More

  ವಜ್ರ, ಚಿನ್ನಾಭರಣ ಕಂಪನಿಯ ಐಪಿಒ: ರೂ. 55ರ ಗ್ರೇ ಮಾರುಕಟ್ಟೆಯಲ್ಲಿ ರೂ. 115 ; ಹೂಡಿಕೆದಾರರಿಗೆ ಬಂಪರ್​ ಲಾಭದ ನಿರೀಕ್ಷೆ

  ಮುಂಬೈ: ಕೌರಾ ಫೈನ್ ಡೈಮಂಡ್‌ನ ಐಪಿಒದಲ್ಲಿ ಷೇರುಗಳನ್ನು ಖರೀದಿಸಲು ಹೂಡಿಕೆದಾರರು ಮುಗಿಬಿದ್ದಿದ್ದಾರೆ. ಕೌರಾ ಫೈನ್ ಡೈಮಂಡ್‌ನ ಐಪಿಒದಲ್ಲಿ ಹಂಚಿಕೆಯಾಗಲಿರುವ ಷೇರುಗಳಿಗಿಂತ 733 ಪಟ್ಟು ಹೆಚ್ಚು ಚಂದಾದಾರಿಕೆಯಾಗಿದೆ. ಗ್ರೇ ಮಾರುಕಟ್ಟೆಯಲ್ಲೂ ಕಂಪನಿಯ ಷೇರುಗಳು ಹೆಚ್ಚಿನ ಬೆಲೆಗೆ ವಹಿವಾಟು ನಡೆಸುತ್ತಿವೆ. ಗ್ರೇ ಮಾರುಕಟ್ಟೆಯಲ್ಲಿ ಶೇಕಡಾ 100 ಕ್ಕಿಂತ ಹೆಚ್ಚು ಪ್ರೀಮಿಯಂನೊಂದಿಗೆ ವಹಿವಾಟು ನಡೆಸುತ್ತಿವೆ. ಹೀಗಾಗಿ, ಹೂಡಿಕೆದಾರರ ಹಣವು ಮೊದಲ ದಿನವೇ ದ್ವಿಗುಣಗೊಳ್ಳಬಹುದು ಎಂಬ ನಿರೀಕ್ಷೆ ಮೂಡಿದೆ.

  ಐಪಿಒದಲ್ಲಿ ಕೌರಾ ಫೈನ್ ಡೈಮಂಡ್ ಷೇರುಗಳ ಬೆಲೆ 55 ರೂಪಾಯಿ ಇದೆ. ಕೌರಾ ಫೈನ್ ಡೈಮಂಡ್ ಷೇರುಗಳು ಗ್ರೇ ಮಾರ್ಕೆಟ್‌ನಲ್ಲಿ ರೂ 60 ಪ್ರೀಮಿಯಂನಲ್ಲಿ ವಹಿವಾಟು ನಡೆಸುತ್ತಿವೆ. ಪ್ರಸ್ತುತ ಗ್ರೇಮಾರ್ಕೆಟ್ ಪ್ರೀಮಿಯಂ (GMP) ಪ್ರಕಾರ, ಕಂಪನಿಯ ಷೇರುಗಳ ಬೆಲೆಯು ಪಟ್ಟಿಯಾದ ತಕ್ಷಣವೇ ಅಂದಾಜು 115 ರೂ. ಆಗಬಹುದಾಗಿದೆ. ಐಪಿಒದಲ್ಲಿ ಷೇರು ಹಂಚಿಕೆಯಾದ ಹೂಡಿಕೆದಾರರಿಗೆ ಪಟ್ಟಿಯ ಮೊದಲ ದಿನದಂದೇ ಅಂದಾಜು 110 ಪ್ರತಿಶತದಷ್ಟು ಲಾಭವಾಗಬಹುದು ಎಂದು ನಿರೀಕ್ಷಿಸಬಹುದು. ಗುರುವಾರ, ಮಾರ್ಚ್ 14, 2024 ರಂದು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾಗುವುದು. ಕಂಪನಿಯ ಸಾರ್ವಜನಿಕ ವಿತರಣೆಯ ಷೇರುಗಳ ಒಟ್ಟು ಗಾತ್ರ 5.50 ಕೋಟಿ ರೂ. ಇದೆ.

  ಕೌರಾ ಫೈನ್ ಡೈಮಂಡ್‌ನ ಐಪಿಒ ಒಟ್ಟು 733.01 ಪಟ್ಟು ಚಂದಾದಾರಿಕೆಯಾಗಿದೆ. ಚಿಲ್ಲರೆ ಹೂಡಿಕೆದಾರರ ಕೋಟಾ 1083.98 ಬಾರಿ ಚಂದಾದಾರಿಕೆಯಾಗಿದೆ. ಇತರ ವಿಭಾಗದಲ್ಲಿ 373.66 ಪಟ್ಟು ಚಂದಾದಾರಿಕೆಯಾಗಿದೆ.

  ಈ ಕಂಪನಿಯನ್ನು ಮಾರ್ಚ್ 2022 ರಲ್ಲಿ ಪ್ರಾರಂಭಿಸಲಾಗಿದೆ. ಕೌರಾ ಫೈನ್ ಡೈಮಂಡ್ ಜ್ಯುವೆಲ್ಲರಿ ಕಂಪನಿಯು ಚಿನ್ನ ಮತ್ತು ವಜ್ರದ ಆಭರಣಗಳ ವ್ಯಾಪಾರ ಮಾಡುತ್ತದೆ. ಕಂಪನಿಯು 22 ಕ್ಯಾರೆಟ್ ಚಿನ್ನ ಮತ್ತು 18 ಕ್ಯಾರೆಟ್ ವಜ್ರದ ಆಭರಣಗಳನ್ನು ನೀಡುತ್ತದೆ.

  20 ಕ್ಷೇತ್ರಗಳ ಪೈಕಿ 8 ಹಾಲಿ ಸಂಸದರಿಗೆ ಟಿಕೆಟ್​ ಮಿಸ್​ ಆಗಿದ್ದೇಕೆ? ಯಾರ ಬದಲಿಗೆ ಯಾರು ಕಣಕ್ಕೆ?

  5 ರೈಲ್ವೆ ಕಂಪನಿಗಳ ಷೇರುಗಳ ಬೆಲೆ ಒಂದೇ ದಿನದಲ್ಲಿ ಅಪಾರ ಕುಸಿತ: ಹೂಡಿಕೆದಾರರನ್ನು ನಿರಂತರವಾಗಿ ಶ್ರೀಮಂತಗೊಳಿಸಿದ ಸ್ಟಾಕ್​ಗಳಲ್ಲಿ​ ಏಕಾಏಕಿ ನಷ್ಟ

  6 ತಿಂಗಳಲ್ಲಿಯೇ 1 ಲಕ್ಷವಾಯ್ತು 14.85 ಲಕ್ಷ ರೂಪಾಯಿ: ಒಂದಕ್ಕೆ 6 ಬೋನಸ್​ ಷೇರು ನೀಡುತ್ತಿದೆ ಕಂಪನಿ; ಹೂಡಿಕೆದಾರರಿಗೆ ಹಣದ ಸುರಿಮಳೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts