More

    ರೈತ ಹೋರಾಟದಲ್ಲಿ ಪಿಜ್ಜಾ! ರೈತರು ವಿಷ ಕುಡಿದರೆ ತಲೆ ಕೆಡಿಸಿಕೊಳ್ಳಲ್ಲ, ಪಿಜ್ಜಾ ತಿಂದರೆ ಪ್ರಶ್ನೆಯೇಕೆ ಎಂದ ಗಾಯಕ

    ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತ ಹೋರಾಟ ಎರಡು ವಾರಗಳಿಗಿಂತ ಹೆಚ್ಚಾಗಿದೆ. ರೈತ ಹೋರಾಟಕ್ಕೆ ಅನೇಕರು ಬೆಂಬಲ ನೀಡಿದ್ದು, ಹೋರಾಟ ಸ್ಥಳಕ್ಕೇ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸಗಳನ್ನು ಮಾಡಲಾರಂಭಿಸಿದ್ದಾರೆ. ಅದೇ ನಿಟ್ಟಿನಲ್ಲಿ ರೈತರಿಗೆ ಪಿಜ್ಜಾವನ್ನು ಪೂರೈಕೆ ಮಾಡಲಾಗಿದ್ದು, ಅನೇಕ ಟ್ರೋಲಿಗರು ಅದನ್ನು ಟ್ರೋಲ್​ ಮಾಡಿದ್ದರು. ಇದೀಗ ಇದರ ವಿರುದ್ಧ ಗಾಯಕ ದಿಲ್ಜಿತ್ ದೋಸಾಂಜ್ ಧ್ವನಿ ಎತ್ತಿದ್ದಾರೆ.

    ಇದನ್ನೂ ಓದಿ: ಅಪ್ಪ ಪ್ರೀತಿಯಿಂದ ಕೊಡಿಸಿದ್ದ ಬೈಕ್​ನಲ್ಲಿ ಲವರ್​ ಜತೆ ಸುತ್ತಾಡಿದ ಮಗ; ಸಿಟ್ಟಿನಿಂದ ಅಪ್ಪ ಮಾಡಿದ್ದೇನು ಗೊತ್ತಾ?

    ರೈತರು ವಿಷ ಸೇವಿಸಿ ಸಾವನ್ನಪ್ಪಿದಾಗ ಅದರ ಬಗ್ಗೆ ಯಾರೂ ಯೋಚನೆಯನ್ನೇ ಮಾಡುವುದಿಲ್ಲ. ಆದರೆ ಈಗ ಪಿಜ್ಜಾ ತಿಂದರೆ ಅದೇ ಒಂದು ದೊಡ್ಡ ಸುದ್ದಿಯಾಗಿಬಿಡುತ್ತದೆ ಎಂದು ದಿಲ್ಜಿತ್​ ಹೇಳಿದ್ದಾರೆ.

    ಇದನ್ನೂ ಓದಿ: ಚಿನ್ನದ ಅಂಶ ಹೆಚ್ಚಿದ್ದರೆ ಮತ್ತೆ ಗಣಿಗಾರಿಕೆ : ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭರವಸೆ

    ಕಳೆದ ವಾರ, ದೆಹಲಿ-ಹರಿಯಾಣ ಗಡಿಯಲ್ಲಿರುವ ಸಿಂಗು ಎಂಬಲ್ಲಿ ನೂರಾರು ಪಿಜ್ಜಾಗಳನ್ನು ಹೋರಾಟನಿರತ ರೈತರಿಗೆ ವಿತರಿಸಲಾಗಿತ್ತು. ಪಿಜ್ಜಾಗಳಿಗಾಗಿ ಹಿಟ್ಟನ್ನು ನೀಡಿದ ರೈತರು ಅದೇ ಪಿಜ್ಜಾವನ್ನು ಏಕೆ ತಿನ್ನಬಾರದು? ಎಂದು ಪಿಜ್ಜಾ ವಿತರಣೆ ಮಾಡಿದ್ದ ಶನ್‌ಬೀರ್ ಸಿಂಗ್ ಸಂಧು ಕೇಳಿದ್ದರು. ಅದೇ ರೀತಿ ಸಂಸ್ಥೆಯೊಂದು ರೈತರಿಗಾಗಿ ಫೂಟ್ ಮಸಾಜರ್​ಗಳನ್ನು ನೀಡಿದ್ದು, ಅದೂ ಕೂಡ ಅನೇಕರ ಕೆಂಗಣ್ಣಿಗೆ ಗುರಿಯಾಗಿತ್ತು. (ಏಜೆನ್ಸೀಸ್​)

    ಇನ್​ಸ್ಟಾಗ್ರಾಂ ಸ್ಟಾರ್​ಗೆ 10 ವರ್ಷ ಜೈಲು! ವಿಚಿತ್ರವಾಗಿ ಕಾಣಲು ಹೋಗಿ ಜೈಲು ಸೇರಿದ ಯುವತಿ

    ಕಿರಿ ಸೊಸೆ ಜತೆ ಮಾವನ ಅಕ್ರಮ ಸಂಬಂಧ; ವಿಚಾರ ತಿಳಿದ ಹಿರಿ ಸೊಸೆ, ಅತ್ತೆ ಮಾಡಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts