More

    1 ಲಕ್ಷವಾಯ್ತು 1.02 ಕೋಟಿ ರೂಪಾಯಿ: 4 ವರ್ಷಗಳಲ್ಲಿ 10000% ಲಾಭ ನೀಡಿದ ಸ್ಟಾಕ್​ ಯಾವುದು ಗೊತ್ತೆ?

    ಮುಂಬೈ: ಮಲ್ಟಿಬ್ಯಾಗರ್ ಸ್ಟಾಕ್ ಎಕ್ಸ್‌ಪ್ರೊ ಇಂಡಿಯಾ (Xpro India) ತನ್ನ ಹೂಡಿಕೆದಾರರಿಗೆ ನಿರಂತರವಾಗಿ ಅತ್ಯುತ್ತಮ ಆದಾಯವನ್ನು ನೀಡುತ್ತಿರುವ ಸ್ಟಾಕ್ ಆಗಿದೆ. ಕಳೆದ ಮೂರು ವರ್ಷಗಳಲ್ಲಿ ಈ ಕಂಪನಿಯ ಷೇರುಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಈ ಅವಧಿಯಲ್ಲಿ ಷೇರು ಬೆಲೆ 48.70ರಿಂದ 1,077ಕ್ಕೆ ಏರಿಕೆಯಾಗಿದೆ. ಅಂದರೆ 2111% ಹೆಚ್ಚಳವಾಗಿದೆ.

    ಇನ್ನೂ ಅಚ್ಚರಿದಾಯಕ ಸಂಗತಿಯೆಂದರೆ, ಕಳೆದ ನಾಲ್ಕು ವರ್ಷಗಳಲ್ಲಿ ಸ್ಟಾಕ್ 10000% ನಷ್ಟು ಹೆಚ್ಚಾಗಿದೆ. ನಾಲ್ಕು ವರ್ಷಗಳ ಹಿಂದೆ ಈ ಷೇರಿನ ಬೆಲೆ 10.5 ರೂಪಾಯಿ ಆಗಿತ್ತು. ಹೂಡಿಕೆದಾರರು ನಾಲ್ಕು ವರ್ಷಗಳ ಹಿಂದೆ ಎಕ್ಸ್‌ಪ್ರೊ ಇಂಡಿಯಾ ಸ್ಟಾಕ್‌ನಲ್ಲಿ ರೂ 1 ಲಕ್ಷ ಹೂಡಿಕೆ ಮಾಡಿ ಇಲ್ಲಿಯವರೆಗೆ ಕಾಯ್ದುಕೊಂಡಿದ್ದರೆ, ಅವರ ಷೇರುಗಳ ಮೊತ್ತವು 1.02 ಕೋಟಿ ರೂ. ಆಗುತ್ತದೆ. ಕಳೆದ ಫೆಬ್ರವರಿ 27 ರಂದು ಈ ಷೇರಿನ ಬೆಲೆ 1,297 ರ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತ್ತು.

    ಈ ಕಂಪನಿ ವಿಶೇಷವಾಗಿ ಭಾರತದಲ್ಲಿ ಪಾಲಿಮರ್ ಸಂಸ್ಕರಣೆ ಉದ್ಯಮದಲ್ಲಿ ಕೆಲಸ ಮಾಡುತ್ತದೆ. ಇದು ಮೂರು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತದೆ – Biax, Coex, ಮತ್ತು Thermoset.

    ಭಾರತೀಯ ಷೇರು ಮಾರುಕಟ್ಟೆಯ ‘ಬಿಗ್ ವೇಲ್’ ಎಂದೇ ಹೆಸರಾದ ಆಶಿಶ್ ಕಚೋಲಿಯಾ ಅವರು ಫೆಬ್ರವರಿ 2024 ರವರೆಗೆ ಕಂಪನಿಯಲ್ಲಿ ಪಾಲನ್ನು ಹೊಂದಿದ್ದಾರೆ ಎಂದು ಟ್ರೆಂಡ್‌ಲೈನ್ ಡೇಟಾ ತೋರಿಸುತ್ತದೆ. ಈ ಪಾಲು 3.67% ಆಗಿತ್ತು. ಕಂಪನಿಯು ಡಿಸೆಂಬರ್ 2023ಕ್ಕೆ ಕೊನೆಗೊಳ್ಳುವ ತ್ರೈಮಾಸಿಕದಲ್ಲಿ (Q3FY24) ತನ್ನ ಕಾರ್ಯಕ್ಷಮತೆಯಲ್ಲಿ ಆರೋಗ್ಯಕರ ಸುಧಾರಣೆಯನ್ನು ತೋರಿಸಿದೆ. Q3FY23ಯಲ್ಲಿ ರೂ. 93.1 ಕೋಟಿಗೆ ಹೋಲಿಸಿದರೆ ಆದಾಯವು 96.1 ಕೋಟಿ ರೂ.ಗೆ ತಲುಪಿ, 3.22% ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ. ಇದರ ನಿವ್ವಳ ಲಾಭವು Q3 FY24 ರಲ್ಲಿ ರೂ. 10.07 ಕೋಟಿಗೆ ಏರಿಕೆಯಾಗಿದೆ. Q3 FY23 ರಲ್ಲಿನ ರೂ. 6.5 ಕೋಟಿಗೆ ಹೋಲಿಸಿದರೆ 55% ರಷ್ಟು ಹೆಚ್ಚಳವಾಗಿದೆ.

    ರೂ 2486 ರಿಂದ 196ಕ್ಕೆ ಕುಸಿದ ಷೇರು: ಈಗ ಅನಿಲ್ ಅಂಬಾನಿಗೆ ದೊರೆಯಲಿದೆ 4000 ಕೋಟಿ ರೂಪಾಯಿ

    1300 ರಿಂದ 42 ರೂಪಾಯಿ ಕುಸಿದ ಷೇರಿಗೆ ಈಗ ಬೇಡಿಕೆ: 2 ದಿನಗಳಿಂದ ಅಪ್ಪರ್​ ಸರ್ಕ್ಯೂಟ್​ ಹಿಟ್​ ಆಗುತ್ತಿರುವುದೇಕೆ?

    284 ರಿಂದ 2 ರೂಪಾಯಿಗೆ ಕುಸಿದ ಷೇರು: ಮಂಗಳವಾರ 20% ಏರಿಕೆ ಕಂಡು ಅಪ್ಪರ್​ ಸರ್ಕ್ಯೂಟ್​ ಹಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts