More

    ಚಿತ್ರ ವಿಮರ್ಶೆ: ‘ದಿಲ್​ ಪಸಂದ್​’ನಲ್ಲಿ ಸ್ವಲ್ಪ ನಗುವಿದೆ, ಸ್ವಲ್ಪ ಅಳುವಿದೆ

    ಚಿತ್ರ: ದಿಲ್​ ಪಸಂದ್​
    ನಿರ್ಮಾಣ: ಸುಮಂತ್​ ಕ್ರಾಂತಿ
    ನಿರ್ದೇಶನ: ಶಿವತೇಜಸ್​
    ತಾರಾಗಣ: ‘ಡಾರ್ಲಿಂಗ್​’ ಕೃಷ್ಣ, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ, ರಂಗಾಯಣ ರಘು, ಅರುಣಾ ಬಾಲರಾಜ್​, ಅಜೇಯ್​ ರಾವ್, ಸಾಧು ಕೋಕಿಲ ಮುಂತಾದವರು
    ಸ್ಟಾರ್ಸ್​: 2.5

    – ಚೇತನ್​ ನಾಡಿಗೇರ್​

    ಅವನಿಗೆ ಮದುವೆ ಫಿಕ್ಸ್​ ಆಗಿರುತ್ತದೆ. ಮಧ್ಯೆ ಗ್ಯಾಪ್​ನಲ್ಲಿ ಒಂದು ರಾತ್ರಿ ರಸ್ತೆಯಲ್ಲಿ ಕುಡಿದು ತೇಲಾಡುತ್ತಿರುವ ಯುವತಿಯ ಭೇಟಿ ಆಗುತ್ತದೆ. ಒಳ್ಳೆಯ ಉದ್ದೇಶದಿಂದ ಅವಳನ್ನು ಒಂದು ಲಾಡ್ಜ್​​ಗೆ ಕರೆದುಕೊಂಡು ಹೋಗಿ ಮಲಗಿಸುತ್ತಾನೆ. ಆದರೆ, ಅವಳಿಗೆ ಅವನ ಮೇಲೆ ಡೌಟು. ಅವನಿಂದ ತಾನೇದರೂ ಗರ್ಭಿಣಿಯಾದರೆ? ಅದಕ್ಕೆ 45 ದಿನಗಳ ಕಾಲ ಗಡುವು ಕೊಡುತ್ತಾಳೆ. ಅಷ್ಟರಲ್ಲಿ ಏನಾದರೂ ತಾನು ಗರ್ಭಿಣಿಯಾದರೆ ತನ್ನನ್ನು ಮದುವೆಯಾಗಬೇಕು, ಇಲ್ಲವಾದರೆ ಮನೆಯವರು ನೋಡಿದ ಹುಡುಗಿಯನ್ನು ಮದುವೆಯಾಗಬಹುದು ಎಂದು ಷರತ್ತು ಹಾಕುತ್ತಾಳೆ. ಅಲ್ಲಿಗೆ ಅವನು ತನ್ನ ಒಳ್ಳೆಯತನ ಸಾಬೀತುಪಡಿಸಲು 45 ದಿನ ಕಾಯಲೇಬೇಕು. ಒಂದು ಪಕ್ಷ ಅವಳು ಗರ್ಭಿಣಿಯಾದರೆ?

    ಇದನ್ನೂ ಓದಿ: ರಣರಂಗದಲ್ಲಿ ರಾಣ; ಸಾಹಸ ದೃಶ್ಯದಲ್ಲಿ ಶ್ರೇಯಸ್​ ಸರ್ಕಸ್

    ‘ದಿಲ್​ ಪಸಂದ್​’ ಚಿತ್ರದ ಕಥೆ ಏನೆಂದರೆ, ಇಷ್ಟನ್ನಂತೂ ಹೇಳಬಹುದು. ಕೃಷ್ಣ ಅಭಿನಯದ ಚಿತ್ರಗಳಲ್ಲಿ ಇತ್ತೀಚೆಗೆ ಇಬ್ಬರು ನಾಯಕಿಯರಿರುವುದು, ಅವರಿಬ್ಬರ ಮಧ್ಯೆ ನಾಯಕ ಒದ್ದಾಡುವುದು, ಕೊನೆಗೆ ತನಗೆ ಯಾರು ಮುಖ್ಯ ಎಂಬುದನ್ನು ಆತ ಅರ್ಥ ಮಾಡಿಕೊಳ್ಳುವುದು, ಈ ಮೂಲಕ ನಿಜವಾದ ಪ್ರೀತಿ ಏನು ಎಂದು ಆತನಿಗೆ ಸಾಕ್ಷಾತ್ಕಾರವಾಗುವುದು … ಇವೆಲ್ಲವೂ ಬೇರೆಬೇರೆ ರೀತಿ ಬಂದು ಹೋಗಿದೆ. ‘ದಿಲ್​ ಪಸಂದ್​’ ಸಹ ನಿಜಪ್ರೀತಿ ಎಂದರೇನು ಎಂದು ಇನ್ನೊಂದು ರೀತಿಯಲ್ಲಿ ಹೇಳುವ ಇನ್ನೊಂದು ಚಿತ್ರ. ಅದರ ಜತೆಗೆ ಮಕ್ಕಳು ಹೇಗಿರಬೇಕು ಮತ್ತು ಅವರ ಜವಾಬ್ದಾರಿಗಳು ಏನು ಎಂಬ ಸಂದೇಶವೂ ಈ ಚಿತ್ರದಲ್ಲಿದೆ.

    ಇಲ್ಲಿ ನಿರ್ದೇಶಕರು ಈ ಕಥೆಯನ್ನು ವಿಭಿನ್ನವಾಗಿ ಹೇಳುವ ಪ್ರಯತ್ನವನ್ನು ಮಾಡಿದ್ದಾರೆ. ಅದಕ್ಕೆ ಉದಾಹರಣೆ, ಚಿತ್ರದ ಪ್ರಾರಂಭ. ಸಾಮಾನ್ಯವಾಗಿ ಸ್ಟಾರ್​ ನಟ-ನಟಿಯರು ಒಂದು ಚಿತ್ರದ ನಿರೂಪಣೆ ಮಾಡಿದರೆ, ಇಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಧ್ವನಿಯನ್ನು ಹೋಲುವಂತಹ ಧ್ವನಿಯಿಂದ ಕಾಮೆಂಟರಿ ಶುರುವಾಗುತ್ತದೆ. ಚಿತ್ರದ ನಾಯಕ ಮತ್ತು ಅವನ ಕುಟುಂಬದವರ ಪರಿಚಯದಿಂದ ಶುರುವಾಗುವ ಚಿತ್ರವು ಕ್ರಮೇಣ ಮಾಮೂಲೀ ಟ್ರಾಕ್​ಗೆ ಮರಳುವ ಚಿತ್ರವು ಪುನಃ ಕುತೂಹಲ ಕೆರಳಿಸುವುದಕ್ಕೆ ಇಂಟರ್​ವೆಲ್​ವರೆಗೂ ಕಾಯಬೇಕು. ದ್ವಿತೀಯಾರ್ಧ ಸಹ ಇದಕ್ಕಿಂತ ಹೊರತಲ್ಲ. ಸುಲಭವಾಗಿ ಊಹಿಸಬಹುದಾದ ಈ ಚಿತ್ರದಲ್ಲಿ ಅಲ್ಲಲ್ಲಿ ನಗು ಉಕ್ಕುತ್ತದೆ, ಕೊನೆಯಲ್ಲಿ ಮಾತ್ರ ಕಣ್ಣು ಸ್ವಲ್ಪ ಒದ್ದೆಯಾಗುತ್ತಿದೆ. ಮಿಕ್ಕಂತೆ ಹೆಚ್ಚು ಏರಿಳಿತಗಳಿಲ್ಲದಿರುವ ಈ ಚಿತ್ರವು ಮೇಕಿಂಗ್​ನಿಂದ ಗಮನ ಸೆಳೆಯುತ್ತದೆ. ಚಿತ್ರದ ಅದ್ಧೂರಿ ಮೇಕಿಂಗ್​ಗೆ ಗಮನ ಕೊಡುವುದರ ಜತೆಗೆ, ಚಿತ್ರಕಥೆ ಮತ್ತು ನಿರೂಪಣೆಗೆ ಹೆಚ್ಚು ಮಹತ್ವ ನೀಡಿದ್ದರೆ ಚಿತ್ರ ಇನ್ನಷ್ಟು ಸಿಹಿಯಾಗಿರುತ್ತಿತ್ತೋ ಏನೋ?

    ಇದನ್ನೂ ಓದಿಐ ಸೆಡ್ ಯೆಸ್! ನಾಚಿದ ಮಲೈಕಾ; ಮದುವೆಗೆ ಒಪ್ಪಿಕೊಂಡ್ರಾ?

    ಕೃಷ್ಣಗೆ ಈ ರೀತಿಯ ಚಿತ್ರಗಳು ಹೊಸದಲ್ಲ. ಅವರು ತಮ್ಮ ಶಕ್ತಿಮೀರಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿಶ್ವಿಕಾ ಅಭಿನಯಿಸಿರುವ ಇಷ್ಟು ಚಿತ್ರಗಳಿಗೆ ಹೋಲಿಸಿದರೆ, ಇಲ್ಲಿ ಅವರಿಗೆ ಸಿಕ್ಕಾಪಟ್ಟೆ ಸ್ಕೋಪ್​ ಇದೆ ಮತ್ತು ಅವರು ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಮೇಘಾ ಶೆಟ್ಟಿಗೆ ಹೆಚ್ಚು ಕೆಲಸವಿಲ್ಲ. ಚಿಕ್ಕ ಪಾತ್ರವನ್ನೇ ಅವರು ಬಹಳ ಕಷ್ಟಪಟ್ಟು ಮಾಡಿರುವುದು ಗೊತ್ತಾಗುತ್ತದೆ. ಅಜೇಯ್​ ರಾವ್ ಹೀಗೆ ಬಂದು ಹಾಗೆ ಹೋಗುತ್ತಾರೆ. ರಂಗಾಯಣ ರಘು ತಂದೆಯಾಗಿ ಇಷ್ಟವಾಗುತ್ತಾರೆ. ತಬಲಾ ನಾಣಿ, ಗಿರಿ, ಸಾಧು ಕೋಕಿಲ ಪಾತ್ರಗಳು ಪ್ರೇಕ್ಷಕರಿಗೆ ಖುಷಿಕೊಡುವುದಕ್ಕಿಂತ ಕೆರಳಿಸುವುದೇ ಹೆಚ್ಚು. ಅರ್ಜುನ್​ ಜನ್ಯ ಹಾಡುಗಳು ವಿಶೇಷ ಎಂದನಿಸುವುದಿಲ್ಲ. ಶೇಖರ್​ ಚಂದ್ರ ಛಾಯಾಗ್ರಹಣದಲ್ಲಿ ಇಡೀ ಚಿತ್ರ ಬಹಳ ಕಲರ್​ಫುಲ್​ ಆಗಿದೆ.

    ಕಾಂತಾರ ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್ ಮಾರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts