More

    ಗಡಿ ನಿಯಂತ್ರಣಾ ರೇಖೆಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿರುವ ಹೊತ್ತಲ್ಲಿ ಪಾಕಿಸ್ತಾನ ಪತ್ರಕರ್ತನ ಎಡವಟ್ಟು…

    ನವದೆಹಲಿ: ಜಗತ್ತಿನಾದ್ಯಂತ ಕರೊನಾ ವೈರಸ್​ ಸಂಕಷ್ಟ ಎದುರಾಗಿದ್ದಾರೆ ಭಾರತ ಮತ್ತು ಪಾಕಿಸ್ತಾನ ಗಡಿನಿಯಂತ್ರಣಾ ರೇಖೆ ಬಳಿ ಸಂಘರ್ಷ ಶುರುವಾಗಿದೆ.

    ಪಾಕಿಸ್ತಾನ ಪದೇಪದೆ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದುದರಿಂದ ಇತ್ತೀಚೆಗಷ್ಟೇ ಭಾರತೀಯ ಯೋಧರು ದಾಳಿ ನಡೆಸಿದ್ದರು. ಇದರಲ್ಲಿ ಪಾಕ್​​ನ 15 ಯೋಧರು, 8ಉಗ್ರರು ಹತರಾಗಿದ್ದಾರೆ ಎಂದು ಹೇಳಲಾಗಿತ್ತು.

    ಗಡಿ ನಿಯಂತ್ರಣಾ ರೇಖೆ ಬಳಿ ಭಾರತ ಮತ್ತು ಪಾಕ್​ ನಡುವೆ ಸಂಘರ್ಷ ನಡೆಯುತ್ತಿರುವ ಬೆನ್ನಲ್ಲೇ ಪಾಕಿಸ್ತಾನದ ಪ್ರಮುಖ ಮಾಧ್ಯಮವೊಂದರ ಪತ್ರಕರ್ತ ಮೊಯೀದ್​ ಫಿರ್ಜಾನ್​ ಎಂಬುವರು ಹಡಗುಗಳ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಅಲ್ಲದೆ, ಅರೆಬಿಯನ್​ ಸಮುದ್ರದಲ್ಲಿ ಪಾಕಿಸ್ತಾನ ನೌಕಾ ಸಿಬ್ಬಂದಿ ಭಾರತದ ನೌಕಾ ಹಡಗನ್ನು ತಡೆದು, ಹಿಮ್ಮೆಟ್ಟಿಸಿದರು ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದರು.

    ಆದರೆ ಇದೊಂದು ಹಳೇ ವಿಡಿಯೋ, ಈಗ ಗಡಿ ನಿಯಂತ್ರಣಾ ರೇಖೆ ಬಳಿ ನಡೆಯುತ್ತಿರುವ ದಾಳಿ, ಪ್ರತಿದಾಳಿಗೂ, ಈ ವಿಡಿಯೋಕ್ಕೆ ಸಂಬಂಧವೇ ಇಲ್ಲ ಎಂಬುದು ಗೊತ್ತಾಗಿದೆ.

    ಸಮುದ್ರದಲ್ಲಿ ಎರಡು ಹಡಗುಗಳು ತೀರ ಹತ್ತಿರದಲ್ಲಿ ಹೋಗುವುದನ್ನು, ಅದರಲ್ಲಿ ಒಂದು ನೌಕೆ ಮತ್ತೊಂದಕ್ಕೆ ಡಿಕ್ಕಿ ಮಾಡಲು ಪ್ರಯತ್ನಿಸುವುದನ್ನು, ಎರಡೂ ಹಡಗಿನಲ್ಲಿ ಇರುವವರು ಕೂಗುವುದನ್ನು, ನಂತರ ಇನ್ನೊಂದು ಹಡಗು ಮುಂದೆ ಸಾಗುವುದನ್ನು ವಿಡಿಯೋದಲ್ಲಿ ನೋಡಬಹುದು.

    ಇದು 2011ರಲ್ಲಿ ನಡೆದ ಘಟನೆಗೆ ಸಂಬಂಧಪಟ್ಟ ವಿಡಿಯೋ ಎಂಬುದು ಮಾಧ್ಯಮವೊಂದರ ಫ್ಯಾಕ್ಟ್​ಚೆಕ್​ನಲ್ಲಿ ಬಯಲಾಗಿದೆ. ಭಾರತೀಯ ನೌಕಾಪಡೆಯ ಗೈಡೆಡ್​ ಕ್ಷಿಪಣಿ ಯುದ್ಧನೌಕೆ ಐಎನ್​ಎಸ್​ ಗೋದಾವರಿ ಎಂಬ ಹಡಗಿನಿಂದ ಚಿತ್ರೀಕರಿಸಲಾದ ವಿಡಿಯೋ.
    ಅದರಲ್ಲಿ ಪಾಕಿಸ್ತಾನ ನೌಕಾ ಹಡಗು ಬಾಬರ್​ (D-182) ಈ ಗೋದಾವರಿ ಕ್ಷಿಪಣಿ ಯುದ್ಧನೌಕೆಯಲ್ಲಿರುವ ಹೆಲಿಕಾಪ್ಟರ್​ ನೆಟ್​ಗೆ ಹಾನಿ ಮಾಡಲು ಪ್ರಯತ್ನಿಸುವುದನ್ನು ನೋಡಬಹುದು. ಪಾಕ್​ನ ಬಾಬರ್​ ಹಡಗು 2015ರಲ್ಲಿ ರದ್ದುಗೊಂಡಿದೆ. ಈಗ ಪಾಕಿಸ್ತಾನ ಪತ್ರಕರ್ತ ಅದನ್ನೇ ಶೇರ್​ ಮಾಡಿಕೊಂಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts