More

    2007ರ ಟಿ20 ವಿಶ್ವಕಪ್ ಫೈನಲ್‌ಗೂ ಮುನ್ನ ಧೋನಿ ಮಾಡಿದ್ದ ಟೀಮ್ ಮೀಟಿಂಗ್ ಎಷ್ಟು ನಿಮಿಷ ಗೊತ್ತ..?

    ನವದೆಹಲಿ: ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಕ್ಯಾಪ್ಟನ್ ಕೂಲ್ ಎಂದೇ ಹೆಸರು ವಾಸಿಯಾಗಿದ್ದರು. ಭಾರತ ತಂಡಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ನಾಯಕ ಧೋನಿ, ಅವರ ನಾಯಕತ್ವದ ಯಶಸ್ವಿಗೆ ಅವರು ಬೌಲರ್‌ಗಳ ಮೇಲಿದ್ದ ಹಿಡಿತವಂತೆ. ಹೀಗೆಂದು ಭಾರತ ತಂಡದ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ಹೇಳಿಕೊಂಡಿದ್ದಾರೆ. 2007ರಲ್ಲಿ ಧೋನಿ ಬೌಲರ್‌ಗಳಿಗೆ ಸಾಕಷ್ಟು ತಿಳಿ ಹೇಳುತ್ತಿದ್ದರು, ಅದೇ 2013ರಲ್ಲಿ ಬೌಲರ್‌ಗಳನ್ನು ಸಂಪೂರ್ಣವಾಗಿ ನಂಬಿದ್ದರು ಎಂದು ಪಠಾಣ್ ಹೇಳಿದ್ದಾರೆ. ಇದರಿಂದಲೇ ಧೋನಿ ಕೂಲ್ ನಾಯಕನಾಗಿ ಕಾಣಿಸಿಕೊಂಡರು. 2007ರ ಟಿ20 ವಿಶ್ವಕಪ್ ಫೈನಲ್‌ಗೂ ಮುನ್ನ ಧೋನಿ ಕೇವಲ 5 ನಿಮಿಷದಲ್ಲೇ ಟೀಮ್ ಮೀಟಿಂಗ್ ಮುಗಿಸಿದ್ದರಂತೆ.

    ಇದನ್ನೂ ಓದಿ: ನಟಿ ಮಹಿರಾ ಜತೆ ಶೋಯಿಬ್ ಮಲಿಕ್ ಫ್ಲರ್ಟ್, ಸಾನಿಯಾ ಗರಂ!

    2007ರ ಟಿ20 ವಿಶ್ವಕಪ್ ಫೈನಲ್‌ಗೂ ಮುನ್ನ ಧೋನಿ ಮಾಡಿದ್ದ ಟೀಮ್ ಮೀಟಿಂಗ್ ಎಷ್ಟು ನಿಮಿಷ ಗೊತ್ತ..?35 ವರ್ಷದ ಇರ್ಫಾನ್ ಪಠಾಣ್, ಧೋನಿ ನಾಯಕತ್ವದಡಿ 2007ರ ಟಿ20 ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿ ವಿಜೇತ ತಂಡಗಳ ಭಾಗವಾಗಿದ್ದರು. 2007ರಲ್ಲಿ ದೊಡ್ಡ ಜವಾಬ್ದಾರಿ ಹೊತ್ತುಕೊಂಡ ಧೋನಿ, ದಿನ ಕಳೆದಂತೆ ನಾಯಕತ್ವದಲ್ಲಿ ಸದೃಢರಾದರು. 2007ರ ಟಿ20, 2013 ಚಾಂಪಿಯನ್ಸ್ ಟ್ರೋಫಿ ಫೈನಲ್‌ಗಾಗಿ ಕೇವಲ 5 ನಿಮಿಷದಲ್ಲೇ ಟೀಮ್ ಮೀಟಿಂಗ್ ಮುಗಿಸಿದ್ದರು ಎಂದು ಪಠಾಣ್ ಹೇಳಿದ್ದಾರೆ. 2007ರ ವೇಳೆ ಧೋನಿ ಬೌಲರ್ ಬಳಿ ಓಡಿ ಬಂದು ಟಿಪ್ಸ್ ನೀಡುತ್ತಿದ್ದರು, ಅದೇ 2013ರಲ್ಲಿ ನಿಂತಲ್ಲಿಯೇ ಕಂಟ್ರೋಲ್ ಮಾಡುತ್ತಿದ್ದರು ಎಂದು ಇತ್ತೀಚೆಗೆ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ ಪಠಾಣ್ ಹೇಳಿದ್ದಾರೆ.

    ಇದನ್ನೂ ಓದಿ: ತಂಡದಿಂದ ಕೈಬಿಟ್ಟಿದ್ದಕ್ಕೆ ಬೇಸರವಾಗಿತ್ತು

    2019ರ ಏಕದಿನ ವಿಶ್ವಕಪ್ ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ಬಳಿಕ ಧೋನಿ ಕ್ರಿಕೆಟ್‌ನಿಂದ ದೂರವಿದ್ದಾರೆ. 2007 ರಿಂದ 2016ರವರೆಗೆ ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡ ಮುನ್ನಡೆಸಿದ್ದ ಧೋನಿ, 2008 ರಿಂದ 2014 ರವರೆಗೆ ಟೆಸ್ಟ್ ತಂಡಕ್ಕೆ ನಾಯಕತ್ವ ವಹಿಸಿಕೊಂಡಿದ್ದರು. 38 ವರ್ಷದ ಧೋನಿ ಮೂರು ಐಸಿಸಿ ಟ್ರೋಫಿ ಜಯಿಸಿರುವ ವಿಶ್ವದ ಏಕೈಕ ನಾಯಕ ಎನಿಸಿಕೊಂಡಿದ್ದಾರೆ.

    ಬುಲ್‌ಬುಲ್ ಸಿನಿಮಾ ವಿಮರ್ಶೆ ಬರೆದ ವಿರಾಟ್ ಕೊಹ್ಲಿ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts