More

    5 ರೈಲ್ವೆ ಕಂಪನಿಗಳ ಷೇರುಗಳ ಬೆಲೆ ಒಂದೇ ದಿನದಲ್ಲಿ ಅಪಾರ ಕುಸಿತ: ಹೂಡಿಕೆದಾರರನ್ನು ನಿರಂತರವಾಗಿ ಶ್ರೀಮಂತಗೊಳಿಸಿದ ಸ್ಟಾಕ್​ಗಳಲ್ಲಿ​ ಏಕಾಏಕಿ ನಷ್ಟ

    ಮುಂಬೈ: ಕಳೆದ ಕೆಲವು ದಿನಗಳಿಂದ ಷೇರುಪೇಟೆಯಲ್ಲಿ ಸತತ ಏರಿಳಿತಗಳು ಕಂಡುಬಂದಿವೆ. ಆದರೆ ಬುಧವಾರ ಪರಿಸ್ಥಿತಿ ಹದಗೆಟ್ಟಿತು. ಒಂದು ಸಮಯದಲ್ಲಿ ಬಿಎಸ್​ಇ ಮತ್ತು ನಿಫ್ಟಿ-50 ಸೂಚ್ಯಂಕಗಳಲ್ಲಿ ಶೇಕಡಾ 2 ಕ್ಕಿಂತ ಹೆಚ್ಚು ಕುಸಿತ ಕಂಡುಬಂದಿತು. ಷೇರುಪೇಟೆಯಲ್ಲಿನ ಗದ್ದಲದಿಂದಾಗಿ ಬುಧವಾರ ರೈಲ್ವೆ ಸ್ಟಾಕ್‌ನ ಸ್ಥಿತಿಯೂ ಹದಗೆಟ್ಟಿದೆ. ರೈಲ್ವೆ ವಲಯದ 5 ಕಂಪನಿಗಳ ಷೇರುಗಳಲ್ಲಿ ಬುಧವಾರ ಶೇ. 20 ರಷ್ಟು ಕುಸಿತ ಕಂಡುಬಂದಿದೆ.

    ರೈಲ್ವೇ ಷೇರುಗಳ ಕುಸಿತದಿಂದ ಚಿಲ್ಲರೆ ಹೂಡಿಕೆದಾರರು ಈಗ ಭಾರಿ ನಷ್ಟ ಅನುಭವಿಸುವಂತಾಗಿದೆ. ಕಳೆದ ಒಂದು ವರ್ಷದಲ್ಲಿ, ರೈಲ್ವೇಯ ಈ ಷೇರುಗಳು ನಿರಂತರವಾಗಿ ಹೂಡಿಕೆದಾರರನ್ನು ಶ್ರೀಮಂತರನ್ನಾಗಿ ಮಾಡಿವೆ.

    ರೈಲ್ ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಷೇರುಗಳಲ್ಲಿ ಭಾರಿ ಕುಸಿತ ಕಂಡುಬಂದಿದೆ. ಕಂಪನಿಯ ಷೇರುಗಳಲ್ಲಿ ಶೇ. 20ರಷ್ಟು ಕುಸಿತವಾಗಿದೆ. ಕಂಪನಿಯ ಷೇರುಗಳ ಬೆಲೆ 308.25 ರೂಪಾಯಿ ಇಳಿಕೆಯಾಗಿದೆ. ಇದರ ಹೊರತಾಗಿಯೂ, ಕಂಪನಿಯ ಷೇರುಗಳ ಬೆಲೆ ಕಳೆದ ಒಂದು ವರ್ಷದಲ್ಲಿ 183 ಪ್ರತಿಶತದಷ್ಟು ಹೆಚ್ಚಾಗಿದೆ.

    ಇರ್ಕಾನ್ ಇಂಟರ್ನ್ಯಾಷನಲ್ ಷೇರುಗಳ ಬೆಲೆ 10.77 ರಷ್ಟು ಕುಸಿತ ಕಂಡಿದೆ. ಕಂಪನಿಯ ಷೇರುಗಳ ಬೆಲೆ 185.20 ರೂ.ಗೆ ತಲುಪಿದೆ. ಕಳೆದ ಒಂದು ವಾರದಲ್ಲಿ ಕಂಪನಿಯ ಷೇರುಗಳ ಬೆಲೆ ಶೇ. 18ರಷ್ಟು ಕುಸಿದಿದೆ.

    ಐಆರ್‌ಎಫ್‌ಸಿ ಷೇರುಗಳ ಬೆಲೆ ಶೇ.9.14 (ರೂ. 124.25), ರೈಲ್ ವಿಕಾಸ್ ನಿಗಮ್ ಮತ್ತು ಐಆರ್‌ಸಿಟಿಸಿ ಷೇರುಗಳ ಬೆಲೆ ಕ್ರಮವಾಗಿ ಶೇ. 9 ಮತ್ತು ಶೇ. 4ರಷ್ಟು ಕುಸಿದಿವೆ.

    ನಿಫ್ಟಿ ಸ್ಮಾಲ್ ಕ್ಯಾಪ್ 100 ಸೂಚ್ಯಂಕಗಳಲ್ಲಿನ 100 ಕಂಪನಿಗಳ ಪೈಕಿ ಬುಧವಾರ 98 ಕಂಪನಿಗಳ ಷೇರುಗಳು ಕುಸಿತ ಕಂಡಿವೆ. ಈ ಸೂಚ್ಯಂಕದಲ್ಲಿ ಶೇ. 5.28ರಷ್ಟು ಕುಸಿತ ಕಂಡಿದೆ.

    6 ತಿಂಗಳಲ್ಲಿಯೇ 1 ಲಕ್ಷವಾಯ್ತು 14.85 ಲಕ್ಷ ರೂಪಾಯಿ: ಒಂದಕ್ಕೆ 6 ಬೋನಸ್​ ಷೇರು ನೀಡುತ್ತಿದೆ ಕಂಪನಿ; ಹೂಡಿಕೆದಾರರಿಗೆ ಹಣದ ಸುರಿಮಳೆ

    ಜನ ಗೇಲಿ ಮಾಡಿದರೂ ಮದುವೆಯಾದ ನಂತರ 800 ರೂಪಾಯಿ ಸಂಬಳಕ್ಕೆ ಮುಕೇಶ ಅಂಬಾನಿ ಪತ್ನಿ ನೀತಾ ದುಡಿಯುತ್ತಿದ್ದುದೇಕೆ?

    1 ಲಕ್ಷವಾಯ್ತು 1.02 ಕೋಟಿ ರೂಪಾಯಿ: 4 ವರ್ಷಗಳಲ್ಲಿ 10000% ಲಾಭ ನೀಡಿದ ಸ್ಟಾಕ್​ ಯಾವುದು ಗೊತ್ತೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts