More

    ವರ್ಕೌಟ್ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವ ದೀಪಿಕಾ ಪಲ್ಲಿಕಲ್

    ಚೆನ್ನೈ: ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತೆ ಸ್ಕ್ವಾಷ್​ ಆಟಗಾರ್ತಿ ದೀಪಿಕಾ ಪಲ್ಲಿಕಲ್ ಲಾಕ್‌ಡೌನ್ ವೇಳೆ ಪತಿ ಹಾಗೂ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಜತೆಗಿನ ದೈನಂದಿನ ವ್ಯಾಯಾಮಗಳ ಚಿತ್ರ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುತ್ತಿರುತ್ತಾರೆ. ಅದರ ಹಿಂದಿನ ಕಾರಣವನ್ನು ಅವರು ಈಗ ಬಹಿರಂಗಪಡಿಸಿದ್ದಾರೆ. ಕೋವಿಡ್-19 ವಿರುದ್ಧ ಹೋರಾಡುತ್ತಿರುವ ಫ್ರಂಟ್​‌ಲೈನ್ ವರ್ಕರ್‌ಗಳಿಗೆ ನೆರವಾಗಲು ದೇಣಿಗೆ ಸಂಗ್ರಹಿಸುವ ಸಲುವಾಗಿ ತಾನು ಇದನ್ನು ಮಾಡುತ್ತಿರುತ್ತೇನೆ ಎಂದು ದೀಪಿಕಾ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: 112 ದಿನಗಳ ಬಳಿಕ ಮನೆಗೆ ಮರಳಿದ ವಿಶ್ವನಾಥನ್​ ಆನಂದ್​

    ಜಾಗತಿಕ ಕ್ರೀಡಾ ಸಮವಸಗಳ ಬ್ರಾಂಡ್ ಅಡಿಡಾಸ್‌ನ ‘ಹೋಂಟೀಮ್‌ಹೀರೋ’ ಚಾಲೆಂಜ್‌ನ ಅಂಗವಾಗಿ ವರ್ಕೌಟ್ ಮಾಡುವ ವಿಡಿಯೋ, ಚಿತ್ರಗಳನ್ನು ಪ್ರಕಟಿಸುವ ಮೂಲಕ ಇತರರಿಗೂ ವ್ಯಾಯಾಮ ಮಾಡಲು ಪ್ರೇರೇಪಿಸುತ್ತೇನೆ. ಈ ಅಭಿಯಾನದಿಂದ ಸಂಗ್ರಹವಾಗುವ ದೇಣಿಗೆ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್-19 ಹೋರಾಟಕ್ಕೆ ಸಂದಾಯವಾಗುತ್ತದೆ ಎಂದು 28 ವರ್ಷದ ದೀಪಿಕಾ ವಿವರಿಸಿದ್ದಾರೆ.

    ವರ್ಕೌಟ್ ಮೂಲಕ ದೇಣಿಗೆ ಸಂಗ್ರಹಿಸುತ್ತಿರುವ ದೀಪಿಕಾ ಪಲ್ಲಿಕಲ್

    ‘ಪ್ರತಿಯೊಬ್ಬರ ಒಂದು ಗಂಟೆಯ ವರ್ಕೌಟ್‌ಗೆ ಪ್ರತಿಯಾಗಿ 1 ಡಾಲರ್ (75.56 ರೂ.) ದೇಣಿಗೆ ಸಂದಾಯವಾಗುತ್ತದೆ. ಒಟ್ಟಾರೆ ಒಂದು ದಶಲಕ್ಷ ಗಂಟೆಗಳ ವರ್ಕೌಟ್ ಸಾಧ್ಯವಾಗಿಸುವುದು ಈ ಅಭಿಯಾನದ ಗುರಿಯಾಗಿದೆ. ನಮ್ಮ ವರ್ಕೌಟ್‌ಗಳ ಮೂಲಕ ಕರೊನಾ ವಿರುದ್ಧ ಹೋರಾಡುತ್ತಿರುವವರಿಗೆ ನೆರವಾಗುವ ನಂಬಿಕೆ ನನಗಿದೆ’ ಎಂದು ದೀಪಿಕಾ ಪಲ್ಲಿಕಲ್ ವಿವರಿಸಿದ್ದಾರೆ.

    ಇದನ್ನೂ ಓದಿ: ‘ವಿರೂಷ್ಕಾ ಡಿವೋರ್ಸ್’ ಭರ್ಜರಿ ಟ್ರೆಂಡಿಂಗ್‌ನಲ್ಲಿದೆ ಯಾಕೆ ಗೊತ್ತೇ?

    ಮಹಿಳೆಯರ ಸ್ಕ್ವಾಷ್​ ರ‌್ಯಾಂಕಿಂಗ್‌ನಲ್ಲಿ ಅಗ್ರ 10ರೊಳಗೆ ಸ್ಥಾನ ಸಂಪಾದಿಸಿದ ಮೊದಲ ಭಾರತೀಯರೆನಿಸಿರುವ ದೀಪಿಕಾ, 2014ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 1 ಚಿನ್ನ, 2018ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ 2 ಬೆಳ್ಳಿ ಜಯಿಸಿದ್ದರು. ಏಷ್ಯಾಡ್‌ನಲ್ಲೂ 4 ಪದಕ ಗೆದ್ದ ಸಾಧಕಿಯಾಗಿದ್ದಾರೆ. 2015ರಲ್ಲಿ ಅವರು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್‌ರನ್ನು ವರಿಸಿದ್ದರು. ಅವರ ತಾಯಿ ಸುಸಾನ್ ಪಲ್ಲಿಕಲ್ ಭಾರತ ಮಹಿಳಾ ಕ್ರಿಕೆಟ್ ತಂಡದ ಮಾಜಿ ಆಟಗಾರ್ತಿಯಾಗಿದ್ದಾರೆ.

    ಪತ್ನಿ ರಿತಿಕಾ ಕಣ್ಣೀರಿಗೆ ಕಾರಣ ಕೊಟ್ಟ ರೋಹಿತ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts