More

    ಟೀಮ್ ಇಂಡಿಯಾ ಮೆಂಟರ್ ಹುದ್ದೆಗೆ ಧೋನಿ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತೇ?

    ನವದೆಹಲಿ: ಮುಂಬರುವ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಮೆಂಟರ್ ಆಗಿ ಕಾರ್ಯನಿರ್ವಹಿಸಲಿರುವ ಮಾಜಿ ನಾಯಕ ಎಂಎಸ್ ಧೋನಿ, ಇದಕ್ಕಾಗಿ ಯಾವುದೇ ಸಂಭಾವನೆ ಪಡೆದುಕೊಳ್ಳುವುದಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

    ಕಳೆದ ತಿಂಗಳು ಭಾರತ ತಂಡವನ್ನು ಪ್ರಕಟಿಸುವ ಸಮಯದಲ್ಲೇ 40 ವರ್ಷದ ಧೋನಿ ಅವರನ್ನು ಮೆಂಟರ್ ಆಗಿ ನೇಮಿಸಲಾಗಿತ್ತು. 2007ರ ಚೊಚ್ಚಲ ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿರುವ ಧೋನಿ, ಐಪಿಎಲ್‌ನಲ್ಲೂ ಸಿಎಸ್‌ಕೆ ತಂಡವನ್ನು 3 ಬಾರಿ ಚಾಂಪಿಯನ್, 9 ಬಾರಿ ಫೈನಲ್‌ಗೆ ಮತ್ತು 11 ಬಾರಿ ಪ್ಲೇಆಫ್​ ಹಂತಕ್ಕೇರಿಸಿದ ಸಾಧನೆ ತೋರಿದ್ದಾರೆ. ಅವರ ಈ ಚುಟುಕು ಕ್ರಿಕೆಟ್ ಅನುಭವವನ್ನು ಬಳಸಿಕೊಳ್ಳಲು ಮೆಂಟರ್ ಆಗಿ ನೇಮಿಸಲಾಗಿದೆ.

    ‘ಮೆಂಟರ್ ಆಗಿ ಟೀಮ್ ಇಂಡಿಯಾಗೆ ಸೇವೆ ಸಲ್ಲಿಸುವುದಕ್ಕಾಗಿ ಧೋನಿ ನಯಾಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಷಾ ಕೂಡ ಸ್ಪಷ್ಟಪಡಿಸಿದ್ದಾರೆ.

    ಐಪಿಎಲ್ ಆರೆಂಜ್ ಕ್ಯಾಪ್​​ಗೆ ನಿಕಟ ಪೈಪೋಟಿ, ರಾಹುಲ್‌ಗೆ ಮೂವರಿಂದ ಸವಾಲು

    ಬೆಂಗಳೂರಿನಲ್ಲಿ ಎಂಎಸ್ ಧೋನಿ ಕ್ರಿಕೆಟ್ ಅಕಾಡೆಮಿ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts