More

    ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ವಾಪಸ್

    ಧಾರವಾಡ: ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯÁಗಿ ಸ್ಪಽðಸಿದ್ದ ಶಿರಹಟ್ಟಿ, ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸೋಮವಾರ ನಾಮಪತ್ರ ವಾಪಸ್ ಪಡೆದರು. ಸ್ವಾಮೀಜಿ ಪರ ಏಜೆಂಟ್ ಸಚಿನ್ ಪಾಟೀಲ ಜಿಲ್ಲಾ ಚುನಾವಣಾಽಕಾರಿ ಕಚೇರಿಗೆ ತೆರಳಿ ನಾಮಪತ್ರ ವಾಪಸ್ ಪಡೆದರು.
    ಕ್ಷೇತ್ರದಲ್ಲಿ ಇದೇ ಮೊದಲ ಬಾರಿ ಸ್ವಾಮೀಜಿಯೊಬ್ಬರು ಸ್ಪಽðಸಿದ್ದು ತೀವ್ರ ಕುತೂಹಲ ಕೆರಳಿಸಿತ್ತು. ಚುನಾವಣಾ ಪ್ರಕ್ರಿಯೆ ಆರಂಭವಾದಾಗ ೩ ಬಾರಿ ಸುದ್ದಿಗೋಷ್ಠಿ ನಡೆಸಿ ಸ್ಪರ್ಧೆ ಖಚಿತ ಎಂದು ಸ್ವಾಮೀಜಿ ಘೋಷಿಸಿದ್ದರು. ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ವಿವಿಧ ಮಠಾಽÃಶರ ಚಿಂತನ ಸಭೆ ಕೂಡ ನಡೆಸಿದ್ದರು. ಧಾರವಾಡದಲ್ಲೂ ಭಕ್ತರ ಅಭಿಪ್ರಾಯ ಸಂಗ್ರಹಣೆ ಸಭೆ ನಡೆಸಿದ್ದರು. ಕೊನೆಗೆ ಧಾರವಾಡ ಕ್ಷೇತ್ರದಿಂದ ಸ್ಪಽðಸುವುದಾಗಿ ಬೆಂಗಳೂರಿನಲ್ಲಿ ಘೋಷಿಸಿದ್ದರು.
    ಆರಂಭದಲ್ಲಿ ಸ್ವಾಮೀಜಿ ಪ್ರಲ್ಹಾದ ಜೋಶಿ ಅವರನ್ನು ಸೋಲಿಸುವುದು ನನ್ನ ಗುರಿ' ಎಂದಿದ್ದರು. ಬಳಿಕಜೋಶಿಯನ್ನು ಸೋಲಿಸುವ ಗುರಿ ಇತ್ತು, ಈಗ ನಾನೇ ಗೆಲ್ಲಬೇಕು ಎನಿಸುತ್ತಿದೆ’ ಎಂದು ಸ್ವಾಮೀಜಿ ಹೇಳಿದ್ದರು. ಅಪಾರ ಭಕ್ತರು ಮತ್ತು ಬೆಂಬಲಿಗರೊAದಿಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದ್ದರು.
    ಕ್ಷೇತ್ರದಲ್ಲಿ ೪ ಬಾರಿ ಗೆದ್ದು ಕೇಂದ್ರ ಸಚಿವರೂ ಆಗಿರುವ ಪ್ರಲ್ಹಾದ ಜೋಶಿ ಹಾಗೂ ಕಾಂಗ್ರೆಸ್‌ನಿAದ ಯುವ ಮುಖಂಡ ವಿನೋದ ಅಸೂಟಿ ಕಣದಲ್ಲಿದ್ದಾರೆ. ಸ್ವಾಮೀಜಿ ಸ್ಪರ್ಧೆಯಿಂದ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಇದೀಗ ಸ್ವಾಮೀಜಿ ಕಣದಿಂದ ಹಿಂದೆ ಸರಿದಿದ್ದರಿಂದ ಬಿಜೆಪಿಯ ಪ್ರಲ್ಹಾದ ಜೋಶಿ ಹಾಗೂ ಕಾಂಗ್ರೆಸ್‌ನ ವಿನೋದ ಅಸೂಟಿ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts