More

    ವಿಶ್ವದ ಬೃಹತ್ ಕಟ್ಟಡ ಉದ್ಘಾಟಿಸಲಿರೋ ಪ್ರಧಾನಿ ಮೋದಿ: ವಜ್ರಗಳ ವ್ಯಾಪಾರಕ್ಕೆ ಮೀಸಲು..ಇದು ಇರುವುದಾದರೂ ಎಲ್ಲಿ?

    ಸೂರತ್‌ (ಗುಜರಾತ್​): ಭಾರತ ಮತ್ತೊಮ್ಮೆ ವಿಶ್ವದ ವಜ್ರದ ರಾಜಧಾನಿಯಾಗುವ ಕಾಲ ಸನ್ನಿಹಿತವಾಗಿದೆ. ಪ್ರಧಾನಿ ಮೋದಿ ಅವರು ಭಾನುವಾರ ಸೂರತ್‌ನಲ್ಲಿ ವಿಶ್ವದ ಅತಿದೊಡ್ಡ ಕಚೇರಿ ಕಟ್ಟಡ ಸಂಕೀರ್ಣವನ್ನು ಉದ್ಘಾಟಿಸಲಿದ್ದು, ಅಲ್ಲಿ ಒರಟು ಮತ್ತು ಪಾಲಿಶ್ ಮಾಡಿದ ವಜ್ರ ವ್ಯಾಪಾರ ಮಾಡಲಾಗುತ್ತದೆ. ಇದು ಜಾಗತಿಕ ಕೇಂದ್ರವಾಗಿ ಹೊರಹೊಮ್ಮಲಿದೆ.

    ಇದನ್ನೂ ಓದಿ: ‘ಭಾರತ 2026ಕ್ಕೆ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ’: ಪನಗಾರಿಯಾ

    35.54 ಎಕರೆ ಪ್ರದೇಶದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಈ ಕಟ್ಟಡಕ್ಕೆ 3400 ಕೋಟಿ ವೆಚ್ಚವಾಗಿದ್ದು, ವಿಶ್ವದ ಅತಿದೊಡ್ಡ ಕಾರ್ಪೊರೇಟ್ ಕಚೇರಿ ಕೇಂದ್ರ ಇದಾಗಿದೆ.

    ಡೈಮಂಡ್ ಬೋರ್ಸ್(ಹಬ್) ವಿಶ್ವದ ಅತಿದೊಡ್ಡ ಅಂತರ್​ಸಂಪರ್ಕಿತ ಕಟ್ಟಡವಾಗಿದೆ, ಇದರಲ್ಲಿ 4,500 ಅಂತರ್ಸಂಪರ್ಕಿತ ಕಚೇರಿಗಳು ಇರಲಿವೆ. ಕಚೇರಿ ಕಟ್ಟಡವು ಪೆಂಟಗನ್‌ಗಿಂತಲೂ ದೊಡ್ಡದಾಗಿದೆ ಮತ್ತು ಇದು ದೇಶದ ಅತಿದೊಡ್ಡ ಕಸ್ಟಮ್ಸ್ ಕ್ಲಿಯರೆನ್ಸ್ ಹೌಸ್ ಸಹ ಆಗಿರುತ್ತದೆ.
    ಕಟ್ಟಡ ಲೋಕಾರ್ಪಣೆ ಬಳಿಕ ದೇಶ ವಿದೇಶಗಳಿಂದ ಪಾಲಿಶ್ ಮಾಡಿದ ವಜ್ರಗಳನ್ನು ಖರೀದಿಸಲು ಸೂರತ್‌ಗೆ ಬರುತ್ತಾರೆ. ಸುಮಾರು 1.5 ಲಕ್ಷ ಜನರು ವ್ಯಾಪಾರ ಮತ್ತಿತರ ಕೆಲಸಗಳಿಂದ ಉದ್ಯೋಗ ಪಡೆಯುತ್ತಾರೆ, ಏಕೆಂದರೆ ಪ್ರಪಂಚದ ಎಲ್ಲಾ ಮೂಲೆಗಳಿಂದ ವಜ್ರ ಖರೀದಿದಾರರು ಸೂರತ್‌ಗೆ ಬರುವ ಮೂಲಕ ಜಾಗತಿಕ ವೇದಿಕೆಯನ್ನು ಪಡೆಯುತ್ತಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ‘X’ ಮಾಧ್ಯಮ ವರದಿಗೆ ಪ್ರತಿಕ್ರಿಯಿಸಿದ್ದು, ಸೂರತ್ ಡೈಮಂಡ್ ಬರ್ಸ್ ಈಗ ಪೆಂಟಗನ್ ಅನ್ನು ಹಿಂದಿಕ್ಕಿದೆ, ಪೆಂಟಗನ್​ ಕಳೆದ 80 ವರ್ಷಗಳಿಂದ ಇಲ್ಲಿಯವರೆಗೆ ವಿಶ್ವದ ಅತಿದೊಡ್ಡ ಕಚೇರಿ ಕಟ್ಟಡವನ್ನು ಹೊಂದಿತ್ತು. ಸೂರತ್ ಡೈಮಂಡ್ ಬೋರ್ಸ್ ವಜ್ರ ಉದ್ಯಮದ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದು ಭಾರತದ ಉದ್ಯಮಶೀಲತಾ ಮನೋಭಾವಕ್ಕೆ ಸಾಕ್ಷಿಯಾಗುತ್ತದೆ. ವ್ಯಾಪಾರ, ನಾವೀನ್ಯತೆ ಮತ್ತು ಸಹಯೋಗದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ, ನಮ್ಮ ಆರ್ಥಿಕತೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.

    ಮುಂಬೈ ಇಲ್ಲಿ ತನಕ ಭಾರತದಲ್ಲಿ ವಜ್ರಗಳ ರಫ್ತಿನ ಕೇಂದ್ರವಾಗಿತ್ತು. “ಡೈಮಂಡ್ ಸಿಟಿ” ಎಂದು ಕರೆಯಲ್ಪಡುವ ಸೂರತ್ ಅಮೂಲ್ಯ ರತ್ನಗಳ ಸಂಸ್ಕರಣೆಯಲ್ಲಿ ಪ್ರಾಬಲ್ಯ ಹೊಂದಿತ್ತು. ಪ್ರಪಂಚದ ಶೇ.90 ರಷ್ಟು ಒರಟು ವಜ್ರಗಳನ್ನು ಅಲ್ಲಿಯೇ ಕತ್ತರಿಸಿ ಹೊಳಪು ಮಾಡಲಾಗುತ್ತದೆ. ಅಮೆರಿಕಾ ಮತ್ತು ಚೀನಾದಂತಹ ಸ್ಥಳಗಳಲ್ಲಿ ಖರೀದಿದಾರರಿಗೆ ಮಾರಲಾಗುತ್ತದೆ. ಹೊಸ ಬೋರ್ಸ್ ಉದ್ಯಮವನ್ನು ಒಂದೇ ಸೂರಿನಡಿ ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ.

    ‘ಅವರಲ್ಲಿ ಆಸಕ್ತಿ ಏನು?’: ಹೀಗೆಂದಿದ್ದೇಕೆ ಸ್ಮೃತಿ ಇರಾನಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts