More

    ಹೇಮಾ ಮಾಲಿನಿ ಜತೆಗೆ ಜಗಳ ಆಡೋಕೆ ಹೋಗಿದ್ದರಂತೆ ಸನ್ನಿ!

    ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಜತೆಜತೆಗೆ ಹಲವು ಚಿತ್ರಗಳಲ್ಲಿ ಕೆಲಸ ನಟಿಸಿದ್ದು, ನಟಿಸುವಾಗಲೇ ಅವರಿಬ್ಬರ ಮಧ್ಯೆ ಪ್ರೀತಿ ಅಂಕುರಿಸಿದ್ದು, ಅದಾಗಲೇ ಮದುವೆಯಾಗಿದ್ದರೂ ಹೇಮಾ ಅವರನ್ನು ಧರ್ಮೇಂದ್ರ ಮದುವೆಯಾಗಿದ್ದು … ಇವೆಲ್ಲಾ ಹಳೆಯ ವಿಷಯ. ಇದರಿಂದ ಬೇಸರಗೊಂಡಿದ್ದ ಧರ್ಮೇಂದ್ರ ಅವರ ಮೊದಲ ಹೆಂಡತಿ ಮಗ ಸನ್ನಿ ಡಿಯೋಲ್, ಹೇಮಾ ಮಾಲಿನಿ ಜತೆಗೆ ಜಗಳ ಆಡುವುದಕ್ಕೆ ಹೋಗಿದ್ದರಂತೆ.

    ಇಂಥದ್ದೊಂದು ಸುದ್ದಿ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಹಾಗೆ ನೋಡಿದರೆ, ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ ಮದುವೆಯಾಗಿ ಸುಮಾರು 40 ವರ್ಷಗಳಾಗಿವೆ. ಅವರಿಗೆ ಮಕ್ಕಳಗಾಗಿ, ಮೊಮ್ಮಕಳೂ ದೊಡ್ಡವರಾಗುವ ಹೊತ್ತಲ್ಲಿದೆ ಇದೇನಿದು ವಿವಾದ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ವಿವಾದವೇನಿಲ್ಲ. ಸುಮ್ಮನೆ ಈ ವಿಷಯ ಮತ್ತೊಮ್ಮೆ ಸೋಷಿಯಲ್ ಮೀಡಿಯಾಗಳಲ್ಲಿ ಕಾಣಿಸಿಕೊಂಡಿದೆ.

    ಇದನ್ನೂ ಓದಿ: ಭೋಜಪುರಿ ಹಾಡಿನಲ್ಲಿ ಅವಾಚ್ಯ ಪದಗಳಿಂದ ಸಲ್ಮಾನ್‍ಗೆ ನಿಂದನೆ

    ಧರ್ಮೇಂದ್ರ ಅವರು ಹೇಮಾ ಮಾಲಿನಿಯನ್ನು ಮದುವೆಯಾದಾಗ ಸನ್ನಿ ಡಿಯೋಲ್ ಬಹಳ ಬೇಸರಗೊಂಡಿದ್ದರಂತೆ. ಹೇಮಾ ಮಾಲಿನಿಯಿಂದ ತಮ್ಮ ತಾಯಿ ಪ್ರಕಾಶ್ ಕೌರ್ ಅವರಿಗೆ ಅನ್ಯಾಯವಾಯಿತು ಎಂದು ಅವರ ಜತೆಗೆ ಜಗಳ ಮಾಡುವುದಕ್ಕೆ ಹೋಗಿದ್ದರು ಎಂದು ಹೇಳಲಾಗುತ್ತದೆ. ಆ ಸಂದರ್ಭದಲ್ಲಿ ಅವರಿಬ್ಬರ ಮಧ್ಯೆ ಏನೆಲ್ಲಾ ಆಯಿತು ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ, ಅಂಥದ್ದೇನೂ ಆಗಿಯೇ ಇಲ್ಲ ಎಂದು ಸನ್ನಿ ಡಿಯೋಲ್ ಅವರ ತಾಯಿ ಪ್ರಕಾಶ್ ಕೌರ್ ನಂತರದ ವರ್ಷಗಳಲ್ಲಿ ಹೇಳಿಕೊಂಡಿದ್ದಾರೆ.

    ಇನ್ನು ಹೇಮಾ ಮಾಲಿನಿ ಸಹ ಇದನ್ನೇ ಹೇಳಿದ್ದಾರೆ. ತಮ್ಮ ಹಾಗೂ ಸನ್ನಿ ಡಿಯೋಲ್ ನಡುವೆ ಯಾವತ್ತೂ ಜಗಳವಾಗಿಲ್ಲ ಮತ್ತು ಆರಂಭದಿಂದಲೂ ತಾವು ಸೌಹಾರ್ದಯುತವಾಗಿ ಇದ್ದೇವೆ ಎಂದು ಹೇಮಾ ಮಾಲಿನಿ ಹಲವು ಸಂದರ್ಶನಗಳಲಿ ಹೇಳಿಕೊಂಡಿದ್ದಾರೆ. ತಮಗೆ ಯಾವತ್ತೇ ಸಮಸ್ಯೆ ಎದುರಾದರೂ ಮೊದಲು ಸನ್ನಿ ಡಿಯೋಲ್ ಹಾಜರಾಗುತ್ತಾರಂತೆ.

    ಇದನ್ನೂ ಓದಿ: ಕಿರುತೆರೆ ನಟ ಸುಶೀಲ್ ಗೌಡ ಆತ್ಮಹತ್ಯೆ … `ದುನಿಯಾ’ ವಿಜಯ್ ಹೇಳುವುದೇನು?

    ಈ ಕುರಿತು ತಮ್ಮ `ಬಿಯಾಂಡ್ ದಿ ಡ್ರೀಮ್ ಗರ್ಲ್’ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿರುವ ಅವರು, `ನನಗೆ ಯಾವತ್ತೇ ಸಮಸ್ಯೆ ಎದುರಾದರೂ ನೆರವಿಗೆ ಸನ್ನಿ ಇದ್ದೇ ಇರುತ್ತಾರೆ. ನನಗೊಮ್ಮೆ ಆ್ಯಕ್ಸಿಡೆಂಟ್ ಆದಾಗ, ನನ್ನನ್ನು ಮೊದಲು ನೋಡುವುದಕ್ಕೆ ಬಂದಿದ್ದೇ ಸನ್ನಿ. ನಮ್ಮಿಬ್ಬರ ನಡುವೆ ಸಂಬಂಧ ಹೇಗಿದೆ ಎಂದು ಹೇಳುವುದಕ್ಕೆ ಈ ಘಟನೆ ಸಾಕ್ಷಿ’ ಎಂದು ಹೇಮಾ ಮಾಲಿನಿ ಹೇಳಿಕೊಂಡಿದ್ದಾರೆ.

    ಈ ಮೂಲಕ ತಮ್ಮ ಮತ್ತು ಸನ್ನಿ ನಡುವೆ ಜಗಳ ಆಗಿದೆ ಎಂಬ ವಿಷಯಕ್ಕೆ ಫುಲ್‍ಸ್ಟಾಪ್ ಹಾಕಿದ್ದಾರೆ.

    ‘ನೀನ್ಯಾಕೆ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲ!’; ಬಿಗ್​ಬಾಸ್​ನ ಬೋಲ್ಡ್ ಸ್ಪರ್ಧಿಗೆ ನೆಟ್ಟಿಗರ ಪ್ರಶ್ನೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts