More

    MARIGOLD MOVIE REVIEW: ಗೋಲ್ಡ್​ ಹಿಂದೆ ಬಿದ್ದವರ ಗೋಳು

    | ಹರ್ಷವರ್ಧನ್​ ಬ್ಯಾಡನೂರು

    ಚಿತ್ರ: ಮಾರಿಗೋಲ್ಡ್​
    ನಿರ್ದೇಶನ: ರಾವೇಂದ್ರ ಎಂ ನಾಯಕ್​
    ನಿರ್ಮಾಣ: ರುವರ್ಧನ್​
    ತಾರಾಗಣ: ದಿಗಂತ್​, ಸಂಗೀತಾ ಶೃಂಗೇರಿ, ಯಶ್​ ಶೆಟ್ಟಿ, ಕಾಕ್ರೋಚ್​ ಸುಧಿ, ಸಂಪತ್​ ಮೈತ್ರೇಯ, ವಜ್ರಾಂಗ್​ ಶೆಟ್ಟಿ, ಮಹಾಂತೇಶ್​ ಹಿರೇಮಠ್​ ಮುಂತಾದವರು

    MARIGOLD MOVIE REVIEW: ಗೋಲ್ಡ್​ ಹಿಂದೆ ಬಿದ್ದವರ ಗೋಳು

    ಆತ ಕೃಷ್ಣ (ದಿಗಂತ್​). ಕ್ರಿಮಿನಾಲಜಿ ಓದಿಕೊಂಡಿರುವ ಖತರ್ನಾಕ್​ ಕ್ರಿಮಿ. ಪೊಲೀಸ್​ ಅಧಿಕಾರಿಗಳು ವಸೂಲಿ ಮಾಡಿ, ಡೀಲಿಂಗ್​ಗಳನ್ನು ನಡೆಸಿ ಕೂಡಿಟ್ಟ 60 ಕೋಟಿ ರೂ. ಮೌಲ್ಯದ 20 ಕೆಜಿ ಚಿನ್ನವನ್ನು ಲಪಟಾಯಿಸಲು ಪ್ಲಾ$್ಯನ್​ ಮಾಡುತ್ತಾನೆ. ಆತನಿಗೆ ಬಾರ್​ ಡಾನ್ಸರ್​ ಸೋನು (ಸಂಗೀತಾ), ಸುಧಿ ಅಲಿಯಾಸ್​ ಮುದ್ದೆ (ಸುಧಿ) ಮತ್ತು ಬಾಲಾಜಿ ಅಲಿಯಾಸ್​ ಗಿಲ್ಕಿ (ಯಶ್​) ಜತೆಯಾಗುತ್ತಾರೆ. ಜಾನಿ (ವಜ್ರಾಂಗ್​) ಮತ್ತು ಗ್ಯಾಂಗ್​ ಮೊದಲು ಆ ಚಿನ್ನವನ್ನು ದರೋಡೆ ಮಾಡುತ್ತಾರೆ. ಅವರಿಂದ ಅದನ್ನು ಕಿತ್ತುಕೊಳ್ಳುವ ಈ ಕೃಷ್ಣ ಮತ್ತು ಟೀಂ ಯತ್ನಿಸುತ್ತದೆ. ಮುಂದೆ? ಈ ಎರಡೂ ಗ್ಯಾಂಗ್​ಗಳಲ್ಲಿ ಚಿನ್ನ ಯಾರ ಪಾಲಾಗುತ್ತದೆ? ಇವರನ್ನು ಬಿಟ್ಟು ಮೂರನೆಯವರೂ ಇದ್ದಾರಾ? ಪೊಲೀಸರಿಂದ ಚಿನ್ನ ಕದ್ದರೆ, ಅವರು ಸುಮ್ಮನೇ ಬಿಡುತ್ತಾರಾ? ಗೋಲ್ಡ್​ ಎಂಬ ಮಾರಿಯನ್ನು ಹೆಗಲೇರಿಸಿಕೊಂಡವರ ಕಥೆ ಏನಾಗುತ್ತದೆ ಎಂಬುದೇ “ಮಾರಿಗೋಲ್ಡ್​’.

    MARIGOLD MOVIE REVIEW: ಗೋಲ್ಡ್​ ಹಿಂದೆ ಬಿದ್ದವರ ಗೋಳು

    ಇದುವರೆಗೆ 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ದಿಗಂತ್​ ಇದೇ ಮೊದಲ ಬಾರಿಗೆ ರಾ, ರಗಡ್​ ಪಾತ್ರದಲ್ಲಿ ನಟಿಸಿದ್ದು, ಗಮನ ಸೆಳೆಯುತ್ತಾರೆ. ರೊಮ್ಯಾಂಟಿಕ್​ ಕಾಮಿಡಿ ಚಿತ್ರಗಳಲ್ಲಿ ಚಾಕ್ಲೇಟ್​ ಲುಕ್​ನಲ್ಲಿ ಮಿಂಚುತ್ತಿದ್ದ ದಿಗಂತ್​, ಅವರ ಹೊಸ ರೂಪವನ್ನು ನೋಡುವುದೇ ಚಂದ. ಅವರಿಗೆ ಸರಿಸಮನಾಗಿ ಸಾಥ್​ ನೀಡಿದ್ದಾರೆ ಸಂಗೀತಾ, ಸುಧಿ ಮತ್ತು ಯಶ್​. ಇನ್ನು ದಿಗಂತ್​ ಮತ್ತು ಸಂಪತ್​ ಮೈತ್ರೇಯ ನಡುವಿನ ಜುಗಲ್​ಬಂದಿ ಚಿತ್ರದ ಹೈಲೈಟ್​. ರಾಘವೇಂದ್ರ ನಾಯಕ್​ ಕಾಮಿಡಿ ಥ್ರಿಲ್ಲರ್​ ಜಾನರ್​ನ ಕಥೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಕೆಲವೆಡೆ ಫ್ಲ್ಯಾಶ್​ಬ್ಯಾಕ್​, ಕೆಲವೆಡೆ ರಿವರ್ಸ್​ ಸ್ಕ್ರೀನ್​ಪ್ಲೇ ಮೂಲಕ ಚಿತ್ರಕಥೆ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ವೀರ್​ ಸಮರ್ಥ್​ ಹಾಡುಗಳಲ್ಲಿ “ಸಿಹಿ ಜೇನಮಳೆ’ ಅಂದವಾಗಿದೆ. ಕೆ.ಎಸ್​. ಚಂದ್ರಶೇಖರ್​ ಕ್ಯಾಮರಾ ಕೈಚಳಕ, ಕೆ.ಎಂ. ಪ್ರಕಾಶ್​ ಸಂಕಲನ ಚಿತ್ರಕ್ಕೆ ಪೂರಕವಾಗಿವೆ. “ಭಾವನೆಗಿಂತ ಸಂಭಾವನೆ ಮುಖ್ಯ, ಮತ್ತೆ ಎಮೋಷನಲ್​ ಫೂಲ್​ ಆಗಬೇಡ…’, “ಕಾಫಿ ಬಿಜಿನೆಸ್​, ಎಣ್ಣೆ ಬಿಜಿನೆಸ್​ ಕಥೆ’, “ತಮಿಳುನಾಡು, ಬಳ್ಳಾರಿ ಕೈದಿಗಳ’ ಉದಾಹರಣೆ, “ಲಾಲಿಪಾಪ್​ ತೋರಿಸಿ, ಕಿಡ್ನಿ ಕಿತ್ಕೊಂಡೋಗೋ ಕಿಲಾಡಿ ನನ್ಮಗ ನೀನು’, “ಕೆಲವರಿಗೆ ನೋಡಿದ ತಕ್ಷಣ ಹೇಸಿಗೆ ಅಂತ ಗೊತ್ತಾಗುತ್ತೆ, ಇನ್ನೂ ಕೆಲವರಿಗೆ ಟೇಸ್ಟ್​ ಮಾಡಿದ್ಮೇಲೆ ಗೊತ್ತಾಗುತ್ತೆ’… ರಘು ನಿಡುವಳ್ಳಿ ಲೇಖನಿಯಿಂದ ಮೂಡಿಬಂದಿರುವ ಇಂತಹ ಹಲವು ಒನ್​ಲೈನರ್​ಗಳು ಚಿತ್ರವನ್ನು ನೋಡಿಸಿಕೊಂಡು ಹೋಗುತ್ತವೆ. ದಿಗಂತ್​ರನ್ನು ವಿಭಿನ್ನ ಅವತಾರದಲ್ಲಿ ನೋಡಲು ಇಷ್ಟಪಡುವವರು ಮತ್ತು ವಿಭಿನ್ನ ಥ್ರಿಲ್ಲರ್​ ಜಾನರ್​ ಅಭಿಮಾನಿಗಳಿಗೆ “ಮಾರಿಗೋಲ್ಡ್​’ ಉಗಾದಿ ಹಬ್ಬದೂಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts