More

    ಪಂಚಮ ಶಿವಲಿಂಗೇಶ್ವರ ಶ್ರೀಗಳ ಸಾಮಾಜಿಕ ಕಾರ್ಯ ಶ್ಲಾಘನೀಯ

    ಸಂಕೇಶ್ವರ: ಎಲ್ಲರ ಬಗೆಗೆ ಉತ್ತಮ ಚಿಂತನೆ ಹೊಂದಿರುವ ಶ್ರೀಗಳು, ಮಾತೃ ಹೃದಯದ ಮೂಲಕ ಭಕ್ತರು ಹಾಗೂ ಸ್ವಾಮೀಜಿಗಳ ಪಾಲಿಗೆ ನಡೆದಾಡುವ ದೇವರ ಸ್ವರೂಪಿಗಳಾಗಿದ್ದಾರೆ ಎಂದು ಹಾರನಹಳ್ಳಿ ಕೋಡಿಮಠದ ಚೇತನ ಸ್ವಾಮೀಜಿ ಹೇಳಿದರು.

    ಸಮೀಪದ ನಿಡಸೋಸಿ ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಮಹಾಶಿವರಾತ್ರಿ ಜಾತ್ರಾಮಹೋತ್ಸವದ ಮಹಾದಾಸೋಹ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

    ಸಾನ್ನಿಧ್ಯ ವಹಿಸಿದ್ದ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಭಾರತ ದೇಶದ ಸಂಸ್ಕೃತಿಯಲ್ಲಿ ಹಬ್ಬ-ಜಾತ್ರೆಗಳಿಗೆ ವಿಶೇಷ ಪ್ರಾತಿನಿಧ್ಯವಿದೆ. ಹಬ್ಬ-ಜಾತ್ರೆಗಳು ಕೇವಲ ಆಚರಣೆಗೆ ಸೀಮಿತವಲ್ಲ. ಇದರಿಂದ ಸಂಬಂಧಗಳು ಬೆಸುಗೆಯಾಗುತ್ತವೆ. ವೈರತ್ವಗಳು ಕಡಿಮೆಯಾಗುತ್ತವೆ. ಎಲ್ಲರಲ್ಲಿಯೂ ಮೇಲು-ಕೀಳು, ಜಾತಿ-ಭೇದ ಮಾಯವಾಗುತ್ತವೆ ಎಂದರು. ಗೋಧಿ ಹುಗ್ಗಿ ಮಹಾದಾಸೋಹ ಮಹೋತ್ಸವವು ಹರಗುರು ಚರಮೂರ್ತಿಗಳ ಸಾನಿಧ್ಯದಲ್ಲಿ ಅದ್ದೂರಿಯಾಗಿ ನೆರವೇರಿತು. ಚಿಕ್ಕೋಡಿ ಸಂಪಾದನ ಸ್ವಾಮೀಜಿ ಹಾಗೂ ಹಲವಾರು ಸ್ವಾಮೀಜಿಗಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts