More

    ಪರಮಾಧಿಕಾರ ಬಳಸೋದಕ್ಕೆ ಅವಕಾಶ ಕೊಡಬೇಡಿ : ದೀದಿ ಸರ್ಕಾರಕ್ಕೆ ಗರ್ವನರ್ ವಾರ್ನಿಂಗ್​

    ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ಆಡಳಿತ, ಕಾನೂನು ಸುವ್ಯವಸ್ಥೆ ನೆಟ್ಟಗಿಲ್ಲ, ಸರಿ ಮಾಡಬೇಕಾದ ಅವಶ್ಯಕತೆ ಇದೆ ಎಂದು ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ರಾಜ್ಯಪಾಲ ಜಗದೀಪ್​ ಧನ್ಕರ್ ಭಾನುವಾರ ದೀದಿ ಸರ್ಕಾರವನ್ನು ಎಚ್ಚರಿಸಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್​. ಅಂಬೇಡ್ಕರ್ ಪುಣ್ಯತಿಥಿಯಂದು ಅವರಿಗೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರ ಜತೆಗೆ ಮಾತನಾಡುವ ವೇಳೆ ಈ ಎಚ್ಚರಿಕೆ ನೀಡಿದರು.

    ಸಾಂವಿಧಾನಿಕ ಮುಖ್ಯಸ್ಥನಾಗಿ ರಾಜ್ಯದ ಆಡಳಿತವನ್ನು ಗಮನಿಸುವಾಗ ಮನಸ್ಸಿಗೆ ಬಹಳ ದುಃಖವಾಗುತ್ತದೆ. ಇಲ್ಲಿ ಆಡಳಿತ ಹಾದಿ ತಪ್ಪಿದ್ದು ಸಂವಿಧಾನ ಚೌಕಟ್ಟಿನೊಳಗಿಲ್ಲ. ರಾಜ್ಯ ಹೊತ್ತಿ ಉರಿಯುತ್ತಿದೆ. ರಾಜಕೀಯ ವೈಷಮ್ಯದ ಕೃತ್ಯಗಳು ಮಿತಿಮೀರುತ್ತಿವೆ. ಇಂಥವನ್ನು ಸಹಿಸಿಕೊಂಡಿರಲಾಗದು. ಆಡಳಿತ ಹಾದಿ ತಪ್ಪಿರುವ ಬಗ್ಗೆ ಸಾಕಷ್ಟು ಸಲ ನೆನಪಿಸಲಾಗಿದೆ. ಆದರೆ ಏನೂ ಪರಿಣಾಮವಾಗಿಲ್ಲ.

    ಇದನ್ನೂ ಓದಿ: ಡಿ.8ಕ್ಕೆ ಮತ್ತೊಮ್ಮೆ ಕರ್ನಾಟಕವೂ ಬಂದ್​! ರೈತ ಸಂಘಟನೆಗಳಿಂದ ಕರೆ

    ಆದಾಗ್ಯೂ, ಸರ್ಕಾರ ಹೇಗೆ ವರ್ತಿಸುತ್ತಿದೆ ಎಂದರೆ ಸಂವಿಧಾನದ ಚೌಕಟ್ಟಿನಲ್ಲೇ ಸರ್ಕಾರ ಕೆಲಸ ಮಾಡುತ್ತಿದೆ ಎಂಬುದನ್ನು ನನ್ನ ಬಾಯಿಯಿಂದಲೇ ಹೇಳಿಸುತ್ತಾರೆ. ನನ್ನ ಪತ್ರಗಳ ಆಂತರ್ಯ, ಆಶಯವನ್ನು ಸರ್ಕಾರ ಅರ್ಥ ಮಾಡಿಕೊಳ್ಳುವುದೆಂಬ ವಿಶ್ವಾಸದಲ್ಲಿದ್ದೇನೆ. ಆದರೆ ಪರಿಸ್ಥಿತಿ ಕೈಮೀರಿ ಹೋದರೆ ನನ್ನ ಪರಮಾಧಿಕಾರ ಬಳಸುವ ಅವಕಾಶ ನನಗಿದ್ದು, ಅದನ್ನು ಬಳಸಲು ಅವಕಾಶಕೊಡಬೇಡಿ ಎಂದು ರಾಜ್ಯಪಾಲ ಧನ್ಕರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. (ಏಜೆನ್ಸೀಸ್)

    FACT CHECK |ಅಂಬಾನಿ, ಅದಾನಿ ಪರವಾಗಿದೆ ಕೃಷಿ ಕಾನೂನು ಅಂತ ಕೇಂದ್ರ ಸಚಿವರು ಹೇಳಿದ್ರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts