಮಿಗಳು ಅಧ್ಯಕ್ಷತೆಯಲ್ಲಿ ಅದ್ದೂರಿಯಾಗಿ ಎಲ್ಲ ಕಾರ್ಯಕ್ರಮಗಳು ನೆರವೇರಿದವು. ತೊಗರ್ಸಿ ಮಳೆ ಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ತಪೋಕ್ಷೇತ್ರದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ವಿರಕ್ತಮಠದ ಶ್ರೀ ಚನ್ನಬಸವ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ, ಗುತ್ತಲಕಲ್ಮಠದ ಶ್ರೀ ಪ್ರಭುಕುಮಾರ ಸ್ವಾಮೀಜಿ, ಮೂಲೆಗದ್ದೆ ಸದಾನಂದ ಆಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts