More

    ಅಣ್ಣನ ಜನ್ಮದಿನವೇ ಧ್ರುವ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ; ಆ ನಿರ್ದೇಶಕರಿಂದಲೇ ಆ್ಯಕ್ಷನ್​ ಕಟ್​

    ಬೆಂಗಳೂರು: ಸ್ಯಾಂಡಲ್​ವುಡ್​ ನಟ ದಿ. ಚಿರಂಜೀವಿ ಸರ್ಜಾ ಜನ್ಮದಿನವಿಂದು. ಈ ದಿನದಂದೇ ಸಹೋದರ ಧ್ರುವ ಸರ್ಜಾ ಅವರ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿದೆ.

    ಇದನ್ನೂ ಓದಿ: ಮಹೇಶ್​ ಬಾಬು ಚಿತ್ರಕ್ಕೆ ನಾಯಕಿ ಫಿಕ್ಸ್; ಕೀರ್ತಿ ಸುರೇಶ್​ಗೆ ಜನ್ಮದಿನವೇ ಸಿಕ್ತು ಸರ್ಪ್ರೈಸ್​

    ವಿಶೇಷ ಏನೆಂದರೆ, ಈಗಾಗಲೇ ಪೊಗರು ಸಿನಿಮಾಕ್ಕೆ ನಿರ್ದೇಶನ ಮಾಡಿದ್ದ ನಿರ್ದೇಶಕ ನಂದಕಿಶೋರ್​ ಈ ಚಿತ್ರಕ್ಕೂ ಆ್ಯಕ್ಷನ್​ ಕಟ್​ ಹೇಳಲಿದ್ದು, ಅದಕ್ಕಿಂತ ಮೊದಲು ಇದೀಗ ಸ್ಕ್ರಿಪ್ಟ್ ಪೂಜೆ ಮಾಡಿಕೊಂಡಿದೆ ಚಿತ್ರತಂಡ.

    ಅಣ್ಣನ ಜನ್ಮದಿನವೇ ಧ್ರುವ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ; ಆ ನಿರ್ದೇಶಕರಿಂದಲೇ ಆ್ಯಕ್ಷನ್​ ಕಟ್​

    ನಿರ್ಮಾಪಕ ಉದಯ್​ ಮೆಹ್ತಾ ಈ ಸಿನಿಮಾ ನಿರ್ಮಾಣ ಮಾಡಲಿದ್ದು, ಇನ್ನು ಕೆಲ ದಿನಗಳಲ್ಲಿ ಸಿನಿಮಾ ಸಂಬಂಧಿ ಕೆಲಸ ಚುರುಕು ಪಡೆದುಕೊಳ್ಳಲಿದೆ.

    ಇದನ್ನೂ ಓದಿ: ಅಪ್ಪನಾಗೋ ಸಂಭ್ರಮದ ಘಳಿಗೆಯನ್ನ ಮೊದಲೇ ಅನುಭವಿಸಿದ್ದ ಚಿರು..!

    ಇತ್ತ ಪೊಗರು ಸಿನಿಮಾದ ಬಹುತೇಕ ಎಲ್ಲ ಕೆಲಸಗಳು ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್​ ಕೆಲಸಗಳೂ ಕೊನೇ ಹಂತದಲ್ಲಿವೆ. ಎಲ್ಲ ಅಂದುಕೊಂಡಂತೆ ಆದರೆ, ಈ ವರ್ಷಾಂತ್ಯಕ್ಕೆ ಪೊಗರು ಬಿಡುಗಡೆ ಆಗುವ ಸಾಧ್ಯತೆಗಳಿವೆ.

    ‘ನೀ ಹುಟ್ಟಿದಾಗ ಕುಣಿದಾಡಿದ್ದೆ ಮಗನೇ’; ಚಿರು ನೆನೆದು ಭಾವುಕ ಪೋಸ್ಟ್ ಹಾಕಿದ ಅರ್ಜುನ್​ ಸರ್ಜಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts