More

    ನಿಮ್ಮ ಪ್ರೀತಿಯ ಪಿಜ್ಜಾ ಬರ್ತ್‌ಡೇಗೆ ವಿಷ್‌ ಮಾಡಿರುವಿರಾ? ಗೂಗಲ್‌ನಲ್ಲಿ ಕಟ್‌ ಮಾಡಿ ಸ್ಟಾರ್‌ ಪಡೆದಿರುವಿರಾ?

    ನ್ಯೂಯಾರ್ಕ್‌: ಪಿಜ್ಜಾ ಎಂಬ ಹೆಸರು ಕೇಳಿದರೇನೇ ಬಹುತೇಕ ಮಂದಿಯ ಬಾಯಲ್ಲಿ ನೀರೂರುತ್ತದೆ. ಚಿಕ್ಕಮಕ್ಕಳಷ್ಟೇ ಅಲ್ಲದೇ ದೊಡ್ಡವರಿಗೂ ಇದು ಬಲು ಇಷ್ಟ. ಪಿಜ್ಜಾ ಇದು ಎಷ್ಟು ಜನಪ್ರಿಯವಾಗಿದೆ ಎಂದರೆ ವಿಶ್ವದಲ್ಲಿ ಇಂದು ಪ್ರತಿದಿನ ಅಂದಾಜು ಐದು ಬಿಲಿಯನ್ ಪಿಜ್ಜಾಗಳನ್ನು ಸೇವಿಸಲಾಗುತ್ತಿದೆ. ಈ ಪೈಕಿ ಅಮೆರಿಕ ಒಂದರಲ್ಲಿಯೇ ಪ್ರತಿ ಸೆಕೆಂಡಿಗೆ 350 ಸ್ಲೈಸ್‌ ಪಿಜ್ಜಾಗಳು ಮಾರಾಟವಾಗುತ್ತಿವೆ.

    ಇಂಥ ಪಿಜ್ಜಾ ಹುಟ್ಟಿದ ಹಬ್ಬ ಡಿಸೆಂಬರ್‌ 6. ಇದೇ ಕಾರಣಕ್ಕೆ ಕಳೆದೆರಡು ದಿನಗಳಿಂದ ಗೂಗಲ್‌, ತನ್ನ ಡೂಡಲ್‌ ಮೂಲಕ ಪಿಜ್ಜಾಕ್ಕೆ ಅಭಿನಂದನೆ ಸಲ್ಲಿಸಿದೆ. ವಿಶೇಷ ಗಣ್ಯ ವ್ಯಕ್ತಿಗಳು ಹಾಗೂ ವಿಶೇಷ ಘಟನೆ ನಡೆದ ದಿನಗಳಂದು ಆ ದಿನವನ್ನು ಗೂಗಲ್‌ ಡೂಡಲ್‌ ಮೂಲಕ ನೆನಪಿಸಿ, ಆ ದಿನವನ್ನು ಅದಕ್ಕೆ ಸಮರ್ಪಿಸುತ್ತದೆ. ಇದೀಗ ಪಿಜ್ಜಾಕ್ಕೆ ಡೂಡಲ್‌ ಮೀಸಲು ಇರಿಸಲಾಗಿದೆ. ಇದಕ್ಕಾಗಿ ಪಿಜ್ಜಾ ಕಟ್‌ ಮಾಡುವ ಆಟವೂ ಇದ್ದು, ಸರಿಯಾಗಿ ಕಟ್‌ ಮಾಡಿದ್ದಷ್ಟೂ ಹೆಚ್ಚೆಚ್ಚು ಸ್ಟಾರ್‌ಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸಿದೆ.

    ಈ ಪಿಜ್ಜಾ ಪಝಲ್‌ ಗೇಮ್‌ನಲ್ಲಿ ಆಟಗಾರರು ಪಿಜ್ಜಾ ಸ್ಲೈಸ್‌ ಅನ್ನು ಸರಿಯಾಗಿ ಸ್ಲೈಸ್‌ ಮಾಡಬೇಕಾಗಿದೆ. ಆಟದಲ್ಲಿಯೇ ಎಷ್ಟು ಸ್ಲೈಸ್‌ ಮಾಡಬೇಕು ಎಂದು ತೋರಿಸಲಾಗುತ್ತದೆ. ಒಟ್ಟು ಹನ್ನೊಂದು ಬಗೆಯ ಪಿಜ್ಜಾವನ್ನು ಈ ಆಟದಲ್ಲಿ ಪ್ರಸ್ತುತ ಪಡಿಸಲಾಗಿದೆ. ಹನ್ನೊಂದು ಬಗೆಯ ಪಿಜ್ಜಾವನ್ನು ಹನ್ನೊಂದು ರೀತಿಯಲ್ಲಿ ಸ್ಲೈಲ್‌ ಮಾಡಲು ಹೇಳಲಾಗಿದೆ. ನಾವು ಆಡಿದ ಶೈಲಿಯನ್ನು ನೋಡಿ ನಮಗೆ ಈ ಆಟದಲ್ಲಿ ಸ್ಟಾರ್‌ ನೀಡಲಾಗುತ್ತದೆ.

    ಇಂಥ ವಿಶೇಷತೆಯುಳ್ಳ ಪಿಜ್ಜಾ ಹುಟ್ಟುಹಬ್ಬ ಯಾವಾಗ ಬಂತು? ಇದರ ಹಿನ್ನೆಲೆ ಏನು ಎಂಬುದು ನಿಮಗೆ ಗೊತ್ತೆ?

    ಪಿಜ್ಜಾ ಎನ್ನುವ ಪರಿಕಲ್ಪನೆ ಶುರುವಾದದ್ದು 1700ರಲ್ಲಿ. ನೈಋತ್ಯ ಇಟಲಿಯ ನಗರವಾದ ನೇಪಲ್ಸ್‌ನಲ್ಲಿ ಪಿಜ್ಜಾ ಪ್ರಾರಂಭವಾಯಿತು. ಅಂದರೆ ಇದಕ್ಕೆ ಶತಮಾನಗಳ ಇತಿಹಾಸವಿದೆ. ಕಾಲಕ್ಕೆ ತಕ್ಕಂತೆ ಅದರ ರುಚಿ, ವೆರೈಟಿಗಳಲ್ಲಿ ಬದಲಾಗುತ್ತಾ ಬಂದಿದೆ.

    ಆದರೆ ಅದರ ಹುಟ್ಟುಹಬ್ಬವನ್ನು ಡಿಸೆಂಬರ್‌ 6ರಂದು ಆಚರಿಸಲಾಗುತ್ತದೆ. ಅದಕ್ಕೆ ಕಾರಣ ಏನೆಂದರೆ, ಇದನ್ನು ತಯಾರಿಸುವುದು ಒಂದು ಕಲೆ ಎಂದು ಬಣ್ಣಿಸಲಾಗಿದೆ. ಇದನ್ನು “ನಿಯಾಪೊಲಿಟನ್ ಪಿಜ್ಜೈಯುಲೊ ಕಲೆ ಎನ್ನಲಾಗುತ್ತದೆ. ಅಷ್ಟಕ್ಕೂ ನಿಯಾಪೊಲಿಟನ್ ಪಿಜ್ಜೈಯುಲೊ ಕಲೆ ಎಂದರೆ, ಇದು ಪಾಕಶಾಲೆಯ ಒಂದು ಕಲೆಯಾಗಿದೆ. ಇದು ಪಿಜ್ಜಾದ ಹಿಟ್ಟನ್ನು ತಯಾರಿಸುವುದು, ಅದನ್ನು ಕಟ್ಟಿಗೆ ಒಲೆಯಲ್ಲಿ ಬೇಯಿಸುವುದು, ಮುಂದಿನ ಪ್ರಕ್ರಿಯೆಗೆ ಅಣಿ ಮಾಡುವುದು ಇವೆಲ್ಲವನ್ನೂ ಸೇರಿಸಿ ನಿಯಾಪೊಲಿಟನ್ ಪಿಜ್ಜೈಯುಲೊ ಕಲೆ ಎನ್ನಲಾಗುತ್ತದೆ.

    2007ರ ಡಿಸೆಂಬರ್‌ 6ರಂದು ಈ ಕಲೆಯನ್ನು ಅಮೂರ್ತ ಸಾಂಸ್ಕೃತಿಕ ಪರಂಪರೆ (Intangible Cultural Heritage of Humanity) ಪಟ್ಟಿಗೆ ಯುನೆಸ್ಕೋ ಸೇರಿಸಿದೆ. ಈ ಹಿನ್ನೆಲೆಯಲ್ಲಿ ಅದನ್ನೇ ಇದರ ಹುಟ್ಟುಹಬ್ಬ ಎಂದು ಬಣ್ಣಿಸಲಾಗುತ್ತಿದ್ದು, ಈ ದಿನವನ್ನು ಗೂಗಲ್‌ ಡೂಡಲ್‌ ಮೂಲಕ ಅಭಿನಂದಿಸಿದೆ.

    ಗೂಗಲ್‌ನಲ್ಲಿರುವ 11 ಬಗೆಯ ವೆರೈಟಿಗಳು ಯಾವುವು ಗೊತ್ತಾ? ಮಾರ್ಗರಿಟಾ ಪಿಜ್ಜಾ (ಚೀಸ್, ಟೊಮ್ಯಾಟೊ, ಪೆಪ್ಪೆರೋನಿ), ಪೆಪ್ಪೆರೋನಿ (ಚೀಸ್, ಪೆಪ್ಪೆರೋನಿ), ವೈಟ್ ಪಿಜ್ಜಾ (ಚೀಸ್, ವೈಟ್ ಸಾಸ್, ಮಶ್ರೂಮ್‌, ಬ್ರೊಕೊಲಿ), ಕ್ಯಾಲಬ್ರೆಸಾ (ಚೀಸ್, ಕ್ಯಾಲಬ್ರೆಸಾ, ಆನಿಯನ್‌ ರಿಂಗ್ಸ್, ಬ್ಲ್ಯಾಕ್‌ ಆಲಿವ್ಸ್‌), ಮುಝಾರೆಲ್ಲಾ (ಚೀಸ್, ಓರೆಗಾನೊ, ಗ್ರೀನ್‌ ಆಲಿವ್ಸ್‌), ಹವಾಯಿಯನ್ (ಚೀಸ್, ಹ್ಯಾಮ್, ಪೈನ್‌ಆಪಲ್‌), ಮ್ಯಾಗ್ಯಾರೋಸ್ (ಚೀಸ್, ಸಲಾಮಿ, ಬೇಕನ್, ಆನಿಯನ್‌, ಚಿಲಿ ಪೆಪ್ಪರ್), ಟೆರಿಯಾಕಿ ಮೇಯನೇಸ್ (ಚೀಸ್, ಟೆರಿಯಾಕಿ ಚಿಕನ್, ಸೀವೀಡ್, ಮೇಯನೇಸ್), ಟಾಮ್ ಯಮ್ ಪಿಜ್ಜಾ (ಚೀಸ್, ಶ್ರಿಂಪ್‌-ಸಿಗಡಿ, ಮಶ್ರೂಮ್‌, ಚಿಲಿ ಪೆಪ್ಪರ್, ನಿಂಬೆ ಎಲೆಗಳು), ಪನೀರ್ ಟಿಕ್ಕಾ (ಪನೀರ್, ಕ್ಯಾಪ್ಸಿಕಂ, ಆನಿಯನ್‌, ಬ್ಲಾಕ್‌ ಪೆಪ್ಪರ್‌).

    VIDEO: ವರ ಹಾರ ಹಾಕಲು ಮುಂದಾಗುತ್ತಿದ್ದಂತೆಯೇ ಓಡಿಬಂದು ಸಿಂಧೂರವಿಟ್ಟ ಪ್ರೇಮಿ- ವೈರಲ್‌ ವಿಡಿಯೋಗೆ ದಂಗಾದ ಜನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts