More

    IPL 2024: ಮುಂಬೈ ವಿರುದ್ಧ ಡಿಕೆ ಅಬ್ಬರ; ಯುವರಾಜ್​ ಸಿಂಗ್ ದಾಖಲೆ ಹಿಂದಿಕ್ಕಿದ ದಿನೇಶ್ ಕಾರ್ತಿಕ್!

    ಮುಂಬೈ: ನಿನ್ನೆ (ಏ.11) ಮುಂಬೈನ ವಾಂಖಡೆ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್​ ಮತ್ತು ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳ ನಡುವಿನ ಹಣಾಹಣಿಯಲ್ಲಿ ಹಾರ್ದಿಕ್​ ಪಡೆಗೆ 7 ವಿಕೆಟ್​ಗಳ ಭರ್ಜರಿ ಗೆಲುವು ಸಿಕ್ಕಿತು. ಸತತ ಸೋಲು ಅನುಭವಿಸುತ್ತಿರುವ ಆರ್​ಸಿಬಿ ಪರ ಸಿಕ್ಸರ್​, ಫೋರ್ಸ್​​ಗಳನ್ನು ಸಿಡಿಸಿದ ವಿಕೆಟ್ ಕೀಪರ್​, ಬ್ಯಾಟ್ಸ್​ಮನ್​ ದಿನೇಶ್ ಕಾರ್ತಿಕ್​ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.

    ಇದನ್ನೂ ಓದಿ: ಚುನಾವಣೆಯಲ್ಲಿ ಈ ಅಭ್ಯರ್ಥಿ ಗೆಲ್ಲುವುದು ಪಕ್ಕಾ! ವೈರಲ್ ಆಯ್ತು ಗಿಳಿ ಭವಿಷ್ಯ; ಜ್ಯೋತಿಷಿ ಅಂದರ್

    ಅನುಭವಿ ವಿಕೆಟ್‌ಕೀಪರ್-ಬ್ಯಾಟರ್ ಆದ ದಿನೇಶ್ ಕಾರ್ತಿಕ್, ಏಪ್ರಿಲ್ 11 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ (MI) ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಕಡೆಯ 2 ಓವರ್​ಗಳಲ್ಲಿ ಮತ್ತೊಮ್ಮೆ ತಮ್ಮ ಪರಾಕ್ರಮವನ್ನು ಪ್ರದರ್ಶಿಸಿದರು. ಈ ಸೀಸನ್​ನಲ್ಲಿ ಭಾರೀ ಹಿನ್ನಡೆಗಳ ಹೊರತಾಗಿಯೂ, ಕಾರ್ತಿಕ್ ನಿರಂತರವಾಗಿ ಆರ್​ಸಿಬಿ ಪರ ಬ್ಯಾಟ್ ಬೀಸುತ್ತಿದ್ದಾರೆ.

    ನಿನ್ನೆಯ ಪಂದ್ಯದಲ್ಲಿ ಅತ್ಯುತ್ತಮ ಕೀಪಿಂಗ್ ಮಾಡಿದ ದಿನೇಶ್ ಕಾರ್ತಿಕ್, ಬ್ಯಾಟಿಂಗ್​ಗೆ ಬಂದಾಗಲೂ ತಂಡದ ಸ್ಕೋರ್​ ಅನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಜೇಯ 23 ಎಸೆತಗಳಲ್ಲಿ 53 ರನ್‌ಗಳ ಸಿಡಿಸಿದ ದಿನೇಶ್ ಕಾರ್ತಿಕ್​, ಐಪಿಎಲ್‌ನಲ್ಲಿ 150 ಸಿಕ್ಸರ್‌ಗಳ ಮಹತ್ವದ ಮೈಲಿಗಲ್ಲನ್ನು ತಲುಪಿದರು.

    ಇದನ್ನೂ ಓದಿ: ಪ್ಯಾರಿಸ್​ ಗೇಮ್ಸ್​ಗೆ ಮುನ್ನ 90 ಮೀಟರ್​ ಗಡಿ ದಾಟುವ ವಿಶ್ವಾಸದಲ್ಲಿ ನೀರಜ್​ ಚೋಪ್ರಾ

    ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಈ ಪಟ್ಟಿಯಲ್ಲಿದ್ದರು. ಈಗ ದಿನೇಶ್ ಅದನ್ನು ಹಿಂದಿಕ್ಕಿದ್ದಾರೆ. ಇದಲ್ಲದೆ, ತಮ್ಮ ಕ್ಯಾಪ್‌ಗೆ ಮತ್ತೊಂದು ಗರಿಯನ್ನು ಸೇರಿಸಿದ್ದು, ಐದು ಬೌಂಡರಿಗಳನ್ನು ಸಿಡಿಸುವ ಮೂಲಕ ಐಪಿಎಲ್‌ನಲ್ಲಿ ಒಟ್ಟು 450 ಬೌಂಡರಿಗಳನ್ನು ದಾಖಲಿಸಿದ್ದಾರೆ.

    ತಮಿಳುನಾಡು ಮೂಲದ ದಿನೇಶ್ ಕಾರ್ತಿಕ್​ ಸದ್ಯ ಟಿ-20 ಲೀಗ್​ನಲ್ಲಿ ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದ್ದು, ಕೇವಲ 248 ಐಪಿಎಲ್ ಪಂದ್ಯಗಳಲ್ಲಿ ಈ ಅದ್ಭುತ ಸಾಧನೆ ಮಾಡಿದ್ದಾರೆ. ಅದೇ ಪಂದ್ಯದಲ್ಲಿ, RCB ನಾಯಕ ಫಾಫ್ ಡು ಪ್ಲೆಸಿಸ್ ಕೂಡ ಐಪಿಎಲ್​ನಲ್ಲಿ 150 ಬೌಂಡರಿಗಳನ್ನು ಪೂರೈಸಿದರು. 136 ಪಂದ್ಯಗಳಲ್ಲಿ ಈ ಸಾಧನೆಗೈದರು,(ಏಜೆನ್ಸೀಸ್). 

    ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

    ಕುಡಿದದ್ದು ಒಂದೇ ಒಂದು ಎಳನೀರು, ಕೊಟ್ಟಿದ್ದು ಮಾತ್ರ 50,000 ರೂ.! ಶಾಕಿಂಗ್ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts